ದಿಶಾ ಶಾಲೆಗೆ ಸಿ.ಬಿ.ಎಸ್.ಸಿ ಶಿಕ್ಷಣಕ್ಕೆ ಮಾನ್ಯತೆ
ಶಿಗ್ಗಾವಿ : 2019-20 ರಲ್ಲಿ ಮಲ್ಲಮ್ಮ ಬೇವಿನಮರದ ಟ್ರಸ್ಟ್ ಅಡಿಯಲ್ಲಿ ದಿಶಾ ಇಂಟರ್ನ್ಯಾಷನಲ್ ಶಾಲೆ ಪ್ರಾರಂಬಿಸಿದಾಗ ಬೆರಳೆಣಿಕೆಯಷ್ಟು ಮಕ್ಕಳ್ಳಿದ್ದರು ಆದರೆ ಇಂದು 975 ಕ್ಕಿಂತ ಹೆಚ್ಚಿನ ಮಕ್ಕಳು ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಅದಕ್ಕೆ ಪಾಲಕರು ಮತ್ತು ಪೋಷಕರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಟ್ರಸ್ಟ್ ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ದಿಶಾ ಶಾಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 2025-26 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ನಮ್ಮ ಶಾಲೆಗೆ ದೆಹಲಿಯಿಂದ ಸಿ.ಬಿ.ಎಸ್.ಸಿ ಶಿಕ್ಷಣಕ್ಕೆ ಮಾನ್ಯತೆ ನೀಡಿದೆ ಶಿಗ್ಗಾವಿ, ಸವಣೂರ, ಬಂಕಾಪೂರ ಸೇರಿದಂತೆ ಸುತ್ತಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಮ್ಮ ಶಾಲೆಯಲ್ಲಿ ಪಿ.ಯು.ಸಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ನೀಟ್, ಸಿ.ಇ.ಇ, ಜೆ.ಇ.ಇ ಪ್ರತ್ಯೇಕ ವಿಶೇಷ ತರಗತಿಗಳ ಮೂಲಕ ಮಕ್ಕಳ ಜ್ಞಾನಾಭಿವೃದ್ದಿಯನ್ನು ಹೆಚ್ಚಿಸುವುದು, 2019 ರಿಂದ ಇಲ್ಲಿಯವರೆಗೆ 6 ಭಾರಿ ಕರ್ನಾಟಕ ಅರ್ಚಿವರ್ಸ ಬುಕ್ ಆಫ್ ರೆಕಾರ್ಡ್ ಹಾಗೂ 1 ಭಾರಿ ಇಂಡಿಯಾ ಅರ್ಚಿವರ್ಸ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನವಾಗಿದೆ ಸಂಸ್ಥೆ, ಮಕ್ಕಳ ಜ್ಞಾನ ಭಂಡಾರ ಹೆಚ್ಚಿಸಲು 3 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಹೊಂದಿದ ಗ್ರಂಥಾಲಯ ಪ್ರಾರಂಭ ಗೊಂಡಿದೆ, ಸ್ವಚ್ಚತಾ ಸಪ್ತಾಹ ಯೋಜನೆಯಡಿ ತಾಲೂಕಿನ ಕುಂದೂರ, ಹಿರೇಮಲ್ಲೂರ ಪ್ಲಾಟ, ಹನುಮರಹಳ್ಳಿ ಗ್ರಾಮಗಳ ಸರಕಾರಿ ಶಾಲೆ ದತ್ತು ಪಡೆದು ಆ ಶಾಲೆಗಳ ಆವರಣ ಸ್ವಚ್ಚಗೋಳಿಸಿ, ಸುಣ್ಣ, ಬಣ್ಣ ಹಚ್ಚಿ, ಗ್ರಂಥಾಲಯಗಳಿಗೆ ಪುಸ್ತಕ ನೀಡುವ ವಿನೂತನ ಕಾರ್ಯಕ್ರಮ ಕಳೆದ 3 ವರ್ಷಗಳಿಂದ ಮಾಡುತ್ತಿದ್ದೇವೆ ಎಂದರು.
2025 ಶೈಕ್ಷಣಿಕ ವರ್ಷದಿಂದ ಸುಮಾರು 750 ಬಾಲಕರಿಗೆ ಹಾಗೂ 400 ಬಾಲಕಿಯರಿಗೆ ವಸತಿ ನಿಲಯ, ಗಣಿತ ಮತ್ತು ಇತಿಹಾಸ ಪ್ರಯೋಗಾಲಯ ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯವಿಲ್ಲದೇ ಆರ್ಟಿಪಿಶೇಲ್ ಇಂಟಲಿಜನ್ಸ್ ಹಾಗೂ ರೋಬೋಟಿಕ್ ಪ್ರಯೋಗಾಲಯ ಪ್ರಾರಂಭಿಸುತ್ತೇವೆ ಎಂದರು.