ದಿಶಾ ಇಂಟರನ್ಯಾಶನಲ್ ಫಲಿತಾಂಶ ಶೇ 100 ರಷ್ಟು

Disha International results 100 percent

ಶಿಗ್ಗಾವಿ 10: ಪಟ್ಟಣದ ದಿಶಾ ಇಂಟರ್‌ನ್ಯಾಷನಲ್ ಪದವಿಪೂರ್ವ ವಿಜ್ಞಾನ ವಿಭಾಗ ಕಾಲೇಜಿನ 2024-25ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಫಲಿತಾಂಶ ಶೇ.94.3 ರಷ್ಟಾಗಿದೆ. ಪರೀಕ್ಷೆಗೆ ಕುಳಿತ 48 ವಿದ್ಯಾರ್ಥಿಗಳು ಪಾಸಾಗುವ ಮೂಲಕ 100ಅ ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದೆ. 

ವಿಜ್ಞಾನ ವಿಭಾಗದಲ್ಲಿ ಕಾಲೇಜು ಮತ್ತು ತಾಲೂಕಿಗೆ ಬಸೀರಾ ಖಾಜೇಖಾನವರ ಶೇ.94.3 ಪ್ರಥಮ, ಚಂದ್ರಕಲಾ ಹರಿಗೊಂಡ 93.8 ದ್ವಿತೀಯ, ಶಂಕರಗೌಡ ಪಾಟೀಲ 92.16 ತೃತೀಯ, ಅಧಿತಿ ರಾಶೀನಂಕರ ಶೇ91.50 ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಹೆಚ್ಚು ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಲು ಕಾರಣರಾದ ಉಪನ್ಯಾಸಕ, ಸಿಬ್ಬಂದಿಗೆ ಸಂಸ್ಥಾಪಕ ಅಧ್ಯಕ್ಷರು, ಗಡಿ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ ಅಭಿನಂದನೆ ಸಲ್ಲಿಸಿದ್ದಾರೆ.