ರಾಗದಿಂದ ರೋಗ ಮುಕ್ತಿ ಸಂಗೀತ ಕಾರ್ಯಕ್ರಮ

ಬೆಳಗಾವಿ 19: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಮತ್ತು ಅವರ ಜೊತೆಗಾರರು ವಚನ ಗಾಯನ, ಸುಗಮ ಸಂಗೀತ ಮತ್ತು ಕರ್ನಾಟಕ ಸಂಗೀತ ಕೇಳಿ ಪುಳಕಿತಗೊಂಡರು. ಒಂದು ಗಂಟೆಗಳ ಕಾಲ ಎಲ್ಲ ನೋವುಗಳನ್ನು ಮರೆತು ಸಂಗೀತಲೋಕದಲ್ಲಿ ಮೈಮರೆತರು.  

ಕೆಎಲ್‌ಇ ವಿಶ್ವವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸಂಗೀತ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಿದ್ದ, ಮೆಲೋಡಿ ವರ್ಸಸ್ ಮೆಲೋಡಿ ಎಂಬ ರಾಗದಿಂದ ರೋಗ ಮುಕ್ತಿ ಕಾರ್ಯಕ್ರಮ ಆಸ್ಪತ್ರೆಯಲ್ಲಿ ನೆರವೇರಿತು. ಸಂಗೀತ ವಿದ್ಯಾಲಯದ ಯಾದವೇಂದ್ರ  ಪೂಜಾರಿಯವರ  ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು  ವಾದ್ಯ ನುಡಿಸುತ್ತಾ  ಸಂಗೀತವನ್ನು ಪ್ರಸ್ತುತಪಡಿಸಿದರು. ವಾಸುದೇವ ಸುತಾರ್ ಇವರು ಶಾಸ್ತ್ರೀಯ ಸಂಗೀತ ಮತ್ತು ಗಜಲ್ ಪ್ರಸ್ತುತಪಡಿಸಿದರು  

ಸಮೃದ್ಧಿ ಜಾದವ್  ವಾಯ್ಲಿನ್, ಜ್ಯೋತಿ ಬಿರಾದಾರ್  ಭಾವಗೀತೆ, ಪ್ರತಿಭಾ ಕಳ್ಳಿಮಠ, ಅಶ್ವಿನಿ ಅಸುಂಡಿ,  ಭಾರತಿ ಗಡಕರಿ ಮತ್ತು ಅನುಷ್ಕ ಅವರು ಹಾರ್ಮೋನಿಯಂ ಮೇಲೆ  ಭೂಪರಾಗದ ವಚನ ಮತ್ತು ಬಂದಿಶ್  ಪ್ರಸ್ತುತಪಡಿಸಿದರು.   

ರಾಹುಲ್ ಮಂಡೂಲ್ಕರ್ ತಬಲಾ ಸಾತ್ ನೀಡಿದರು. ಕೆ ಎಲ್ ಈ ಸಂಗೀತ ವಿದ್ಯಾಲಯದ ಕೋ ಆರ್ಡಿನೇಟರ್ ಡಾ.ರಾಜೇಂದ್ರ  ಭಾಂಡನ್ಕರ್, ರಾಜಾರಾಮ್ ಅಂಬೇಡ್ಕರ್, ದುರ್ಗಾ ನಾಡಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.