ಬೀಜೋಪಚಾರದಿಂದ ರೋಗ ಮುಕ್ತ ಬೆಳೆ

ಬೆಳಗಾವಿ, 30: ರೈತರು ಬಿತ್ತನೆ ಬೀಜಕ್ಕೆ ರೋಗ ನಾಶಕ ಹಾಗೂ ಜೈವಿಕ ಪರಿಕರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಮಣ್ಣಿನಿಂದ ಹಾಗೂ ಬೀಜದಿಂದ ಬರುವ ಅನೇಕ ಬಗೆಯ ರೋಗಗಳನ್ನು ತಡೆಗಟ್ಟಬಹುದು ಎಂದು ಬೆಳಗಾವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ವಜ್ರೇಶ್ವರಿ ಕುಲಕಣರ್ಿ ತಿಳಿಸಿದರು. 

ಇತ್ತೀಚೆಗೆ ತಾಲೂಕಿನ ಅವಚಾರಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ತರಬೇತಿಯಲ್ಲಿ ರೈತರಿಗೆ ಮಾಹಿತಿ ನೀಡುತ್ತ ತಾಲೂಕಿನಲ್ಲಿ ಭತ್ತ ಹಾಗೂ ಸೋಯಾಅವರೆ ಬಿತ್ತನೆಗಾಗಿ ರೈತರು ಭೂಮಿ ಸಿದ್ದಪಡಿಸಿಕೊಂಡಿದ್ದು, ಉತ್ತಮ ಮಳೆಗಾಗಿ  ಕಾಯುತ್ತಿದ್ದಾರೆ ಎಂದರು. 

ಬಿತ್ತನೆಗೆ ಮೊದಲು ಬೀಜವನ್ನು ಕೆಲವು ರಸಾಯನಿಕ ಹಾಗೂ ಜೈವಿಕ ರೋಗನಾಶಕವಾದ ಟ್ರೈಕೋಡಮರ್ಾಗಳಿಂದ ಉಪಚರಿಸಿ ಬಿತ್ತಿದರೆ ಸಸಿ ಕೊಳೆ ಬುಡ ಕೊಳೆ, ಸಿಡಿ ರೋಗ ಇತ್ಯಾದಿಗಳಿಂದ ಬೆಳೆಯನ್ನು ರಕ್ಷಿಸಿ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

  ಈ ಸಂದರ್ಭದಲ್ಲಿ ಸೋಯಾಅವರೆ ಹಾಗೂ ಭತ್ತದ ಬೀಜಕ್ಕೆ ಬೀಜೋಪಚಾರ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು. ಇಂಡೋಫಿಲ್ ಸಂಸ್ಥೆಯಲ್ಲಿ ತಜ್ಞರಾದ ಮಂಜೇಗೌಡ ಅವರು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

  ಕೃಷಿ ಇಲಾಖೆ ಬೆಳಗಾವಿಯ ತಾಂತ್ರಿಕ ವ್ಯವಸ್ಥಾಪಕರಾದ ರಾಜಶೇಖರ ಭಟ್ಟ ಅವರು  ಕೀಟನಾಶಕಗಳನ್ನು ಸುರಕ್ಷಿತವಾಗಿ  ಬಳಕೆ ಮಾಡುವ ನಿಟ್ಟಿನಲ್ಲಿ ರೈತರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ ನಡೆಸಿಕೊಟ್ಟರು. 

ಸಹಾಯಕ ಕೃಷಿ ನಿದರ್ೇಶಕರಾದ ಜಿ ಬಿ ಕಲ್ಯಾಣಿ ಅವರು ತಾಂತ್ರಿಕ ಮಾರ್ಗದರ್ಶನ ನೀಡಿದರು. ಅಧಿಕಾರಿಗಳಾದ  ಪಿ ಎಸ್ ಪಾಂಡ್ರೆ, ಗ್ರಾಮದ ಹಿರಿಯ ರೈತರಾದ ವಿಠ್ಠಲ ಕುರಂಗಿ ಹಾಗೂ ಇತರರು ಹಾಜರಿದ್ದರು.