ಲೋಕದರ್ಶನ ವರದಿ
ಕೊಪ್ಪಳ 03: ರಾಜ್ಯ ಮಟ್ಟದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ದಿ. ಜೂನ್ 30ರ ಸಭೆಯಲ್ಲಿ ಅಂಗಿಕರಿಸಲಾಯಿತು. ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಹಂತ ಹಂತವಾಗಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾಧ್ಯಕ್ಷ ಶರಣ ಬಸವನ ಗೌಡ ಪಾಟೀಲ್ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಜೂನ್ 30ರಂದು ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರಿನಲ್ಲಿ ಕಾರ್ಯಕಾರಿ ಸಮಿತಿ ಸಭೆ ಜರುಗಿತು ಸಭೆಯಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಅಧ್ಯಕ್ಷರು ಹಾಗೂ ಕಾರ್ಯದಶರ್ಿಗಳು ಭಾಗವಹಿಸಿ ಸಭೆಯಲ್ಲಿ ರಾಜ್ಯದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸುದಿರ್ಘವಾಗಿ ಚರ್ಚೆ ಸಲಾಯಿತು, ವಿಶೇಷವಾಗಿ ವಗರ್ಾವಣೆ ಪದವಿಧರ ಶಿಕ್ಷಕರ ಸಮಸ್ಯೆಗಳ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ಸೂಕ್ತ ಪರಿಹಾರಕ್ಕಾಗಿ ಅಗ್ರಹಿಸಲಾಯಿತು ಎಂದರು.
ಮುಖ್ಯವಾದ 9 ಬೇಡಿಕೆಗಳು ಸರಕಾರದ ಮುಂದೆ ಇಟ್ಟಿದ್ದೇವೆ ಸರಕಾರ ನಮ್ಮ ಬೇಡಿಕೆಗಳು ಈಡೇರಸದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದಾದ್ಯಂತ ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಉಗ್ರವಾದ ಹೋರಾಟ ಕೈಗೋಳ್ಳುತ್ತೇವೆ ಮೊದಲನೆ ಹಂತವಾಗಿ ಮೇ 31ರಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದೆವೆ, ಎರಡನೆ ಹಂತವಾಗಿ ಜುಲೈ 9ರಂದು ಜಿಲ್ಲೆಯ ಶಿಕ್ಷರನ್ನು ಸೇರಿಸಿ ಬೇಡಿಕೆಗಳ ಈಡೇರಿಕೆಗೆ ಬೃಹತ್ ರ್ಯಾಲಿಯ ಮೂಲಕ ಹಕ್ಕೂತ್ತಾಯ ಮಾಡುತ್ತೇವೆ. ನಂತರ ಮೂರನೆ ಹಂತವಾಗಿ ಆಕ್ಟೋಬರ್ 05ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಅವಕಾಶ ಮಾಡಿಕೊಡದೆ ಸರಕಾರ ನಮ್ಮ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇಸಬೇಕು ಎಂದು ಹೇಳಿದರು ಈಸಂದರ್ಭದಲ್ಲಿ ಶಿಕ್ಷಕರಾದ ನಿಂಗಪ್ಪ ಗುನ್ನಾಳ, ನಂಜುಂಡಪ್ಪ ಸುರೇಶ ಅರಕೇರಿ, ಕಾಳಪ್ಪ, ಶಿಕ್ಷಕಿಪೂಣರ್ಿಮ ಇನ್ನು ಮುಂತಾದವರು ಉಪಸ್ಥಿತರಿದ್ದರು.