ಕೃಷಿ ಇಲಾಖೆಯಲ್ಲಿ ನಡೆದ ಅವ್ಯವಹಾರ ಕುರಿತು ಚರ್ಚೆ

ಲೋಕದರ್ಶನ ವರದಿ

ರಾಯಬಾಗ 03: ತಾಲೂಕು ಪಂಚಾಯತ ಸಭಾಭವನದಲ್ಲಿ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ಸಾಮಾನ್ಯ ಸಭೆಜರುಗಿತು. 

ಸಭೆಯಲ್ಲಿ ಕೃಷಿ ಸಹಾಯಕ ನಿದೇರ್ಶಕರ ಗೈರು ಹಾಜರಿಯಲ್ಲಿ ಕಿರಿಯ ಅಧಿಕಾರಿಗಳು ಸಭೆಗೆ ಹಾಜರಾಗಿ ಮಾಹಿತಿ ನೀಡುತ್ತಿದ್ದಂತೆ ತಾ.ಪಂ. ಸದಸ್ಯ ನಾಮದೇವ ಕಾಂಬಳೆ ಕೃಷಿ ಇಲಾಖೆಯಲ್ಲಿ ನಡೆದ ಅವ್ಯವಹಾರಗಳ ಕುರಿತು ಪ್ರಶ್ನೆ ಮಾಡಿ, ರಾಯಬಾಗ ಕಂದಾಯ ನಿರೀಕ್ಷಕರೊಬ್ಬರು ಸರಕಾರಿ ಅಧಿಕಾರಿಯಾಗಿದ್ದರೂ, ಕೃಷಿ ಇಲಾಖೆಯವರು ಅವರಿಗೆ ಕೃಷಿ ಹೊಂಡ ಮಂಜೂರು ಮಾಡಿ, ಬಿಲ್ ಪಾಸ್ ಮಾಡಿದ್ದಾರೆ. ಸರಕಾರದ ಹಣ ಅರ್ಹ ರೈತ ಫಲಾನುಭವಿಗಳಿಗೆ ದೊರಕುವ ಬದಲಾಗಿ ಸರಕಾರಿ ನೌಕರರಿಗೆ ಸಿಗುವಂತೆ ಮಾಡಿ, ಸರಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದುಗಂಭೀರವಾಗಿ ಆರೋಪಿಸಿ, ಸಭೆಯಲ್ಲಿ ದಾಖಲೆಗಳನ್ನು ಪ್ರದರ್ಶಿಸಿದರು.

ತಾ.ಪಂ.ಸದಸ್ಯರಆರೋಪಕ್ಕೆ ಸಮಜಾಹಿಸಿ ಉತ್ತರಿಸಲು ತಡಬಡಿಸಿದ ಅಧಿಕಾರಿಗಳು, ಸರಕಾರಿ ನೌಕರರುಕೂಡ ಕೃಷಿ ಹೊಂಡ ನಿರ್ಮಿಸಿಕೊಂಡು ಸರಕಾರದ ಸೌಲಭ್ಯ ಪಡೆಯಲು ಕೃಷಿ ಇಲಾಖೆಯಲ್ಲಿಅವಕಾಶವಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೃಷಿ ಹೊಂಡ ಫಲಾನುಭವಿಗಳು ಹಾಜರು ಪಡಿಸಿದ ದಾಖಲೆಗಳನ್ನು ನೀಡಲು ಬರುವುದಿಲ್ಲವೆಂದು ಹೇಳುತ್ತಿದ್ದಂತೆ ಸಭೆಯಲ್ಲಿ ಏರುಧ್ವನಿಯಲ್ಲಿ ಸದಸ್ಯರು ಅಧಿಕಾರಿಯ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸಿ, ಕೃಷಿ ಇಲಾಖೆ ಕಚೇರಿಯಲ್ಲಿಏಜೆಂಟರ್ ಹಾವಳಿ ಹೆಚ್ಚಿದ್ದು, ಏಜೆಂಟರ್ ಮೂಲಕ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ತಾ.ಪಂ.ಇಒ ಪ್ರಕಾಶ ವಡ್ಡರ, ಅಧಿಕಾರಿಗಳ ಮತ್ತು ತಾ.ಪಂ.ಸದಸ್ಯರ ಒಳಗೊಂಡ ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಸಮಾಜ ಕಲ್ಯಾಣಾಧಿಕಾರಿಗಳು ಸರಕಾರಿ ವಾಹನವನ್ನುತಮ್ಮ ಸ್ವಂತ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ನಿಮರ್ಿಸುತ್ತಿರುವ ಕಟ್ಟಡಗಳು ಕಳಪೆ ಕಾಮಗಾರಿಗಳಿಂದ ಕೂಡಿವೆ ಎಂದು ಅಧ್ಯಕ್ಷರು ಮತ್ತು ಸದಸ್ಯ ಶ್ರವಣ ಕಾಂಬಳೆ ಆರೋಪಿಸಿದರು.

ರಾಯಬಾಗ ಪ್ರೌಢ ಶಾಲೆ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವತರ್ಿಸಿದ್ದರಿಂದ ಆ ವಿದ್ಯಾರ್ಥಿನಿ ಪೊಲೀಸ್ಠಾಣೆಗೆ ಹೋಗಿ ದೂರ ದಾಖಲಿಸಿದ್ದು, ಅಸಭ್ಯವಾಗಿ ವರ್ತಿಸಿದ ಶಿಕ್ಷಕನ ವಿರುದ್ಧ ಏನು ಕ್ರಮಕೈಗೊಂಡಿದ್ದಿರಿಎಂದುಅಧ್ಯಕ್ಷೆ ಸುಜಾತಾ ಪಾಟೀಲ ಅವರು ಬಿಇಒ ಅವರನ್ನು ಪ್ರಶ್ನಿಸಿದಾಗ, ಅಭ್ಯಾಸದಕುರಿತು ಶಿಕ್ಷಕರು ಸ್ವಲ್ಪ ಬೇದರಿಸಿದ್ದಾರೆ ಹೊರತುಅಂತಹಗಂಭೀರವಾದಘಟನೆ ನಡೆದಿಲ್ಲವೆಂದು ಶಿಕ್ಷಕರನ್ನು ಸಮರ್ಥಿಸಿಕೊಂಡು ಹಾರಿಕೆಉತ್ತರ ನೀಡಿ, ನುಚಿಕೊಂಡರು. ಲೋಕೋಪಯೋಗಿ ಇಲಾಖೆಯಡಿ ನಿಮರ್ಿಸುತ್ತಿರುವ ರಸ್ತೆಗಳು ಕಳೆಪೆ ಮಟ್ಟದ್ದಾಗಿದ್ದು, ರಸ್ತೆ ಬದಿಯಲ್ಲಿಗರಸ ಹಾಕುವ ಬದಲಾಗಿಧೂಸ್ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ.ಇದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.ಇನ್ನು ಕೆಲವು ರಸ್ತೆಗಳ ಕಾಮಗಾರಿಗಳನ್ನು ಪ್ರಾರಂಭಿಸಿಲ್ಲವೆಂದು ಸದಸ್ಯರಾದ ಅಶೋಕ ಬಾನಸಿ ಮತ್ತು ಶ್ರವಣ ಕಾಂಬಳೆ ಆರೋಪಿಸಿದರು.

ಬಾವನ ಸೌಂದತ್ತಿ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿನ ಟೀಚರ ಮತ್ತು ಸಹಾಯಕಿಯರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡದೇ ಮಕ್ಕಳ ಆಹಾರವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಬಾ.ಸೌಂದತ್ತಿ ಸದಸ್ಯರು ಆರೋಪಿಸಿದರು. ಸಾರಿಗೆ ಘಟಕದ ವ್ಯವಸ್ಥಾಪಕರು ತಾಲೂಕಿನಲ್ಲಿನ ಸಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆ ಹರಿಸುತ್ತಿಲ್ಲ. ಜಲಾಲಪೂರ, ಸುಟ್ಟಟ್ಟಿ, ಭಿರಡಿ, ದಿಗ್ಗೇವಾಡಿ ಗ್ರಾಮಗಳ ಸೇರಿದಂತೆಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ಗಳನ್ನು ಬೀಡುತ್ತಿಲ್ಲವೆಂದು ಸದಸ್ಯರು ಆರೋಪಿಸಿದ್ದಂತೆ ತಾ.ಪಂ.ಇಒ ಅವರುಕೂಡಘಟಕದ ವ್ಯವಸ್ಥಾಪಕರ ವಿರುದ್ಧಗರಂ ಆಗಿ, ಸಂತೆ ದಿವಸ ಸಂಪೂರ್ಣ ಬಸ್ ನಿಲ್ದಾಣ ಕುರಿಗಳ ಸಂತೆಯಾಗಿ ಮಾರ್ಪಡುತ್ತದೆ. ಚಿಂಚಲಿ ರಸ್ತೆಯಲ್ಲಿಕಾಯಿಪಲ್ಲೆ ವ್ಯಾಪರಸ್ಥರುರಸ್ತೆ ಅಕ್ಕಪಕ್ಕ ಕುಳಿತು ವ್ಯಾಪರ ಮಾಡುವುದರಿಂದ ಸಂಚರಿಸಲುತೊಂದರೆಆಗುತ್ತಿದೆಇದರ ಬಗ್ಗೆ ಏನೂ ಕ್ರಮಕೈಗೊಂಡಿದ್ದಿರಿಎಂದು ಪ್ರಶ್ನಿಸಿ, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಕಟ್ಟುನಿಟ್ಟಿನಿಂದಕರ್ತವ್ಯ ನಿರ್ವಹಿಸಬೇಕೆಂದುತಾಕೀತು ಮಾಡಿದರು. 

ಸಭೆಕೊನೆಯಲ್ಲಿ ಅಧ್ಯಕ್ಷೆ ಸುಜಾತಾ ಪಾಟೀಲ ಮತ್ತು ಇಒ ಪ್ರಕಾಶ ವಡ್ಡರಅವರ ಮಧ್ಯೆಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆದು, ಇಒ ಅವರು ಸವರ್ಾಧಿಕಾರಧೋರಣೆ ನಡೆಸುತ್ತಿದ್ದಾರೆ.ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆತಾ.ಪಂ.ಯಲ್ಲಿ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂಅವರಿಗೆ ಶೌಚಾಲಯ ಮತ್ತುಕುಡಿಯುವ ನೀರಿನ ವ್ಯವಸ್ಥೆ ಮಾಡಲುತಾ.ಪಂ.ಇಒ ಅವರು ನಿರ್ಲಕ್ಷಧೋರಣೆ ತಾಳುತ್ತಿದ್ದಾರೆ. ಅಧ್ಯಕ್ಷರ ಗಮನಕ್ಕೆ ತಾರದೇಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುತ್ತಿದ್ದು, ಅಧ್ಯಕ್ಷರ ಹಕ್ಕುಚ್ಯುತಿ ಮಾಡುತ್ತಿದ್ದಾರೆದಾಂಗ, ಆರೋಪ ತಳ್ಳಿ ಹಾಕಿದ ಇಒ ಅವರು, ಆಡಳಿತಾತ್ಮಕವಾದ ಕರ್ತವ್ಯ ನಿರ್ವಹಿಸುತ್ತಿರುವಾಗ, ಸರಿಯಾಗಿಕರ್ತವ್ಯ ನಿರ್ವಹಸದೇಇರುವ ಅಧಿಕಾರಿಗಳನ್ನು ಬದಲಿಸುವ ಅಧಿಕಾರಿತಮಗೆಇದ್ದು, ಭ್ರಷ್ಟಾಚಾರರಹಿತ ಆಡಳಿತ ನೀಡುವುದು ನನ್ನಕರ್ತವ್ಯ.ತಮ್ಮ ಮೇಲೆ ಆರೋಪಗಳಿದ್ದರೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಹೇಳಿದರು.

ಸಭೆಯಲ್ಲಿತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ, ಉಪಾಧ್ಯಕ್ಷೆ ಸವಿತಾ ನಾಯಿಕ, ತಾ.ಪಂ.ಇಒ ಪ್ರಕಾಶ ವಡ್ಡರ, ಸದಸ್ಯರಾದ ನಾಮದೇವ ಕಾಂಬಳೆ, ಅಶೋಕ ಬಾನಸಿ, ಶ್ರೀಧರ ಕುಡಚೆ, ಬಸಪ್ಪಕಿಚಡೆ, ಶ್ರವಣ ಕಾಂಬಳೆ, ಮಹಾದೇವ ಮಾರಾಪೂರ, ತುಕಾರಾಮ ಪೂಜೇರಿ, ಚೌಗೌಡ ಪಾಟೀಲ ಹಾಗೂ ತಾಲೂಕು ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.