ಗುತ್ತಿಗೆ ಪೌರ ಕಾರ್ಮಿಕರ ಆಯ್ಕೆಯಲ್ಲಿ ತಾರತಮ್ಯ: ಸಚಿವರಿಗೆ ಮನವಿ

ಲೋಕದರ್ಶನವರದಿ

ರಾಣೇಬೆನ್ನೂರು ಜೂ.26:  ಇಲ್ಲಿನ ನಗರಸಭೆಯಲ್ಲಿ ಹೊರ ಗುತ್ತಿಗೆ ಪೌರ ಕಾಮರ್ಿಕರ ಆಯ್ಕೆಯಲ್ಲಿ ಉಂಟಾದ ತಾರತಮ್ಯ ಸರಿಪಡಿಸಬೇಕು, ಆಯ್ಕೆಯಲ್ಲಿ ಅನೇಕ ಖೊಟ್ಟಿ ಪ್ರಮಾಣಪತ್ರ ನೀಡಿ ನೇಮಕವಾಗಿದ್ದನ್ನು ರದ್ದುಪಡಿಸಬೇಕು, ಅನ್ಯ ಜಾತಿಯವರೂ ನೇಮಕಾತಿಯಲ್ಲಿ ಆಯ್ಕೆಯಾಗಿರುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ನಗರಸಭೆ ಪೌರ ಕಾಮರ್ಿಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಬುಧವಾರ ಪೌರಾಡಳಿತ ಸಚಿವ ಆರ್. ಶಂಕರರವರಿಗೆ ಮನವಿ ಪತ್ರ ಅಪರ್ಿಸಿದರು.

   ಸಂಘದ ಅಧ್ಯಕ್ಷ ಕರಬಸಪ್ಪ ದಾಸಪ್ಪನವರ ಮಾತನಾಡಿ ನಗರಸಭೆಯಲ್ಲಿ 135 ಗುತ್ತಿಗೆ ಪೌರಕಾಮರ್ಿಕರಿದ್ದು, ಇದರಲ್ಲಿ 10ರಿಂದ15 ವರ್ಷ ಸೇವೆ ಸಲ್ಲಿಸಿದವರೂ ಸಹ ಇದ್ದಾರೆ. 

    ಇಂತಹ ಸಂದರ್ಭದಲ್ಲಿ ಕೇವಲ 2-3ವರ್ಷ ಸೇವೆ ಸಲ್ಲಿಸಿದ 15 ಕ್ಕೂ ಅಧಿಕ ಪೌರಕಾಮರ್ಿಕರನ್ನು ನೇಮಕ ಮಾಡಿರುವುದರಲ್ಲಿ ತಾರತಮ್ಯ ಉಂಟಾಗಿದೆ. ಶೀಘ್ರವೇ ಪೌರಕಾಮರ್ಿಕರ ಆಯ್ಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

   ಮಂಜುನಾಥ ಆರಿಕಟ್ಟಿ, ಮೈಲಪ್ಪ ದಾಸಪ್ಪನವರ, ಮಾಲತೇಶ ಬುಳ್ಳಪ್ಪನವರ, ಹನುಮಂತಪ್ಪ ನಡುವಿನಕೇರಿ, ರವಿ ಮೆಣಸಿನಹಾಳ, ಅರುಣ ಆಡೂರು, ಎಚ್ ಕಿರಣಕುಮಾರ, ಕುಮಾರ ಗೊಲ್ಲರ, ಶಿವಪ್ಪ ಕೊಪ್ಪದ, ಲಕ್ಷ್ಮಣ ಆರಿಕಟ್ಟಿ, ರಾಜು ಕರೇತಿಮ್ಮಣ್ಣನವರ ಸೇರಿದಂತೆ ಮತ್ತಿತರರು ಇದ್ದರು. ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು