ಪರಿಹಾರ ನೀಡುವಲ್ಲಿ ತಾರತಮ್ಯ : ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂತ್ರಸ್ಥರು

ಗುಳೇದಗುಡ್ಡ18: ಮಲಪ್ರಭಾ ನದಿಗೆ 2019 ರ ಅಗಷ್ಟ ತಿಂಗಳಲ್ಲಿ ಪ್ರವಾಹ ಬಂದು ಲಾಯದಗುಂದಿ ಗ್ರಾಮದ ಅನೇಕ ಕುಟುಂಬಗಳು ನೆರೆರಗೆ ತುತ್ತಾಗಿ ಸಂಕಷ್ಟದಲ್ಲಿದ್ದಾಗ ಅಧಿಕಾರಿಗಳು ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡದೇ ಹಾನಿಗೊಳಗಾದ ಕುಟುಂಬಗಳನ್ನು ಕೈಬಿಟ್ಟು ಹಾನಿಗೊಳಗಾಗದ  ಕುಟುಂಬಗಳಿಗೆ ಪರಿಹಾರ ನೀಡಿ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ಸಂತ್ರಸ್ಥರು ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ  ಮಾಡಿದ ಘಟನೆ ಸೋಮವಾರ ನಡೆದಿದೆ. 

      ಅನ್ಯಾಯಕ್ಕೊಳಗಾದ ಅಸಲಿ ಸಂತ್ರಸ್ತರನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಅವೈಜ್ಞಾನಿಕವಾಗಿ ಮಾಡಿದ ಸಮೀಕ್ಷೆಯಿಂದ ಸಂತ್ರಸ್ತ ಕುಟುಂಬಗಳು ಕಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಪರಿಹಾರ ಮಂಜೂರು ಮಾಡಿದ್ದಾರೆ.  ಪ್ರವಾಹದ ನೀರು ಹೋಗದ ಮನೆಗಳಿಗೆ ಪರಿಹಾರ ನೀಡಿದ್ದಾರೆ. ಹೀಗಾಗಿ ಸಂತ್ರಸ್ತ ಬಡವರು  ಪರಿಹಾರದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ನೆರೆಗೆ ಹಾನಿಯಾಗದ ಶ್ರೀಮಂತ ಕುಟುಂಬಗಳಿಗೆ  ಪರಿಹಾರ ನೀಡಿದ್ದಾರೆ. ಫಲಾನುಭವಿಗಳ ಹೆಸರಿನ ಪಟ್ಟಿಯನ್ನು ಗ್ರಾಮಪಂಚಾಯಿತಿ ನೋಟಿಸ್ ಬೋಡರ್ಿಗೆ ಹಚ್ಚದೇ ಅನ್ಯಾಯ ಮಾಡಿದ್ದಾರೆ. ಅಧಿಕಾರಿಗಳೇ ಪ್ರಾಮಾಣಿಕವಾಗಿ  ನೌಕರಿ ಮಾಡಿ, ಇಲ್ಲವೆ ಮನೆಗೆ ಹೋಗಿ ಎಂದು ಗ್ರಾಪಂ ಪಿಡಿಓ, ಗ್ರಾಮಲೆಕ್ಕಿಗ ಸೇರಿದಂತೆ  ವಾಲೀಕಾರರನ್ನು ಗ್ರಾಮಸ್ಥರು ಹಾಗೂ ಸಂತ್ರಸ್ತರು  ತರಾಟೆಗೆ ತೆಗೆದುಕೊಂಡರು. ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು. ನಂತರ  ತಹಶೀಲ್ದಾರ ಜಿ.ಎಂ. ಕುಲಕಣರ್ಿ ಘಟನಾ ಸ್ಥಳಕ್ಕೆ ಬಂದಾಗ ಸಂತ್ರಸ್ತರು ತಮ್ಮ ಬೇಡಿಕೆಯ ಮನವಿ ಸಲ್ಲಿಸಿದರು.

       ತಹಶೀಲ್ದಾರ ಜಿ.ಎಂ. ಕುಲಕಣರ್ಿ ಮಾತನಾಡಿ, 62 ಫಲಾನುಭವಿಗಳ ಬಗ್ಗೆ ಪಿಡಿಓ, ಗ್ರಾಮಲೆಕ್ಕಿಗ  ಅವರು ಪುನರ್ಪರಿಶೀಲನೆ ಮಾಡುತ್ತಾರೆ.  ಹಾನಿಗೀಡಾಗದ ಮನೆಗಳಿಗೆ ಪರಿಹಾರ ಹೋಗಿದ್ದರೆ ಅಂತಹ ಮನೆಗಳ ಮೇಲೆ ಬೋಜಾ ಕೂಡಿಸಿ ಪರಿಹಾರ ನೀಡಿದ ಹಣ ವಸೂಲಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಫಲಾನುಭವಿಗಳ ಪಟ್ಟಿಯನ್ನು ಕೂಡಲೇ ಗ್ರಾಮಪಂಚಾಯತಿ ನೋಟಿಸ್ ಬೋಡರ್ಿಗೆ ಅಂಟಿಸುವಂತೆ ಪಿಡಿಓಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಪಿಡಿಓ ಜಿ. ಪದ್ಮಾವತಿ, ಗ್ರಾಪಂ ಅಧ್ಯಕ್ಷ ಶರಣು ಸಜ್ಜನ, ಗ್ರಾಮದ ಮಹೇಶ ಜಡಿ, ಮುತ್ತಪ್ಪ ಗೋಡಿ, ಭೀಮಪ್ಪ ಕರಕನ್ನವರ, ಮಲ್ಲಪ್ಪ ಕುಚಲ,  ಬೈಲಪ್ಪ ಗೋಡಿ, ಶರಣಪ್ಪ ಚಿಲ್ಲಾಪೂರ, ಬಸವರಾಜ ಮಾದರ, ಮಂಜುನಾಥ ಜಡಿ, ಹನಮಂತ ಪಾತ್ರೋಟಿ, ಭೀಮಪ್ಪ ಮಾದರ, ರವಿ ವಾಲೀಕಾರ, ಸಿದ್ದಪ್ಪ ಬಂಡಿವಡ್ಡರ, ಪರಶುರಾಮ ಪಾತ್ರೋಟಿ, ಮಹೇಶ ವಾಲೀಕಾರ, ಸಂಗಪ್ಪ ವಾಲೀಕಾರ, ಮಲ್ಲಪ್ಪ ಪಾತ್ರೋಟಿ, ಶರಣಪ್ಪ ಜಡಿ, ಆಸಂಗೆಪ್ಪ ಹಾದಿಮನಿ ಹಾಗೂ  ಇತರರು ಇದ್ದರು.