ಕರಿಸಿದ್ದೇಶ್ವರ ಜಾತ್ರಾ ನಿಮಿತ್ಯ ಪ್ರವಚನ ಕಾರ್ಯಕ್ರಮ
Discourse program on the occasion of Karsiddeshwara Jatra
ಕರಿಸಿದ್ದೇಶ್ವರ ಜಾತ್ರಾ ನಿಮಿತ್ಯ ಪ್ರವಚನ ಕಾರ್ಯಕ್ರಮ
ಮಹಾಲಿಂಗಪುರ 15: ದಾನ ಧರ್ಮ ಮಾಡಿ ಸಮಾಜದ ಋಣ ತೀರಿಸಬಹುದು ಇದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗಿ ಮೋಕ್ಷ ದೊರೆಯುತ್ತದೆ. ಈ ಎಲ್ಲ ಸಾಧನೆಗಾಗಿ ಸತ್ಸಂಗ ಉತ್ತಮ ಆಯ್ಕೆ ಸತ್ಸಂಗದಲ್ಲಿ ಭಾಗವಹಿಸುವದರಿಂದ ಉತ್ತಮ ಜೀವನಕ್ಕೆ ದಾರಿ ದೀಪವಾಗುತ್ತದೆ ಎಂದು ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಮಹಾಲಿಂಗಪುರ ಶ್ರೀ ಕರಿಸಿದ್ದೇಶ್ವರ ಹಾಗೂ ಬ್ರಹ್ಮಲಿಂಗೇಶ್ವರ ದೇವರ ಜಾತ್ರೆ ನಿಮಿತ್ಯವಾಗಿ ಕರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಏಳು ದಿನಗಳ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನಕಾರರಾಗಿ ಮೊದಲ ದಿನದ ಪ್ರವಚನ ಆಶೀರ್ವಾದದ ಅಮೃತವಾಣಿ ಕರುಣಿಸಿ ಮಾತನಾಡಿ. ಸತ್ಯದ ಒಡನಾಟವೇ ಸತ್ಸಂಗ.ಇದು ಸಂಪೂರ್ಣ ಸತ್ಯವನ್ನು ಪ್ರತಿನಿಧಿಸುತ್ತದೆ. ನೇರವಾಗಿ ನಾವು ದೇವರೊಂದಿಗೆ ಸಂಪರ್ಕವನ್ನು ಹೊಂದುವುದು ಸಾಧ್ಯವಿಲ್ಲ ಹಾಗಾಗಿ ದೇವರ ರೂಪದಂತೆ ಭೂಮಿಯ ಮೇಲೆ ಇರುವ ಸದ್ಗುಣ ಸಾಧು ಸಂತರ ಸಹವಾಸ ಮಾಡುವುದು ಉತ್ತಮವಾದ ಸತ್ಸಂಗವಾಗಿದೆ ಎಂದರು.
ನಂತರ ಮಾತನಾಡಿದ ಮಹಾಂತೇಶ ಹಿಟ್ಟಿನಮಠ ಶರಣರ ಬದುಕು ಮನುಕುಲಕ್ಕೆ ದಾರಿ ದೀಪ ಅವರ ಉಪದೇಶದಂತೆ ನಡೆದರೆ ಸುಖ, ಶಾಂತಿ ನೆಮ್ಮದಿ ಸಾಧ್ಯ. ನೆಮ್ಮದಿ ಇಲ್ಲದ ಬದುಕು ನರಕಕ್ಕೆ ಸಮ, ಸುಖಿ ಕುಟುಂಬ ಸ್ವರ್ಗಕ್ಕೆ ಸಮ ಅಧ್ಯಾತ್ಮ ಎನ್ನುವುದು ಮನುಷ್ಯನಿಗೆ ಜ್ಞಾನ ಮತ್ತು ನೆಮ್ಮದಿ ನೀಡುತ್ತದೆ.ಮನುಷ್ಯ ಮಾನಸಿಕ ಜಂಜಾಟದಿಂದ ಮುಕ್ತನಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ, ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣರಾದ ಮಹೇಶ ಇಟಕನ್ನವರ ನಾವು ಮಾಡುವ ಕಾರ್ಯ ದೇವರಿಗೆ ಮೆಚ್ಚುಗೆಯಾದರೆ ಅದು ನಮ್ಮ ಗೆಲುವು ಯಾರನ್ನು ಮೆಚ್ಚುಸುವ ಅವಶ್ಯಕತೆ ಇಲ್ಲ ನಾವು ನಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡರೆ ನೆಮ್ಮದಿ ಬದುಕು ಕಾಣಬಹುದು, ಇದು ಆಧ್ಯಾತ್ಮದ ಶಕ್ತಿ. ಮಾನಸಿಕ ನೆಮ್ಮದಿ ಹೊಂದಲು ಪ್ರತಿಯೊಬ್ಬರಿಗೆ ಸತ್ಸಂಗಗಳು ಪಾಲ್ಗೊಳಬೇಕು ಇದರಿಂದ ಸಂಸ್ಕಾರ, ಸಂಸ್ಕೃತಿ, ಬೆಳೆಯುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಸತ್ಯಪ್ಪ ಹುದ್ದಾರ ಅಧ್ಯಕ್ಷತೆ ವಹಿಸಿದ್ದರು, ಪ್ರಸಾದ ಗುಂಡಾ ವೇದಿಕೆ ಮೇಲೆ ಉಪಸ್ಥಿತರಿದ್ದರು ನಗರದ ಜಂಗಮ ಸಮಾಜ ಬಂದುಗಳು ಪೂಜ್ಯರಿಗೆ ಮಾಲಾರೆ್ಣ ಮಾಡಿ ಗೌರವಿಸಿದರು, ಮುಖಂಡರಾದ ಗುರುಪಾದಯ್ಯ ಚಟ್ಟಿ, ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಮಹಾಂತೇಶ ಮಣ್ಣಯ್ಯನವರಮಠ, ಸಾಗರ ಮಠದ, ಎಸ್ ಟಿ ಮಠಪತಿ, ಪ್ರಭು ಮಠದ, ಮಹಾಲಿಂಗಪ್ಪ ಜಕ್ಕಣ್ಣವರ, ಗಂಗಾಧರ ಮೇಟಿ, ಶ್ರೀಶೈಲ್ ಅವಟಿ, ಪರಶುರಾಮ್ ಬಂಡಿ, ಬರಮಪ್ಪ ಅವಟಿ, ಹಣಮಂತ ಅವಟಿ, ಕರೆಪ್ಪ ಮೇಟಿ, ಈರ್ಪ ಜಕ್ಕಣ್ಣವರ, ಮುತ್ತು ಸಾಲಿಮನಿ,ಬೊಮ್ಮಾಯಿ ಅವಟಿ ಹಣಮಂತ ಸಂಶಿ ಶಿವಾನಂದ ಮೇಟಿ,ಸೇರಿದಂತೆ ಹಲವರು ಇದ್ದರು ಕಾರ್ಯಕ್ರಮವನ್ನು ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು. ಪ್ರಸಾದ ವ್ಯವಸ್ಥೆಯನ್ನು ಯಲ್ಲಪ್ಪ ಪಟ್ಟಣಕೋಡಿ ಮಾಡಿಸಿದ್ದರು. ಈ ಸಂದರ್ಭದಲ್ಲಿ ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 