ಕೊರೊನಾದಿಂದ ಗುಣಮುಖರಾದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾಜ್೯

ವಿಜಯಪುರ ಮೇ.10 : ಕೋವಿಡ್ 19 ದಿಂದ ಗುಣಮುಖರಾದ ಇಬ್ಬರನ್ನು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರೋಗಿ ಸಂಖ್ಯೆ - 399 (27 ವರ್ಷ ಮಹಿಳೆ) ರೋಗಿ ಸಂಖ್ಯೆ- 457 (17 ವರ್ಷ ಯುವಕ) ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 33 ಕೋವಿಡ್-19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 13 ಕೋವಿಡ್-19 ಸಕ್ರಿಯ ರೋಗಿಗಳು ಇದ್ದು, ಪರಿಣಾಮಕಾರಿ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗಿನ ವರೆಗೆ ಜಿಲ್ಲೆಗೆ ಈವರೆಗೆ ವಿದೇಶದಿಂದ ಮತ್ತು ಇತರೆ ಕಡೆಯಿಂದ ಒಟ್ಟು 2134 ಬಂದ ಬಗ್ಗೆ ವರದಿಯಾಗಿದ್ದು, 1490 ಜನರು 1 ರಿಂದ 28 ದಿನಗಳ ರೀಪೊಟರ್ಿಂಗ್ ಅವಧಿಯಲ್ಲಿದ್ದಾರೆ. 610 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ 2466 ಗಂಟಲು ದ್ರವ ಮಾದರಿ ಕಳುಹಿಸಲಾಗಿ 2373 ಪ್ರಕರಣಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.  ಒಟ್ಟು 49 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಇನ್ನೂ 44 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ.  

ಇದೇ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ, ಡಾ.ಎ.ಜಿ ಬಿರಾದಾರ, ಡಾ. ಗುಂಡಪ್ಪ, ಡಾ. ಸಂತೋಷ ಬಿರಾದಾರ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಾದ ಎಂ.ಬಿ ಚರಂತಿಮಠ. ಎಸ್.ಆರ್ ಬಿಸನಾಳ, ಶಾಂತಾ .ಆರ್, ಕವಿತಾ ಬೈಚಬಾಳ, ಪ್ರಸಾದ್ ಖೋತ, ಸುರೇಶ ಸುಣಗಾರ, ಶ್ರೀಪತಿ ಕುಲಕಣರ್ಿ, ಪ್ರಶಾಂತ ಸೋಮನ್ನಣ್ಣವರ ಉಪಸ್ಥಿತರಿದ್ದರು.