ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸಬೇಕು : ಬಸವರಾಜ ಶಿವಣ್ಣನವರ

Disabled people should lead the journey of life like everyone else: Basavaraja Shivannavara

ಬ್ಯಾಡಗಿ  04: ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸಬೇಕು ಎಂಬ ಉದ್ದೇಶದಿಂದ ಅವರಿಗಾಗಿ ವಿಶೇಷ ವಾಹನಗಳನ್ನು  ನೀಡಲಾಗಿದೆ’ ಎಂದು ಶಾಸಕ ಬಸವರಾಜ ಶಿವಣ್ಣನವರ  ಹೇಳಿದರು.ಮಂಗಳವಾರ ಪಟ್ಟಣದ ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ಪುರಸಭೆಯ ವತಿಯಿಂದ ಆಯೋಜಿಸಲಾದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದ್ದುಇದರ ಸದುಪಯೋಗವನ್ನು ಫಲಾನುಭವಿಗಳೇ ಪಡೆದುಕೊಳ್ಳಬೇಕು.  

ಅವರಿಗೂ ಸಹ ಸಾಮಾನ್ಯ ಜನರಂತೆ ಓಡಾಡಲು ಅನುಕೂಲವಾಗಬೇಕು ಎಂದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ. ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನವೀರ​‍್ಪ ಶೆಟ್ಟರ, ಸದಸ್ಯ ಶಿವರಾಜ ಅಂಗಡಿ, ಮುಖ್ಯಾಧಿಕಾರಿ ವಿನಯಕುಮಾರ್ ಹೊಳೆಪ್ಪಗೋಳ,  ಬಸಣ್ಣ ಛತ್ರದ, ಹನುಮಂತಪ್ಪ ಮ್ಯಾಗೇರಿ, ಕಲಾವತಿ ಬಡಿಗೇರ, ಗಾಯಿತ್ರಿ ರಾಯ್ಕರ,ರಾಮಣ್ಣ ಕೋಡಿಹಳ್ಳಿ, ಶಂಕರ ಕುಸಗೂರ, ಸರೋಜಾ ಉಳ್ಳಾಗಡ್ಡಿ, ಫಕ್ಕೀರಮ್ಮ ಛಲವಾದಿ, ಮಲ್ಲವ್ವ ಪಾಟೀಲ. ಮೆಹಬೂಬ ಅಗಸನಹಳ್ಳಿ, ಸುಮಂಗಲಾ ರಾರಾವಿ, ಸೋಮಣ್ಣ ಕರ್ಚಡ,ರಾಜೇಸಾಬ ಕಳ್ಳಿಹಾಳ, ಸೋಮಣ್ಣ ಸಂಕಣ್ಣನವರ, ಫಕ್ಕೀರ​‍್ಪ ಕರಡೇರ ಇದ್ದರು.