ಗದಗ 21: ಅಂಗವಿಕಲತೆ ಶಾಪವಲ್ಲ ಅದನ್ನು ಮೀರಿ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡುವುದು. ಅಗತ್ಯದ ಸೌಲಭ್ಯ ಒದಗಿಸುವುದು ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು ನುಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ, ಸಾರ್ವಜನಿಕ ಶಿಕ್ಷಣ, ಪದವಿಪೂರ್ವ ಶಿಕ್ಷಣ, ಆರೋಗ್ಯ, ಪೊಲೀಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಶೇ. 40 ಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರ ಪ್ರದೇಶಗಳಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಿದ್ದು ಅವರಿಗೆ ಬರೀ ವಾಹನ ಸೌಲಭ್ಯ ಒದಗಿಸುವುದೇ ಮುಖ್ಯವಲ್ಲ ಬದಲಾಗಿ ಪುನಚ್ಚೇತನ, ಸಬಲೀಕರಣದ ಮೂಲಕ ಅವರನ್ನು ಮುಖ್ಯವಾಹಿನಿಯಲ್ಲಿ ಕರೆತರುವುದು ಇಂದಿನ ಅಗತ್ಯವಾಗಿದೆ. ಇದರಿಂದಾಗಿ 1993 ರ ಹಾಗೂ ನಂತರ 2016 ರಲ್ಲಿ ಅಂಗವಿಕಲ ಕಾಯ್ದೆ ತಂದಿದ್ದು ಇವುಗಳ ಆಳವಾದ ಅನುಷ್ಠಾನ ಎಲ್ಲರ ಕಾನೂನಾತ್ಮಕ ಜವಾಬ್ದಾರಿಯಾಗಿದೆ. ಎಲ್ಲ ಇಲಾಖೆಗಳು, ಸ್ಥಳೀಯ ನಗರಾಡಳಿತ ಸಂಸ್ಥೆಗಳು ತಮ್ಮ ಒಟ್ಟಾರೆ ಬಜೇಟ್ನಲ್ಲಿ ಶೇ.5 ರಷ್ಟು ಅನುದಾನ ಅಂಗವಿಕಲರಿಗಾಗಿ ಬಳಸಬೇಕೆಂಬುದು ಕಾನೂನಾತ್ಮಕ ಜವಾಬ್ದಾರಿಯಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾತನಾಡಿ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಮೀಸಲಿರುವ ಶೇ.5 ರ ಅನುದಾನ ಬರೀ ವೆಚ್ಚ ಮಾಡುವುದೇ ಮುಖ್ಯ ಗುರಿ ಅಲ್ಲ ಎಂದರು. ಅವರಿಗೆ ಭೌತಿಕ ಸೌಲಭ್ಯಗಳಿಗಿಂತ ಮಾನಸಿಕವಾಗಿ ಜೀವನ ಎದುರಿಸಲು ಅಗತ್ಯದ ವಾತಾವರಣ ಕಲ್ಪಿಸುವ ಡೇ ಕೇರ ಸೆಂಟರ, 0-6 ವಯಸ್ಸಿನಲ್ಲಿ ಅಂತಹ ಮಕ್ಕಳನ್ನು ಗುರುತಿಸಿ ಅಗತ್ಯ ಕ್ರಮ ಜರುಗಿಸುವುದು. ಅಂತಹ ಪಾಲಕರಿಗೆ ಅಗತ್ಯದ ತರಬೇತಿ ನೀಡುವ ಮುಂತಾದ ಸಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಹೊಣೆ ಸ್ಥಳೀಯ ಸಂಸ್ಥೆಗಳ ಮೇಲೆ ಇದೆ. ಶೇ. 5 ರ ಅನುದಾನ ಸರಿಯಾದ ಬಳಕೆಗಾಗಿ 2019-20 ರ ಕ್ರೀಯಾಯೋಜನೆ ಡಿಸೆಂಬರ 15 ರೊಳಗೆ ಸಭೆಯಲ್ಲಿ ಸೂಚನೆಯಂತೆ ಪುನಃ ರೂಪಿಸಿ ತಮ್ಮಿಂದ ಮಂಜೂರಾತಿ ಪಡೆದುಕೊಳ್ಳಲು ಸೂಚಿಸಿದ ಜಿಲ್ಲಾಧಿಕಾರಿಗಳು, ಪೌರಾಯುಕ್ತರು, ಮುಖ್ಯಾಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿನ ಪೊಲೀಸ್, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ಸಿಬ್ಬಂದಿಯೊಂದಿಗೆ ನಿಗದಿತವಾಗಿ ಸಮನ್ವಯ ಸಭೆ ಜರುಗಿಸಲು ಹಾಗೂ ಅಂಗವಿಕಲತೆ ಅನುದಾನ ಹಾಗೂ ಕ್ರೀಯಾಯೋಜನೆ ಮಾಹಿತಿಯನ್ನು ಸಂಸ್ಥೆಯ ವೆಬ್ಸೈಟ್ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದರು.
ಲಕ್ಷ್ಮೇಶ್ವರ ನಗರದಲ್ಲಿ ನಡೆಸಿದ ಸಮೀಕ್ಷೆ ರೀತಿ 728 ಅಂಗವಿಕಲರಿದ್ದಾರೆಂದು ಗುರುತಿಸಲಾಗಿದ್ದು ಮಕ್ಕಳಿಗಾಗಿ ಹಾಗೂ ವಯೋವೃದ್ದರಿಗೆ ಶಿಕ್ಷಣ, ಅಗತ್ಯದ ಉಪಕರಣ ಸೌಲಭ್ಯ, ಅವರು ಬಳಸಲು ವಿಶೇಷ ಶೌಚಾಲಯ ನಿಮರ್ಾಣಕ್ಕೆ ಅನುದಾನ ಇತ್ಯಾದಿಗಳನ್ನು ನೀಡಿರುವುದು ಸಭೆಯಲ್ಲಿ ಚಚರ್ೆಗೆ ಬಂತು. ಅಂಗವಿಕಲ ಆಯುಕ್ತ ಬಸವರಾಜು ಅವರು ಜಿಲ್ಲೆಯ ಇತರ ಸ್ಥಳೀಯ ಸಂಸ್ಥೆಗಳಿಗೆ ಇದು ಮಾದರಿ ಆಗುವ ರೀತಿಯಲ್ಲಿ ಅಗತ್ಯದ ಮಾಹಿತಿ ಸಮನ್ವಯ ಮುಖ್ಯಾಧಿಕಾರಿಗಳು, ಪೌರಾಯುಕ್ತರ ಸಭೆ ಜರುಗಿಸಲು ಜಿಲ್ಲಾಧಿಕಾರಿಗಳ ನಗರಾಭಿವೃದ್ಧಿಕೋಶ ಕ್ರಮ ಜರುಗಿಸಲು ಸೂಚಿಸಿದರು.
ಮಹಾನಗರಸಭೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳು ತಮ್ಮ ವಾಷರ್ಿಕ ಬಜೆಟ್ ಖಚಿತ ಮೊತ್ತವನ್ನೆ ನೀಡದೆ ಇರುವುದು ಸರಿಯಾದ ಕ್ರಮವಲ್ಲ. ಸ್ಥಳೀಯ ಸಂಸ್ಥೆಗಳ ಶೇ 5 ರ ಅನುದಾನ ಬಳಕೆ ಕುರಿತಂತೆ ಶೀಘ್ರವೇ ಸಾಮಾಜಿಕ ಲೆಕ್ಕಪರಿಶೋಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಂಗವಿಕಲ ಕಾಯ್ದೆಗಳ ಅನುಷ್ಠಾನದ ಮುಖ್ಯ ಉದ್ದೇಶ ಜನಸಾಮಾನ್ಯರ ಸೌಲಭ್ಯಗಳು ಸೂಕ್ತವಾಗಿ ಅಂಗವಿಕಲರು ಬಳಸುವಂತ ವಾತಾವರಣ ನಿಮರ್ಿಸುವುದೇ ಆಗಿದೆ ಎಂದು ಆಯುಕ್ತರು ನುಡಿದರು.
ರಾಜ್ಯದಲ್ಲಿ ಸುಮಾರು 10.2 ಲಕ್ಷ ಮಾನಸಿಕ ಅಸ್ವಸ್ಥರು ಇರುವ ಅಂದಾಜಿದ್ದು, ಇದು ಕೂಡಾ ಈಗ ಗಂಭೀರ ವಿಷಯವಿದ್ದು ಪೊಲೀಸ್ ಇಲಾಖೆ ಈ ಕುರಿತು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನಿಂದ ಅಗತ್ಯದ ಪರಿಹಾರ ಕ್ರಮಕ್ಕೂ ಮುಂದಾಗಬೇಕು ಹಾಗೂ ಪೊಲೀಸ್ ಠಾಣೆಯಲ್ಲಿ ಅಂಗವಿಕಲರಿಂದ ದಾಖಲಾಗುವ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಆಯೋಗಕ್ಕೆ ನೀಡಲು ಆಯುಕ್ತ ಬಸವರಾಜು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಅಂಗವಿಕಲ ಅಧಿನಿಯಮದ ಉಪಾಯುಕ್ತ ಎಸ್.ಕೆ.ಪದ್ಮನಾಭ, ಅಂಗವಿಕಲ ಶಿಕ್ಷಣ ಸಂಸ್ಥೆಯ ಹಂಪಣ್ಣ, ಸೋಮನಾಥ ಮಹಾಜನ ಶೆಟ್ಟರ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.