ಲೋಕದರ್ಶನ ವರದಿ
ಕೊಪ್ಪಳ 12: ಸಾಧನೆಯನ್ನು ಮಾಡಬೇಕು ಎಂಬ ಹಂಬವಿದ್ದರೆ ಅಂಗವಿಕಲತೆ ಎಂಬುದು ಅಡ್ಡಿಯಾಗಲಾರದು ಎಂದು ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಮಾಲತಿ ಹೊಳ್ಳ ಹೇಳಿದರು.
ಅವರು ನಗರದ ಗವಿಮಠದ ಆವರಣದಲ್ಲಿ ವಿಕಲಚೇತನ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಮನೋಭಾವನೆಯನ್ನು ಹೊಂದಿದವರು ಕೇವಲ ಕೈಕಟ್ಟಿ ಕುಳಿತರೇ ಸಾಲದು ಸಾಧನೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ತಯಾರು ಮಾಡಿಕೊಳ್ಳುವುದರ ಜೊತೆಗೆ ಕಠಿಣ ಪರಿಶ್ರಮವನ್ನು ಪಡಬೇಕು ಅಂದಾಗ ಮಾತ್ರ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಅಂಗವಿಕಲತೆಗೆ ಒಳಗಾದವರು ಮೊದಲು ತಮ್ಮಲ್ಲಿ ಇರುವಂತ ಸಂಕುಚಿತವಾದ ಮನೋಭಾವನೆಯಿಂದ ಹೊರಬರಬೇಕು. ಸಾಧನೆಯನ್ನು ಮಾಡಲೇ ಬೇಕು ಎಂಬ ಮನೋಭಾವನೆಯನ್ನು ಹೊಂದಿದರೆ, ಸಾಧನೆಗೆ ಅಂಗವಿಕಲತೆ ಎಂಬುದು ಯಾವುದೇ ರೀತಿಯಲ್ಲಿ ಅಡಿಯಾಗುವುದಿಲ್ಲ ಅದಕ್ಕೆ ನಾನೇ ಮಾದರಿಯಾಗಿದ್ದೆನೆ. ವಿಕಲಚೇತನರಿಗಾಗಿ ಅನೇಕ ರೀತಿಯಲ್ಲಿ ಕ್ರೀಡೆಗಳನ್ನು ಆಯೋಜನೆಯನ್ನು ಮಾಡುವುದರ ಜೊತೆಗೆ ನಮಗಾಗಿಯೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಒಲಂಪಿಕ್ ಆಟಗನ್ನು ಆಯೋಜನೆಯನ್ನು ಮಾಡುತ್ತಿದ್ದು, ಅದರ ಬಳಕೆಯನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು. ಗವಿಸಿದ್ದೇಶ್ವರ ಮಹಾರಥೋತ್ಸವದ ಚಾಲನೆಗಾಗಿ ವಿಶೇಷವಾಗಿ ನನ್ನನ್ನು ಆಹ್ವಾನಿಸಿರುವುದು ಸಂತೋಷದ ಸಂಗತಿಯಾಗಿದೆ ಹಾಗೂ ಇದು ಸಮಸ್ತ ವಿಕಲಚೇತನ ಸಮುದಾಯಕ್ಕೆ ಶ್ರೀಮಠ ನೀಡಿದ ಗೌರವವಾಗಿದೆ. ಸರಕಾರಿ ವಿಕಲಚೇತನ ನೌಕರರಿಗೂ ಕೂಡಾ ಕ್ರೀಡಾಕೂಟವನ್ನು ಆಯೋಜನೆಯನ್ನು ಮಾಡುವಂತೆ ಸರಕಾರಕ್ಕೆ ನಾನು ಕೂಡಾ ಒತ್ತಾಯ ಮಾಡುವುದಾಗಿ ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆಗಳು ಅಡಗಿರುತ್ತವೆ.ಅಂತಹ ಪ್ರತಿಭೆಗಳು ಹೊರಬರಬೇಕಾದರೆ ವೇದಿಕೆಗಳ ಅಗತ್ಯತೆಯಿದೆ. ವಿಕಲಚೇತನರಿಗಾಗಿ ಸರಕಾರದಿಂದ ಅನೇಕ ಕ್ರೀಡೆಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಅದರಲ್ಲಿ ಪ್ರತಿಯೊಬ್ಬ ವಿಕಲಚೇತನರು ಭಾಯಾಗಿಯಾಗುವಂತೆ ಇಲಾಖೆಯು ಅದರ ಬಗ್ಗೆ ಗಮನಹರಿಸಬೇಕು. ಅಲ್ಲದೇ ಸರಕಾರಿ ವಿಕಲಚೇತನ ನೌಕರರಲ್ಲಿ ಕೂಡಾ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂಬ ಮನೋಭಾವನ್ನು ಹೊಂದಿದ್ದಾರೆ. ಸರಕಾರವು ಶೀಘ್ರವೇ ವಿಕಲಚೇತನ ಸರಕಾರಿ ನೌಕರರಿಗೂ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಂತಹ ಅವಕಾಶವನ್ನು ಮಾಡಿಕೊಡಬೇಕು.ಗವಿಮಠದಂತೆ ಇತರೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ, ಜಿಲ್ಲಾ ಖಜಾಂಚಿ ಕಾಶಿನಾಥ ಶಿರಿಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ, ವಿಕಲಚೇತನ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ, ವಿಕಲಚೇತನ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ, ನಿರ್ದೇಶಕರಾದ ಪ್ರಶಾಂತ ಪಾಟೀಲ, ಮಾರುತಿ ಆಪ್ಟೆ, ರಾಜು ಬಂಗಾರಶೆಟ್ಟರ್ ಹಾಜರಿದ್ದರು.