ಲೋಕದರ್ಶನ ವರದಿ
ಕೊಪ್ಪಳ 09: ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದ ಸಮಾಜ ಕಾರ್ಯ ವಿಭಾಗದಿಂದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾಥರ್ಿಗಳಿಗೆ ಪಠ್ಯಕ್ರಮವಾಗಿರುವ ಪುನರ್ವಸತಿ ಮತ್ತು ಇತರೆ ಸೇವೆಗಳು ಎಂಬ ಐಚ್ಛಿಕ ವಿಷಯದ ಮೇಲೆ ಒಂದು ದಿನದ ವಿಕಲಚೇತನರ ಪುನರ್ವಸತಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಿವಪ್ಪ ಅಳವಂಡಿ, ವಿಜಯ ಬ್ಯಾಂಕ್, ಕೊಪ್ಪಳ ಇವರು ಮಾತನಾಡಿ ತಮ್ಮ ಜೀವನದ ಅನುಭವಗಳನ್ನು ಅಂದರೆ ನಾನು ವಿಕಲಚೇತನನಾಗಿ ಯಾವ ಸಮಸ್ಯೆಗಳನ್ನು ಅನುಭವಿಸಿದ್ದೇನೆ ಮತ್ತು ಆ ಸಮಸ್ಯೆಗಳಿಗೆ ಪರಿಹಾರವಾಗಿ ಕುಟುಂಬ, ಸ್ನೇಹ ಬಳಗ, ಸಂಘ ಸಂಸ್ಥೆಗಳು, ಸಮಾಜ ಮತ್ತು ಸರಕಾರ ಯಾವ ಯಾವ ಸೌಲಭ್ಯಗಳನ್ನು ಪಡೆದು ನಾನು ಸರಕಾರಿ ನೌಕರನಾಗಿ ಆಯ್ಕೆಯಾಗಲು ಕಾರಣವಾದ ಮಾರ್ಗಗಳನ್ನ ತಿಳಿಸಿದರು ಹಾಗೂ ವಿಕಲಚೇತನದ ವಿಶೇಷ ಕೌಶಲ್ಯಗಳ ಬಳಕೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಇನ್ನೊಬ್ಬ ಅತಿಥಿಯಾಗಿದ್ದ ನಮ್ಮ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಮಹಮ್ಮದ ಶಫಿ ಸರದಾರ ಮಾತನಾಡಿ ತಮ್ಮ ಜೀವನದ ಏಳುಬೀಳುಗಳ ಬಗ್ಗೆ ಮತ್ತು ಅತ್ಮವಿಶ್ವಾಸವಿದ್ದರೆ ಯಾವುದೂ ಕೂಡ ಅಸಾಧ್ಯವಲ್ಲ ಎಂಬುದನ್ನು ತಮ್ಮ ಜೀವನದ ಅನುಭವಗಳ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿದರು. ಅತಿಥಿಯಾಗಿದ್ದ ಜಯಶ್ರೀ ಅರಿಕೇರಿ, ಅಂಗವಿಕಲದ ಪುನರ್ವಸತಿಯ ಪ್ರತಿನಿಧಿಯಾಗಿರುವ ಇವರು ಮಾತನಾಡಿ ಅಂಗವಿಕಲರಿಗಾಗಿ ಇರುವ ಸರಕಾರದ ಸೌಲಭ್ಯಗಳು ಮತ್ತು ಅವುಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಸವಿವರವಾಗಿ ತಿಳಿಸಿದರು.
ವೇದಿಕೆ ಮೇಲಿದ್ದ ಸಮೂಹ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿರುವ ಪ್ರಸಾದ ಮಾತನಾಡಿ ಸಂಸ್ಥೆಯಲ್ಲಿ ಅಂಗವಿಕಲರಿಗೆ ನೀಡುವ ಪುನರ್ವಸತಿ ಸೌಲಭ್ಯಗಳ ಬಗ್ಗೆ ಮತ್ತು ವಿಕಲಚೇತನರಿಗಾಗಿ ಇರುವ ವಿಶೇಷ ಕಾರ್ಯಗಾರಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ ಮಾತನಾಡಿ ವಿಕಲಚೇತರನ ಸಾಧನೆಗಳು ಸಾಮಾನ್ಯ ವ್ಯಕ್ತಿಗಳಿಗೆ ಸ್ಪೂತರ್ಿಯಾಗಿವೆ. ಎಲ್ಲಾ ಸೌಲಭ್ಯಗಳಿದ್ದೂ ಏನು ಮಾಡದ ನಾವುಗಳು ಅವರಿಂದ ಕಲಿಯುವ ಕೌಶಲ್ಯಗಳ ಬಗ್ಗೆ ವಿವರಿಸಿ ವೇದಿಕೆ ಮೇಲಿದ್ದ ಎಲ್ಲ ವಿಕಲಚೇತರನರಿಗೆ ಅಭಿನಂದಿಸಿದರು.
ಕಾರ್ಯಕ್ರಮದ ಪ್ರಾಸ್ತವಿಕವಾಗಿ ಮಾತನಾಡಿದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಶಿವನಗೌಡ ಪೋಲಿಸಪಾಟೀಲ ಇವರು ಪದವಿ ಹಂತದಲ್ಲಿ ಇಂತಹ ಸಮಾಜದ ವಿಶೇಷ ವಿಷಯಗಳನ್ನು ವಿದ್ಯಾಥರ್ಿಗಳು ಅಧ್ಯಯನಗೈದರೇ ಸಮಾಜದಲ್ಲಾಗುವಂತಹ ಅನಾಹುತಗಳನ್ನ ತಡೆಯಲು ಸಾಧ್ಯವಾಗುವುದು. ಆದ್ದರಿಂದ ಬಿ.ಕಾಂ ಅಂತಿಮ ವರ್ಷದ ವಿದ್ಯಾಥರ್ಿಗಳಿಗೆ ಸಮಾಜದಲ್ಲಿ ಅನ್ಯಾಯಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮತ್ತು ವಿಕಲಚೇತನರ ಬಗ್ಗೆ ಸಮಾಜ ತಿಳಿದುಕೊಂಡಿರುವ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡಲು ಮತ್ತು ಇವರೆಲ್ಲರನ್ನು ಮತ್ತೇ ಮೊದಲಿನಂತೆ ಕಾರ್ಯನಿರ್ವಹಿಸುವಂತೆ ಮಾಡಲು ಪುನರ್ವಸತಿ ಎಂಬ ವಿಷಯದ ಮೇಲೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು. ಅದೇ ರೀತಿ ಪ್ರಾಯೋಗಿಕ ಮತ್ತು ಪಠ್ಯಕ್ರಮದ ವ್ಯತ್ಯಾಸಗಳ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶೇಷ ವಿಕಲಚೇತನರ ಜೀವನವೇ ಸಾಕ್ಷಿ ಎಂಬ ಮಾಹಿತಿ ನೀಡಿದರು.
ಕಾರ್ಯಕ್ರಮದ ಕುರಿತು ವಿದ್ಯಾಥರ್ಿಗಳಾದ ಕು. ರುಕ್ಮಿಣಿ ಬಂಗಾಳಿಗಿಡದ, ಕು. ಕನ್ಯಾಕುಮಾರಿ, ಕು. ಶಿವರಾಜ, ಕು. ಅಜಿತ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಅರುಣಕುಮಾರ ಎ.ಜಿ ಭಾಗವಹಿಸಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ಮತ್ತು ಸ್ವಾಗತವನ್ನು ವಿದ್ಯಾಥರ್ಿಗಳಾದ ಕು. ಸಂಗೀತ, ವಂದನಾರ್ಪಣೆಯನ್ನ ಕು. ಶಿವಶರಣ ನಿರ್ವಹಿಸಿದನು.