ಲೋಕದರ್ಶನ ವರದಿ
ಯರಗಟ್ಟಿ 28: ಸಾಮಾನ್ಯ ಮಕ್ಕಳಿಗಿಂತ ವಿಕಲಚೇತನ ಮಕ್ಕಳು ಯಾವುದರಲ್ಲಿಯೂ ಕಮ್ಮಿಯಿಲ್ಲ. ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ವಿಕಲಚೇತನ ಮಕ್ಕಳ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ತಲುಪಿಸಲು ಶ್ರಮಿಸುವುದಾಗಿ ಶಾಸಕ ಆನಂದ ಮಾಮನಿ ಭರವಸೆ ನೀಡಿದರು.
ಇಲ್ಲಿನ ದುರದುಂಡೀಶ್ವರ ಮಠದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ, ಉಪನಿದರ್ೇಶಕರ, ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯ ಅಧಿಕಾರಿ ಸವದತ್ತಿ ಇವರು ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿಕಲಚೇತನ ಮಕ್ಕಳು ದೇವರ ಶಾಪವಲ್ಲ ವರ ಎಂಬ ಭಾವನೆಯೊಂದಿಗೆ ಪಾಲಕರು ಪಾಲನೆ ಪೋಷನೆ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಮಾತನಾಡಿ ವಿಕಲಚೇತನ ಮಕ್ಕಳ ಅಭಿವೃದ್ಧಿಗಾಗಿ ಸರಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಇವುಗಳನ್ನು ಸಮರ್ಪಕವಾಗಿ ಮುಟ್ಟುವಂತೆ ಶಿಕ್ಷನ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕಲಚೇತನ ಮಕ್ಕಳನ್ನು ಸನ್ಮಾನಿಸಲಾಯಿತು. ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ರೀಡಾ ಕೂಟ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ, ಜಿ.ಪಂ.ಸದಸ್ಯರಾದ ಅಜೀತಕುಮಾರ ದೇಸಾಯಿ, ವಿದ್ಯಾರಾಣಿ ಸೊನ್ನದ, ಎಂ.ಎಸ್.ಹಿರೇಕುಂಬಿ, ಬಸವರಾಜ ಬಂಡಿವಡ್ಡರ, ತಾ.ಪಂ.ಸದಸ್ಯೆ ಮಂಜುಳಾ ಕರಿಗೊಣ್ಣವರ, ಎಸ್.ವಿ.ಬೆಳವಡೆ, ಪ್ರಕಾಶ ಮೆಳವಂಕಿ, ಬಿ.ಆರ್.ಪಿ, ಸಿ.ಆರ್.ಪಿ, ತಾಲೂಕಿನ ವಿವಿಧ ಗ್ರಾಮಗಳ ವಿಕಲಚೇತನ ವಿದ್ಯಾಥರ್ಿಗಳು ಪಾಲಕರು ಹಾಗೂ ಸಮಸ್ತ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಂಕರ ಸಾಗರ ನಿರೂಪಿಸಿ ವಂದಿಸಿದರು.