ಬೆಂಗಳೂರು, ಜ 22 , ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಬಾಂಧ್ಯವದ ಮೇಲೆ ಬೆಳಕು ಚೆಲ್ಲುವ ‘ಗುಂಡ ಮತ್ತು ನಾನು’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ, ತಮ್ಮ ಸಿನಿ ಜರ್ನಿಯಲ್ಲಿ ಕಂಡುಂಡ ಕಹಿ, ಸಿಹಿಯ ಬಗ್ಗೆ ಹೇಳಿಕೊಳ್ಳುತ್ತ, ‘ಗುಂಡ’ನ ಕಥೆ ಮತ್ತೆ ತಮ್ಮ ಕೈಹಿಡಿಯಿತು ಎಂದು ತಿಳಿಸಿದ್ದಾರೆ. “ದಶಕಗಳ ಸಿನಿಮಾ ಪ್ರಯಾಣದ ಹೋರಾಟದ ವೇಳೆ ಎದುರಾದ ಏಳುಬೀಳು, ಅಪಮಾನದಿಂದ ಕುಗ್ಗಿದ್ದೆಮತ್ತೊಂದು ಸಿನಿಮಾಕ್ಕೆ ಕುಂಬಳಕಾಯಿ ಒಡೆಯುವ ಭಾಗ್ಯ ಕಾಣುತ್ತೇನೋ ಇಲ್ಲವೋ ಎಂದುಕೊಂಡಿದ್ದಾಗಲೇ ನಿರ್ಮಾಪಕ ರಘು ಹಾಸನ್ ‘ನಾನು ಮತ್ತು ಗುಂಡ’ ಚಿತ್ರಕ್ಕೆ ಬಂಡವಾಳ ಹಾಕಲು ಒಪ್ಪಿದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. “ಇದುವರೆಗೂ ನನ್ನ ಅಮೂಲ್ಯ ಸಮಯ, ಶ್ರಮ ಹಾಳು ಮಾಡಿದ ಜನರ ಮಧ್ಯೆ ರಘು ಹಾಸನ್ ಅವರ ಭರವಸೆ ಆತ್ಮವಿಶ್ವಾಸ ಹೆಚ್ಚಿಸಿತು. ‘ನಾನು ಮತ್ತು ಗುಂಡ’ ಶ್ವಾನದ ಮೇಲೆ ಕೇಂದ್ರೀಕೃತವಾದರೂ, ಕಥೆ ಮತ್ತು ಸಿನಿಮಾ ಮೇಲಿರುವ ಪ್ರೀತಿಯಿಂದ ಶಿವರಾಜ್ ಕೆ ಆರ್ ಪೇಟೆ ಅವರು ಈ ಸಿನಿಮಾದ ನಾಯಕನ ಪಾತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡದ್ದು ಪ್ರಶಂಸನಾರ್ಹ ನಾಯಕಿಯ ಪಾತ್ರಕ್ಕೆ ಸಂಯುಕ್ತ ಹೊರನಾಡು ರವರು ಈ ಪಾತ್ರಕ್ಕೆ ಸೂಕ್ತ ಎಂದೆನಿಸಿ ಅವರಿಗೆ ಕಥೆಯನ್ನು ಒಪ್ಪಿಸಿದಾಗ. ಅವರ ಮನೆಯ ನಾಯಿಯ ಹೆಸರು ‘ಗುಂಡ’ ಎಂಬ ವಿಷಯವನ್ನು ಹಂಚಿಕೊಂಡರು, ಕೊನೆಗೆ ಸಿನಿಮಾಗೆ ‘ನಾನು ಮತ್ತು ಗುಂಡ’ ಶೀರ್ಷಿಕೆಯನ್ನೇ ಫೈನಲ್ಲ ಮಾಡಿದ್ದಾಗಿ ಶ್ರೀನಿವಾಸ್ ತಿಮ್ಮಯ್ಯ ತಿಳಿಸಿದ್ದಾರೆ.