ನೇರ ಫೋನ್-ಇನ್ ಜಾಗೃತಿ ಕಾರ್ಯಕ್ರಮ
Direct phone-in awareness program
ಲೋಕದರ್ಶನ ವರದಿ
ಬೆಳಗಾವಿ 17: ಕೆಎಲ್‌ಇ ವೇಣುಧ್ವನಿ 90.4 ಎಫ್. ಎಮ್. ಕೇಂದ್ರ ಬೆಳಗಾವಿ, ಕೆಎಲ್‌ಇ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಕೆಎಲ್‌ಇ ಸಂಸ್ಥೆಯ ಶ್ರೀ ಬಿ. ಎಮ್. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಬೆಳಗಾವಿ ಇವರ ಸಹಯೋಗದಲ್ಲಿ ಶುಕ್ರವಾರ ದಿ. 17ನೇ ಏಪ್ರೀಲ್ 2026 ರಂದು ನೇರ ಫೋನ್-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪರೀಕ್ಷಾ ಫಲಿತಾಂಶ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚು ಮಾನಸಿಕ ಒತ್ತಡ ಮತ್ತು ಆತಂಕ ಉಂಟಾಗುವುದರ ಕುರಿತು ಪ್ರಶ್ನೋತ್ತರ ಮೂಲಕ ಜನಜಾಗೃತಿ ಮೂಡಿಸಲಾಹಿತು. ಬೆಳಗಾವಿಯ ಕೆಎಲ್‌ಇ ಶ್ರೀ ಬಿ. ಎಮ್. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಪ್ರಾಚಾರ್ಯರಾದ ಡಾ. ಸುಹಾಸ ಕುಮಾರ ಶೆಟ್ಟಿ ಅವರು ಭಾಗವಹಿಸಿ ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಫಲಿತಾಂಶದ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚು ಮಾನಸಿಕ ಒತ್ತಡ ಮತ್ತು ಆತಂಕ ಉಂಟಾಗುತ್ತಿದೆ. ಫಲಿತಾಂಶದ ಬಗ್ಗೆ ಆತಂಕ ಭಯ ನೀರೀಕ್ಷೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ ಎಸ್‌ಎಸ್‌ಎಲ್‌ಸಿ ಮತ್ತು 2ನೆ ಪಿಯುಸಿ ಫಲಿತಾಂಶಗಳು ಪ್ರಕಟವಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಕೆಲವರು ಕಡಿಮೆ ಅಂಕಗಳು ಅಥವಾ ಪರಿಕ್ಷೇಯಲ್ಲಿ ಅನುತೀರ್ಣ ಆದ ಕಾರಣಗಳಿಂದ ಮನನೊಂದು ವ್ಯತಿರಿಕ್ತವಾದ ನಿರ್ಧಾರಗಳನ್ನು ತೆಗೆದು ಕೊಳ್ಳುವುದನ್ನು ನೋಡುತ್ತಿದ್ದೇವೆ ಅದು ನಿಲ್ಲಿಸಬೇಕು. ಅಂಕಗಳು ಜೀವನದ ಅಂತಿಮ ಗುರಿ ಅಲ್ಲ, ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು ಎಂದು ತಿಳಿಸಿದರು.
ಬಹಳ ಮುಖ್ಯವಾಗಿ ಫಲಿತಾಂಶದ ದಿನದಂದು ಪೋಷಕರು ಮಕ್ಕಳೊಂದಿಗೆ ಇದ್ದು ಅವರಿಗೆ ಬೆಂಬಲವನ್ನು ನೀಡುವುದು ಹಾಗೂ ಅವರಿಗೆ ಚರ್ಚಿಸಲು ಮುಕ್ತವಾಗಿ ಅವಕಾಶಗಳನ್ನು ನೀಡಬೇಕು, ಪಾಲಕರು ಅವರ ಮಕ್ಕಳ ಫಲಿತಾಂಶವನ್ನು ಬೇರೆ ಮಕ್ಕಳೊಂದಿಗೆ ಹೊಲಿಕೆ ಮಾಡಬಾರದು. ಯಾರೇ ಆದರೂ ಹೊಲಿಕೆಮಾಡಿಕೊಳ್ಳುವುದಾದರೆ ತಮಗೆ ತಮ್ಮನೆನೆ ಹೊಲಿಕೆಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದ ಸಂದರ್ಭದಲ್ಲಿ ಫಲಿತಾಂಶ ಏನೇ ಬಂದರೂ ಆತಂಕಪಡದೇ ಶಾಂತವಾಗಿ ಸ್ವೀಕರಿಸಿ, ಪೋಷಕರು ್ಘ ಶಿಕ್ಷಕರೊಂದಿಗೆ ಮಾತನಾಡಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು, ನಿಮ್ಮ ಆಸಕ್ತಿ ್ಘ ಸಾಮರ್ಥ್ಯಕ್ಕೆ ತಕ್ಕಂತೆ ಮುಂದಿನ ದಾರಿಯನ್ನು ಆರಿಸಿ ಮುಂದಿನ ಗುರಿಗಳನ್ನು ಯೋಜನೆ ಮಾಡಿಕೊಳ್ಳಿ, ಸರಿಯಾದ ಆಹಾರ ನಿದ್ರೆ ್ಘ ವ್ಯಾಯಾಮ ಮಾಡಿ ಆರೋಗ್ಯದ ಕಡೆ ಗಮನ ಕೊಡಿ ಎಂದು ಸಲಹೆ ನೀಡಿದರು.
ಕೆಎಲ್‌ಇ ಶ್ರೀ ಬಿ. ಎಮ್. ಕಂಕಣವಾಡಿ ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಗಳು ಮತ್ತು ಮಾನಸಿಕ ಆರೋಗ್ಯ ಸಮಾಲೋಚನೆ ಕುರಿತು ಮಾಹಿತಿ ಹಂಚಿಕೊಂಡರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 