ಗಾನಯೋಗಿ ಪಂಚಾಕ್ಷರಿ ಗವಾಯಿ ಹಾಗೂ ಡಾ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಆಚರಣೆ

ಗಾನಯೋಗಿ ಪಂಚಾಕ್ಷರಿ ಗವಾಯಿ ಹಾಗೂ ಡಾ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಆಚರಣೆ Commemoration of the death anniversary of Ganayogi Panchakshari Gawai and Dr. Puttaraja Gawai

ಲೋಕದರ್ಶನ ವರದಿ 

ಹುಬ್ಬಳ್ಳಿ 20 : ಗದಗನಲ್ಲಿರುವ ಪ್ರಸಿದ್ದ ಸಂಗೀತ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಅವರ 82ನೇ ಹಾಗೂ ಪದ್ಮಭೂಷಣ ಡಾ. ಪುಟ್ಟರಾಜ ಕವಿ ಗವಾಯಿಗಳು ಅವರ 16ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ದಾನೇಶ್ವರಿ ಸಂಗೀತ ವಿದ್ಯಾಲಯದಲ್ಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಉಭಯ ಪೂಜ್ಯರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪರಮಪೂಜ್ಯ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಪದ್ಮಭೂಷಣ ಡಾ. ಪುಟ್ಟರಾಜ ಕವಿ ಗವಾಯಿಗಳು ಅವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ, ಪೂಜೆ ಸಲ್ಲಿಸಿದರು. ಶ್ರದ್ಧಾ, ಭಕ್ತಿಯಿಂದ ಸಂಗೀತ, ವಚನಗಳನ್ನು ಹಾಡುವುದರ ಮೂಲಕ ಗೌರವಾರೆ​‍್ಣ ಸಲ್ಲಿಸಲಾಯಿತು.    

 ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಗವಾಯಿಗಳು ಮಾಡಿದ ಅಮೋಘ ಸೇವೆಯನ್ನು ಸ್ಮರಣೆ ಮಾಡಲಾಯಿತು. ಮುಖ್ಯ ಅತಿಥಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ  ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಬೇಕು. ನೊಂದ ಮನಸ್ಸಿಗೆ ಸಾತ್ವಾನ ಹೇಳುವ, ಸಂತಸ ಗೋಳಿಸುವ ಅಪಾರವಾದ ಶಕ್ತಿ ಸಂಗೀತಕ್ಕೆ ಇದೆ.  

ಸಂಗೀತ ದಿಂದಾ ಹಲವಾರು ರೋಗಗಳನ್ನು ಹತೋಟಿಯಲ್ಲಿ ಇಡಲು ಸಾಧ್ಯವಿದೆ. ಸಂಗೀತವನ್ನು ಒಂದು ಥೇರಪಿರೂಪದಲ್ಲಿ ಉಪಯೋಗಿಸುವ ಸಾಧ್ಯತೆ ಇದೆ. ನಿಯಮಿತವಾಗಿ ಸಂಗೀತ ಆಲಿಸುತ್ತಾ ಇದ್ದರೆ ಮನಸ್ಸು ಪ್ರಸನ್ನತೆಯಿಂದ ಕೂಡಿರುತ್ತದೆ. ಮಕ್ಕಳು ಶಿಸ್ತು, ಸಮಯ ಪ್ರಜ್ಞೆಯನ್ನು ರೂಡಿಸಿಕೊಳ್ಳಬೇಕು. ಓದಿನ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.  ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವಾರೆ​‍್ಣ ಸಲ್ಲಿಸಿದರು. ಉಭಯ ಶ್ರೀಗಳು ಸಮಾಜಕ್ಕೆ, ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಶ್ರದ್ಧಾ, ಭಕ್ತಿಯಿಂದ ಸ್ಮರಿಸಿದರು.

ಉಭಯ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ದಾನೇಶ್ವರಿ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದರು. ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ, ಕನ್ನಡ ಪ್ರಾಧ್ಯಾಪಕಿ, ಸಂಗೀತ ಗಾಯಕಿ ಪ್ರೊ ಶೋಭಾ ಮಲ್ಲಿಕಾರ್ಜುನ ಜಾಬಿನ್, ಸೋಹನ ಸುರೇಶ ಹೊರಕೇರಿ,  ಸುಜಯ ಸುರೇಶ ಹೊರಕೇರಿ, ಇಂಜಿನಿಯರ್ ಮಲ್ಲಿಕಾರ್ಜುನ ಜಾಬಿನ, ಅನ್ವಿಕಾ, ಅನ್ವಿಕ್ಷಾ , ಸಿಂಚನಾ ,ಹರ್ಷಿಕಾ, ಶ್ರೇಯಾ ,ಕಾವ್ಯ , ವಿನಿಶಾ, ಆರತಿ ಅಹನಾ, ಅನ್ವಿತಾ , ವೇದಾ,    ಗೌತಮ್, ಶ್ರೇಷ್ಟ , ಶಿವಾನಿ, ದ್ರುವಂತ್ ಮುಂತಾದವರು ಭಾಗವಹಿಸಿದ್ದರು. ದಾನೇಶ್ವರಿ ಸಂಗೀತ ಪಾಠಶಾಲೆಯ ಮಕ್ಕಳು ವಚನ ಗಾಯನ ಪ್ರಸ್ತುತಪಡಿಸಿದರು.