ಯುವಜನರಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಬಹಳ ಮುಖ್ಯ: ಸ್ವಾಮಿಜಿ ನಿರ್ಭಯಾನಂದ ಸರಸ್ವತಿಯವರು


ಗದಗ 12: ಯುವಜನರಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಕೀಳರಿಮೆ ಭಯ ತೊರೆದು  ಇಚ್ಛಾಶಕ್ತಿ ಮತ್ತು ಜ್ಞಾನಶಕ್ತಿಯಿಂದ ಯುವಕರು  ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ  ಎಂದು  ರಾಮಕೃಷ್ಣ ವಿವೇಕಾನಂದ ಆಶ್ರಮದ  ಸ್ವಾಮಿಜಿ  ನಿರ್ಭಯಾನಂದ ಸರಸ್ವತಿಯವರು ನುಡಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸಬಲೀಕರಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸ 125ನೇ ವರ್ಷಾಚರಣೆ ಸಮಿತಿ , ಕಾಲೇಜು ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ  ಆಶ್ರಯದಲ್ಲಿ  ಗದಗ ಬೆಟಗೇರಿ ನಗರದ ಎಪಿಎಂಸಿ ಆವರಣದ ವಿವೇಕಾನಂದ ಸಭಾಂಗಣದಲ್ಲಿ ಜರುಗಿದ  ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಾಗೂ ವರ ಚಿಕ್ಯಾಗೋ ಉಪನ್ಯಾಸದ 125 ನೇ ವಷರ್ಾಚರಣೆಯ ಸಮಾರೋಫ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಭಾರತದ ಸಂಸ್ಕೃತಿ, ಗೌರವ ಘನತೆಯನ್ನು ವಿಶ್ವಾದ್ಯಂತ ಪರಿಚಯಿಸಿ ಪಸರಿಸಿದ ವೀರ ಸನ್ಯಾಸಿ ವಿವೇಕಾನಂದರು. ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು ರವೀಂದ್ರನಾಥ ಠಾಕೂರ್ ಅವರು ಭಾರತವನ್ನು ಅಭ್ಯಸಿಸಬೇಕಾದರೆ  ವಿವೇಕಾನಂದರನ್ನು   ತಿಳಿದುಕೊಳ್ಳಬೇಕೆಂದು ಹೇಳಿದ್ದಾರೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಯವರು ತಿಳಿಸಿದರು.   

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಅವರು ಗದಗ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಪ್ರಾರಂಭಿಸಿದ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮುಖ್ಯ ಉದ್ದೇಶವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಗದಗ ಜಿಲ್ಲೆಯು ಕೋಮು ಸೌಹಾರ್ದತೆಗೆ ಹೆಸರಾಗಿದೆ. 125 ವರ್ಷಗಳ ಹಿಂದಿನ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ ಸಂದೇಶಗಳು ಇಂದಿಗೂ ಅತ್ಯವಶ್ಯಕವಾಗಿವೆ. ಬದುಕಿನಲ್ಲಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೌಹಾರ್ದ, ಸ್ವೀಕಾರ, ಶಾಂತಿ  ತತ್ವಗಳನ್ನೊಳಗೊಂಡ   ವಿವೇಕ ವಾಣಿಯನ್ನು ಜೀವನದ್ದುದಕ್ಕೂ ಅಳವಡಿಸಿಕೊಂಡರೆ  ಬಲಿಷ್ಟ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು  ಅವರು ಮಾತನಾಡಿ ಯುವಕರೇ ದೇಶದ ಭವಿಷ್ಯದ ಆಶಾಕಿರಣ. ದೇಶವನ್ನು ಬಲಿಷ್ಟಗೊಳಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಸ್ವಾಮಿ ವಿವೇಕಾನಂದರು ಯುವಕರಿಗೆ  ಸ್ಪೂತರ್ಿಯ ಸೆಲೆ. ಮನೋಬಲದಿಂದ ಯಶಸ್ಸು ಪಡೆಯಬಹುದು ಎನ್ನುವುದನ್ನು ಸ್ವಾಮಿ ವಿವೇಕಾನಂದರು ಸಾರಿದ್ದಾರೆ ಎಂದರು.  

ತೋಂಟದಾರ್ಯ ಮಠದ  ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮಿಜಿ ಹಾಗೂ ಸಾಗರದ ಸದಾನಂದ ಸ್ವಾಮಿಜಿಯವರು  ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸ್ವಾಮಿ ವಿವೇಕಾನಂದ ಚಿಕ್ಯಾಗೋ ಉಪನ್ಯಾಸದ 125 ನೇ ವರ್ಷಾಚರಣೆ ಸಮಿತಿಯ ಕಾರ್ಯಾಧ್ಯಕ್ಷ ಡಿ.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸರ್ವರನ್ನು ಸ್ವಾಗತಿಸಿ  ಸ್ವಾಮಿ ವಿವೇಕಾನಂದರ ಹೆಸರೇ ಒಂದು ಶಕ್ತಿ.  ವಿವೇಕಾನಂದರ ತತ್ವಗಳನ್ನು ಪ್ರತಿಯೊಬ್ಬರೂ  ಅನುಸರಿಸಬೇಕು. ಅವರ  ಚಿಕ್ಯಾಗೋ ಉಪನ್ಯಾಸದ 125 ನೇ ವಷರ್ಾಚರಣೆ ನಿಮಿತ್ತ ಜಿಲ್ಲೆಯ ವಿವಿಧ ಸಂಸ್ಥೆಗಳಲ್ಲಿ 201 ಕಾರ್ಯಕ್ರಮಗಳನ್ನು ಎರ್ಪಡಿಸಿದ್ದು 35 ಸಂಪನ್ಮೂಲ ವ್ಯಕ್ತಿಗಳು ವಿವೇಕಾನಂದರ ಸಂದೇಶಗಳನ್ನು  ಯಶಸ್ವಿಯಾಗಿ  ಜನರಿಗೆ ತಲುಪಿಸಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125 ನೇ ವರ್ಷಾಚರಣೆ ನಿಮಿತ್ತ  ಏರ್ಪಡಿಸಿದ್ದ ಪಿಯು ಕಾಲೇಜಿನಲ್ಲಿ ಎರ್ಪಡಿಸಲಾಗಿದ್ದ ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.      

ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ,    ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ,  ಉಪವಿಬಾಗಾಧಿಕಾರಿ ರಾಯಪ್ಪ ಹುಣಸಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ, ಯುವಜನ ಸಬಲೀಕರಣ  ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕರಾದ ಬಿ.ಬಿ. ವಿಶ್ವನಾಥ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಜನಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೆ.ಎಚ್. ಬೇಲೂರ, ಕೆ.ಬಿ. ತಳಗೇರಿ,  ಚಿಕ್ಕಟ್ಟಿ, ಸ್ವಾಮಿ ವಿವೇಕಾನಂದ ಚಿಕ್ಯಾಗೋ ಉಪನ್ಯಾಸದ 125 ನೇ ವರ್ಷಾಚರಣೆ ಸಮಿತಿಯ ಸದಸ್ಯರು, ಜನಪ್ರತಿನಿಧಿಗಳು, ಕಾಲೇಜು ವಿದ್ಯಾಥರ್ಿ ವಿದ್ಯಾಥರ್ಿನಿಯರು, ಶಿಕ್ಷಕವೃಂದ, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೆ.ಕೆ. ಜಮಾದಾರ, ವಿವೇಕಾನಂದ ಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.