ಆನಂದ ಕೋಳಿಗುಡ್ಡೆ
ಲೋಕದರ್ಶನ ವರದಿ
ಹಾರೂಗೇರಿ 11: ಗ್ರಾಮೀಣ ಭಾಗದಲ್ಲಿರುವ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉತ್ತಮವಾದ ಮಾರ್ಗದರ್ಶನ ನೀಡುವುದುದಕ್ಕೆ ಗಣಕಯಂತ್ರ ಡಿಜಿಟಲ್ ಶಿಕ್ಷಣ ಮುಖ್ಯವಾಗಿದ್ದೆ. ಶಿಕ್ಷಕರ ಮಕ್ಕಳು ಶಿಕ್ಷಕ ಇಂಜಿನಿಯರ್, ಮಕ್ಕಳು ಇಂಜಿನಿಯರ್, ವೈದ್ಯರ ಮಕ್ಕಳು ವೈದ್ಯರು ಹೀಗೆ ಈ ಹಿಂದೆ ಇತ್ತು ಈಗ ರೈತರ ಮಕ್ಕಳು ಕೂಡಾ ದೇಶದಲ್ಲಿ ಎನ್ನಾದರು ಸಾಧನೆ ಮಾಡಿ ತೊರಿಸುತ್ತಾರೆ. ವೈದ್ಯಾಜ್ಞಾನಿಕವಾದ ಕೃಷಿ ದೇಶದಲ್ಲಿ ಪ್ರಾರಂಭವಾಗಿದ್ದೆ ರೈತರಿಗೆ ಹೆಚ್ಚಿನ ಲಾಭಕ್ಕಾಗಿ ಉನ್ನತ ಡಿಜಿಟಲ್ ಶಿಕ್ಷಣ ಮಕ್ಕಳಿಗೆ ಅವಶ್ಯವಾಗಿದ್ದೆಂದು ಉಪಮುಖ್ಯ ಮಂತ್ರಿ, ಸಾರಿಗೆ ಮತ್ತು ಕೃಷಿ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು. ಅವರು ಪಟ್ಟಣದ ಶ್ರೀ ಮಲ್ಲಿಕಾರ್ಜುನ್ ಫೌಂಡೇಶನ್ (ರಿ) ಸಂಸ್ಥೆ ಶೇಗುಣಸಿಯ ಶ್ರೀ ಎಸ್. ಎಮ್. ನಾರಗೊಂಡ ಇಂಟರನ್ಯಾಶನಲ್ ಸ್ಕೂಲ್ ಸಹ ಶಿಕ್ಷಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣಕಯಂತ್ರ ಪ್ರಯೋಗಾಲಯ ಹಾಗೂ ಡಿಜಿಟಲ್ ತರಗತಿಗಳ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ ಅವರು. ನಮ್ಮ ದೇಶದಲ್ಲಿ ಮುಖ್ಯವಾಗಿ ಆಧುನಿಕ ಕೃಷಿ ಪ್ರಧಾನವಾಗಬೇಕು. ಗ್ರಾಮೀಣ ಭಾಗದಲ್ಲಿರುವ ಮಕ್ಕಳಿ ನಗರ ಪ್ರದೇಶದಲ್ಲಿ ಹೋಗಿ ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಉನ್ನತ ಗಣಕಯಂತ್ರ ಡಿಜಿಟಲ್ ಶಿಕ್ಷಣ ಸಂಸ್ಥೆಯು ಪ್ರಾರಂಭವಾಗಿದ್ದು ಹೆಮ್ಮೆವಾಗಿದ್ದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಆಫ್ ಮೂಲಕ ಮಕ್ಕಳ ಶಿಕ್ಷಣ ಬಗ್ಗೆ ಮಾಹಿತಿ ಪಡೆದುಕೊಂಡು ಮಕ್ಕಳಿ ಶಿಕ್ಷಣ ಬಗ್ಗೆ ಸಂಪೂರ್ಣವಾಗಿ ಈ ಆಫ್ನಲ್ಲಿ ಮಾಹಿತಿ ಪೋಷಕರು ಪಡೆದುಕೊಂಡು ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಿ ಉನ್ನತ ಶಿಕ್ಷಣವನ್ನು ಪ್ರಾಮಾಣಿಕವಾಗಿ ಈ ಸಂಸ್ಥೆಯು ನೀಡುತ್ತಿದ್ದೆಂದು ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಮ್ಮ ಮಕ್ಕಳಿಗೆ ಯಾವ ಶಿಕ್ಷಣ ನೀಡಬೇಕು ಅವರುಗಳಿಗೆ ಯಾವ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಇರುವ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಅರಿತುಕೊಂಡು ಮಕ್ಕಳಿಗೆ ಶಿಕ್ಷಣ ನೀಡುವುದು ತುಂಬಾ ಮುಖ್ಯಾವಾಗಿದ್ದೆ. ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಅವರು ಆರೋಗ್ಯವು ಸದೃಡವಾಗಿರಬೇಕು ಪೋಷಕರು ಮಕ್ಕಳಿಗೆ ಓಡಿಕೊಳ್ಳುವುದಕ್ಕೆ ಎಷ್ಟು ಆಸಕ್ತಿ ತೊಂರಿಸುತ್ತಾರೆ ಅಷ್ಟು ಕ್ರೀಡೆ ಮತ್ತು ವಿಶ್ರಾಂತಿ ನೀಡಬೇಕು. ಕೆಳಮಟ್ಟದಿಂದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿರು ಅವರುಗಳು ಶಿಕ್ಷಣದೊಂದಿಗೆ ಸಮಾಜಿಕ ಕಳಕಳಿ ಹಾಗೂ ವೃತಿಯಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಳ್ಳುವುದ್ದರಲ್ಲಿ ಯಾವುದೇ ಸಂದೇಹವಿಲ್ಲ. ಶಿಕ್ಷಕರು ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಹೋದರು ಸಹ ಅದರಲ್ಲಿ ಅವರಿಗೆ ಯಶ್ವಸು ದೊರೆಯುವ ಹಾಗೆ ತಯಾರಿ ಮಾಡುವ ಜವಾಬ್ದಾರಿಯನ್ನು ಹೋದಿರಬೇಕು. ಮಕ್ಕಳಿಗೆ ಇತಿಹಾಸದ ಬಗ್ಗೆ ಮಾಹಿತಿ ನೀಡಿದರೆ ಅವರುಗಳು ಹೊಸ ಇತಿಹಾಸವನ್ನು ನಿರ್ಮಾಣ ಮಾಡುತ್ತಾರೆ. ಅದರೊಂದಿಗೆ ಕೌಶ್ಯಲ ಶಿಕ್ಷಣ ನೀಡಬೇಕು. ಮಕ್ಕಳಿಗೆ ಮುಖ್ಯವಾಗಿ ಜೀವನದ ಪರೀಕ್ಷೆಯಲ್ಲಿ ಆತ್ಮವಿಶ್ವಾಸ, ಪರಿಶ್ರಮವಾಗುವ ಬುದ್ದಿಯನ್ನು ನೀಡಬೇಕು, ದೇಶ ಪ್ರೇಮಬಗ್ಗೆ ಮಕ್ಕಳಿ ಕಲಿಸಿ ಕೊಂಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದಕ್ಕೆ ಪೋಷಕರು ಹಾಗೂ ಶಿಕ್ಷಕರಿಬ್ಬರು ಕೈ ಜೋಡಿಸಿದ್ದಾಗ ಮಾತ್ರ ಮಕ್ಕಳ ಭವಿಷ್ಯ ಉತ್ತಮವಾಗುತ್ತದ್ದೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಾಗೂ ಸೃಜನಶೀಲ ಅಧ್ಯಾಪನಾ ಕೇಂದ್ರ ಬೆಂಗಳೂರಿನ ಗುರುರಾಜ ಕರಜಗಿ ಕರೆ ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಸ. ಸ. ಹಣಮಂತ ಮಹಾರಾಜರು ವಹಿದಿ ಆಶರ್ೀವಚನ ನೀಡಿದರು, ರಾಯಬಾಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎ. ಭಜಂತ್ರಿ, ಇಂದಿನ ಶಿಕ್ಷಣ ಮಕ್ಕಳು ಗುಣಾತಂಕವಾಗಿರಬೇಕು ಅದಕ್ಕೆ ಮುಖ್ಯವಾಗಿ ಶಿಕ್ಷಕರು ಪ್ರಾಮಾಣಿಕವಾಗಿ ಬೋದನೆ ಮಾಡಬೇಕೆಂದು ಹೇಳಿದರು, ಈ ಕಾರ್ಯಕ್ರಮದ ಅಧ್ಯಕ್ಷ ಪರ ಮಾತನಾಡಿ ಡಾ. ಗೀರಿಶ ನಾರಗೊಂಡ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದ ಅತಿ ಹೆಚ್ಚು ಅನೂಕೂಲ ಮಾಡುತ್ತದೆ ಎಂದು ಮಾತನಾಡಿದ್ದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಶ್ರೀ. ಎಸ್. ಎಮ್. ನಾರಗೊಂಡ ಇಂಟರನ್ಯಾಶಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಶೈಲ ನಾರಗೊಂಡ, ಬಸನಗೌಡಾ ಆಸಂಗಿ, ಜೀನಪ್ಪ ಅಸ್ಕಿ, ಈರಣ್ಣಗೌಡಾ ಪಾಟೀಲ, ಅಣ್ಣಪಾಗೌಡಾ ಪಾಟೀಲ, ಭೀಮು ಬದ್ನಿಕಾಯಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಮೃತ್ತುಜಯ ನಾರಗೊಂಡ, ವಿಶ್ವನಾಥ ನಾರಗೊಂಡ, ಅಪ್ಪಾಸಾಬ ನಾರಗೊಂಡ, ಪ್ರಾಚಾರ್ಯರಾದ ಡಿ.ಎಸ್. ಕುಟ್ಟೆ, ಡಿಸಿಸಿ ಬ್ಯಾಂಕ ನಿದೇಶಕರಾದ ಅಶೋಕ ಅಮ್ಮನಗಿ, ತಮ್ಮಣ್ಣ ತೇಲಿ, ಮಹತೇಶ ಮುಗಳಖೋಡ ಹಾಗೂ ಶ್ರೀಮತಿ ರೇಖಾ ಸವದಿ ನಿರೂಪಿಸಿದರು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕ ನಾರಗೊಂಡ ಪ್ರಾಸ್ತಾವಿಕ ಹಾಗೂ ಸ್ವಾಗತಿಸಿದ್ದರು, ದೀಪಾ ಬಿಳ್ಳೂರ ವಂದಿಸಿದ್ದರು.