ಡಿಜಿಟಲ್ ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸಿದ ಸುನಂದಾ ವಾಲಿಕಾರ

Digital Smart Class was inaugurated by Sunanda Valikara

ಡಿಜಿಟಲ್ ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸಿದ ಸುನಂದಾ ವಾಲಿಕಾರ 

ಲೋಕದರ್ಶನ ವರದಿ  

ಇಂಡಿ 28: ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ಹೊಂದಿದವರು ಭಾಗ್ಯವಂತರು. ಅಂತಹ ಗ್ರಾಮೀಣ ಭಾಗಗಳಲ್ಲಿರುವ ವಿದ್ಯಾರ್ಥಿಗಳೆ ಇಂದು ಅಧಿಕವಾಗಿ ಉನ್ನತ ಹುದ್ದೆ ಹಾಗೂ ಸೇವೆಯಲ್ಲಿ ತೊಡಗಿರುವುದನ್ನು ಕಾಣುತ್ತಿದ್ದೇವೆ. ಅಂತಹ ಸರಕಾರಿ ಶಾಲೆಗಳಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾಗ ಆ ಶಾಲೆಗೆ ಉದಾರ ಮನಸ್ಸಿನ ನೆರವು ನೀಡಬೇಕು ಎಂದು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಅವರು ಹೇಳಿದರು. 

ತಾಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಸ್ಮಾರ್ಟ್‌ ಕ್ಲಾಸ್, ವಿಜ್ಞಾನ ವಸ್ತು ಪ್ರದರ್ಶನ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು.  

ಮಕ್ಕಳಲ್ಲಿ ವಿದ್ಯೆಯ ಜತೆಯಲ್ಲಿ ಸಂಸ್ಕಾರವೂ ಬಹು ಮುಖ್ಯ. ತಂದೆ-ತಾಯಿ ಹಾಗೂ ಶಾಲೆಯ ಗುರುಗಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂದು ಹೇಳಿದರು. ನಂತರ ಮಾತನಾಡಿದ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಅವರು ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಸ್ಮಾರ್ಟ್‌ ಕ್ಲಾಸ್‌ಗಳು ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿವೆ. ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಪ್ರಬಲವಾದ ಅಸ್ತ್ರವೆಂದರೆ ಶಿಕ್ಷಣ ಎಂದು ಅವರು ಹೇಳುತ್ತಾರೆ. ತರಗತಿ ಕೊಠಡಿಗಳು ಜನರು ಈ ಅಸ್ತ್ರಗಳನ್ನು ಹೇಗೆ ಬಳಸಬೇಕೆಂದು ಕಲಿಯುವ ತರಬೇತಿ ಕೇಂದ್ರಗಳಾಗಿವೆ. ಜ್ಞಾನವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಹೇಳಿದರು. 

ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸ್ಮಾರ್ಟ್‌ ಕ್ಲಾಸ್‌ರೂಮ್ ಎಂದರೆ ಡಿಜಿಟಲ್ ಕ್ಲಾಸ್‌ರೂಮ್, ಇದು ದಕ್ಷತೆಯನ್ನು ಸುಧಾರಿಸಲು ವಿಭಿನ್ನ ಬೋಧನಾ ವಿಧಾನಗಳನ್ನು ಅನುಸರಿಸುವ ಶಾಲೆಯ ಮುಂದುವರಿದ ರೂಪವಾಗಿದೆ. ಅವರು ಕಲಿಕೆಗೆ ಉತ್ತಮ ವಾತಾವರಣವನ್ನು ಒದಗಿಸುವತ್ತ ಕೆಲಸ ಮಾಡುತ್ತಾರೆ ಮತ್ತು ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಆರೋಗ್ಯಕರ ತರಗತಿಗೆ ಆದ್ಯತೆ ನೀಡುತ್ತಾರೆ. ಅಂತಹ ತರಗತಿಯು ತಮ್ಮ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ವೀಡಿಯೊಗಳು ಮತ್ತು ಆಡಿಯೊದಂತಹ ಡಿಜಿಟಲ್ ಬೋಧನಾ ವಿಧಾನಗಳನ್ನು ಬಳಸುತ್ತದೆ. ಅವರು ಪ್ರಯೋಗಕ್ಕಾಗಿ ವರ್ಚುವಲ್ ರಿಯಾಲಿಟಿ ಬಳಸುವಂತಹ ಕೆಲವು ಸುಧಾರಿತ ತಾಂತ್ರಿಕ ವಿಧಾನಗಳನ್ನು ಸಹ ಒದಗಿಸಬಹುದು. ಈ ತಂತ್ರಗಳು ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ನಮ್ಮ ದೈನಂದಿನ ಜೀವನಕ್ಕೆ ಹೇಗೆ ಅನ್ವಯಿಸಬಹುದು.  

ಇಂಡಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡಗಡ್ಡಿ, ತಡವಲಗಾ ವಲಯ ಶಿಕ್ಷಣ ಸಂಯೋಜಕ ಆನಂದ ಹುಣಸಗಿ ಪಿ ವಾಯ್ ದಳವಾಯಿ, ಎಸ್ ಎನ್ ಕೋಳೆಕಾರ, ವಾಯ್ ಟಿ ಪಾಟೀಲ, ಟಿ ಕೆ ಜಂಬಗಿ, ಅಲಾಭಕ್ಷ ಚೌಧರಿ, ಪಿ ಎಸ್ ಚಾಂದಕೊಠೆ, ಎಸ್ ಎನ್ ಹರಳಯ್ಯ, ಸಿ ಎಸ್ ಹಕಾರೆ, ಹಣಮಂತ ಪೂಜಾರಿ, ಗ್ರಾಮದ ಮುಖಂಡರಾದ ಚಂದ್ರಶೇಖರ ರೂಗಿ, ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ, ಸುನಂದಾ ನಡುವಿನಕೇರಿ, ರಾಜು ಧಡೇದ, ಸಂತೋಷ ಸಾರವಾಡ, ಚಂದ್ರು ಮೇಲಿನಮನಿ, ಕಲ್ಲಪ ಖಸ್ಕಿ, ಅನೀಲ ರೇಬಿನಾಳ, ಮಲ್ಲಿಕಾರ್ಜುನ ಗುಡ್ಲಮನಿ, ಧರೇಪ್ಪ ತೇಲಿ, ರಮೇಶ ಬಡಿಗೇರ, ಚಿದಾನಂದ ಇಂಡಿ, ತಡವಲಗಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ವಿಠೋಬಾ ವಿಜಾಪೂರ, ಸರ್ವ ಸದಸ್ಯರು ಉಪಸ್ಥಿತರಿದ್ದರು.