ಕಷ್ಟಗಳು ಗುಣಗಳನ್ನು ಒರೆಗೆ ಹಚ್ಚಿ, ಹೊಳಪು ಹೆಚ್ಚಿಸುತ್ತವೆ: ಮಠಪತಿ

10(ಶೇಡಬಾಳ-1) ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾಲೇಜು ಯುನಿಯನ್ ಹಾಗೂ ಕನರ್ಾಟಕ ಸಾಂಸ್ಕೃತಿಕ ಸಂಘದ ಕಾರ್ಯಚಟುವಟ

    ಶೇಡಬಾಳ 11: ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮದಿಂದ ಜೀವನದಲ್ಲಿ ಎನನ್ನಾದರೂ ಸಾಧಿಸಬಹುದು. ಕಷ್ಟಗಳನ್ನು ಎದುರಿಸಬೇಕು. ಅವು ನಮ್ಮ ಗುಣಗಳನ್ನು ಒರೆಗೆ ಹಚ್ಚಿ, ಹೊಳಪು ಹೆಚ್ಚಿಸುತ್ತವೆ. ವಿದ್ಯಾಥರ್ಿ ಜೀವನವೇ ಬಂಗಾರದ ಜೀವನವಲ್ಲ, ಅದು ಭವಿಷ್ಯದ ಬಂಗಾರದ ಜೀವನಕ್ಕೆ ಸಾಧನವೆಂದು ಬೆಳಗಾವಿ ಕೆಎಲ್ಇಯ ಲಿಂಗರಾಜ ಕಾಲೇಜಿನ ಅರ್ಥಶಾಸ್ತ್ರ ಸಹಪ್ರಾಧ್ಯಾಪಕ ಪ್ರೊ. ಜಿ.ಎ.ಮಠಪತಿಯವರು ಹೇಳಿದರು.

ಅವರು ಶುಕ್ರವಾರ ದಿ. 10 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾಲೇಜು ಯುನಿಯನ್ ಮತ್ತು ಕನರ್ಾಟಕ ಸಾಂಸ್ಕೃತಿಕ ಸಂಘಗಳ 2018-19ನೇ ವರ್ಷದ ಕಾರ್ಯಚಟುವಟಿಕೆಗಳ  ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 

ಈ ಕಾಲೇಜಿನ ಹಳೆಯ ವಿದ್ಯಾಥರ್ಿಯೂ ಆಗಿದ್ದ ಅವರು ಅರವತ್ತರ ದಶಕದಲ್ಲಿ ಗಡಿನಾಡಿನಲ್ಲಿದ್ದ ಈ ಕಾಲೇಜು ಎಷ್ಟೊಂದು ಪ್ರಗತಿ ಸಾಧಿಸಿದೆಯೆಂದು ಅಭಿಮಾನಪೂರ್ವಕವಾಗಿ ಹೇಳುತ್ತಾ, ತಮ್ಮ ವಿದ್ಯಾಥರ್ಿ ಜೀವನವನ್ನು ನೆನಪಿಸಿಕೊಂಡರು. ಇದು ನನ್ನ ಮಹಾವಿದ್ಯಾಲಯವೆಂದು, ಇಲ್ಲಿ ಕಲಿತ ವಿದ್ಯಾಥರ್ಿಗಳಿಗೆ ಉಜ್ವಲ ಭವಿಷ್ಯವಿದೆಯೆಂದು ಹೆಮ್ಮೆಯಿಂದ ಹೇಳಿದರು. 

ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿಯವರು ಸಿದ್ಧೇಶ್ವರ  ಗುರುಗಳ ನುಡಿಗಳನ್ನು ಉಚ್ಛರಿಸುತ್ತಾ, ಒಂದು ಕಾಲು ಮುಂದಿದೆ, ಇನ್ನೊಂದು ಕಾಲು ಹಿಂದಿದೆ. ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನದಕ್ಕೆ ಅಂಜಿಕೆಯಿಲ್ಲ, ಹಿಂದಿನದು ಮುಂದಾಗುತ್ತದೆ, ಮುಂದಿನದು ಹಿಂದಾಗುತ್ತದೆ. ಹೀಗೆ ಜೀವನದಲ್ಲಿ ಸೋಲು-ಗೆಲವು ಅಲ್ಪಾವಧಿ ಮಾತ್ರ ಯಾವುದು ಶಾಶ್ವತವಲ್ಲವೆಂದು ಹೇಳಿದರು. 

ಸನ್ನಿದಾನ ನೀಡಿದ ಏಕನ್ಯಾಸಧಾರಿ ಯತೀಶ್ವರಾನಂದ ಸ್ವಾಮೀಜಿಯವರು ಮಹಾತ್ಮರು ಸ್ಥಾಪಿಸಿದ ಈ ಮಹಾವಿದ್ಯಾಲಯ ವಿದ್ಯಾಥರ್ಿಗಳಿಗೆ ಮಹಾನ್ ಆಶ್ರಯ ಸ್ಥಾನವಾಗಿದ್ದು, ಗಡಿನಾಡಿನಲ್ಲಿ ಉನ್ನತ ಶಿಕ್ಷಣ ನೀಡುತ್ತಿದೆ. ತನ್ನ ಸಾರ್ಥಕತೆ ಸಾಧಿಸಿದೆಯೆಂದು ಆಶೀರ್ವಚನದಲ್ಲಿ ಹೇಳಿದರು. 

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಕಾಲೇಜು ಒಕ್ಕೂಟ ಮತ್ತು ಕನರ್ಾಟಕ ಸಾಂಸ್ಕೃತಿಕ ಸಂಘದ ಕಾರ್ಯಧ್ಯಕ್ಷರಾದ ಪ್ರೊ.ಎಸ್.ಎಸ್.ಬಾಗನೆಯವರು ಸ್ವಾಗತಿಸುತ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆ ಮೇಲೆ ವಾಣಿಜ್ಯಶಾಸ್ತ್ರ ಮುಖ್ಯಸ್ಥರಾದ ಡಾ.ಎಸ್.ಓ.ಹಲಸಗಿ, ಆದರ್ಶ ವಿದ್ಯಾಥರ್ಿ ಎಸ್.ಐ.ಜಂಗಮಶೆಟ್ಟಿ, ಆದರ್ಶ ವಿದ್ಯಾಥರ್ಿನಿ ಎ.ಆರ್.ದಶಾವಂತ ಉಪಸ್ಥಿತರಿದ್ದರು. 

ಸವಿತಾ ಕವಟೇಕರ ಹಾಗೂ ಸಂಗಡಿಗರು ಸ್ವಾಗತಗೀತೆ ಹೇಳಿದರು. ಡಾ.ಎಸ್.ಎ.ಕಕರ್ಿಯವರು ವಂದಿಸಿದರು.  

ಸಂಘದ ಸದಸ್ಯರಾದ ಪ್ರೊ.ಬಿ.ಡಿ.ದಾಮಣ್ಣವರ, ಪ್ರೊ.ವ್ಹಿ.ಬಿ.ಬುಲರ್ೆ ಹಾಗೂ ಪ್ರೊ.(ಮಿಸ್)ಬಿ.ಎಸ್.ಕಾಮತ ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.