ಡೈಮಂಡ್ ಪಾರ್ಕ ನಿರ್ಮಾಣ ಕಾನೂನು ಬಾಹೀರ: ತಹಶೀಲದಾರರಿಗೆ ಮನವಿ

ಡೈಮಂಡ್ ಪಾರ್ಕ ನಿರ್ಮಾಣ ಕಾನೂನು ಬಾಹೀರ: ತಹಶೀಲದಾರರಿಗೆ ಮನವಿ Diamond Park construction illegal: Appeal to Tahsildars

ಡೈಮಂಡ್ ಪಾರ್ಕ ನಿರ್ಮಾಣ ಕಾನೂನು ಬಾಹೀರ: ತಹಶೀಲದಾರರಿಗೆ ಮನವಿ 

ಚಡಚಣ 04: ಇತ್ತೀಚಿಗೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಡೈಮಂಡ ಪಾರ್ಕ ಸಂಪೂರ್ಣ ಕಾನೂನು ಬಾಹೀರವಾಗಿ ನಿರ್ಮಿಸಲಾಗಿದೆ. ಇದು ಸಿಟಿ ಸರ್ವೆಯಲ್ಲಿ ಬರುವದಿಲ್ಲ. ಆದರೂ ಚಡಚಣ ಪ.ಪಂ.ನವರು ಈಗಾಗಲೇ ಸುಮಾರು 40ಅ ಉತಾರೆಗಳನ್ನು ನೀಡಿದ್ದಾರೆ ಎಂದು ಸೋಮಶೇಖರ ಪಟ್ಟಣಶೆಟ್ಟಿ ಆರೋಪಿಸಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. 

  ಮನವಿ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣವು 2016ರಲ್ಲಿ ಗ್ರಾ.ಪಂ.ನಿಂದ ಪ.ಪಂ.ಗೆ ಮೇಲ್ದರ್ಜೆಗೇರಿದ್ದು, ಪಟ್ಟಣವು ಪ.ಪಂ.ಗೆ ಮೇಲ್ದರ್ಜೆಗೇರುವ ಸಮಯದಲ್ಲಿ ಹೊರಡಿಸಿದ ರಾಜ್ಯಪತ್ರದನ್ವಯ ಘೋಷಿತ ಪ.ಪಂ. ವ್ಯಾಪ್ತಿಯಲ್ಲಿರುವ ಸ.ನಂ.ಗಳು ಚಡಚಣ ಗ್ರಾಮ ಠಾಣಾ 1 ರಿಂದ 6ರ ವರೆಗೆ, 48 ರಿಂದ 81ರ ವರೆಗೆ, 99 ರಿಂದ 107ರ ವರೆಗೆ, 122, 124 ರಿಂದ 135ರ ವರೆಗೆ, 163 ರಿಂದ 186ರ ವರೆಗೆ, 191 ರಿಂದ 216ರ ವರೆಗೆ, 218 ರಿಂದ 223ರ ವರೆಗೆ, 242, 342 ರಿಂದ 359ರ ವರೆಗೆ, 444 ರಿಂದ 446ರ ವರೆಗೆ, ರಿಂದ 458, 459, 480, 481, 485 ರಿಂದ 495ರ ವರೆಗೆ, 499 ರಿಂದ 502ರ ವರೆಗೆ, 504, 505 ಸ.ನಂ. ಗಳು ಪಟ್ಟಣ ವ್ಯಾಪ್ತಿಗೆ ಸೇರುತ್ತವೆ ಎಂದು ಪ.ಪಂ. ಮುಖ್ಯಾಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ. ಆದರೆ, ಡೈಮಂಡ ಪಾರ್ಕ ನಿರ್ಮಿಸಲಾಗಿರುವ ಸ.ನಂ.ಗಳಾದ 244/2, 245/1, 245/2, 246/* ಈ ಸರ್ವೇ ನಂಬರಗಳು ಚಡಚಣ ಪ.ಪಂ. ವ್ಯಾಪ್ತಿಗೆ ಬರುವದಿಲ್ಲ ಎಂಬುದು ಪ.ಪಂ. ಮುಖ್ಯಾಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೂ ಈ ಸ.ನಂ.ಗಳನ್ನು ಭೂಪರಿವರ್ತನೆ ಮಾಡಿ, ಸುಮಾರು 40 ಎಕರೆ 38 ಗುಂಟೆ ಜಾಗೆಯಲ್ಲಿ ವಿವಿಧ ಅಳತೆಯ 759 ಪ್ಲಾಟುಗಳನ್ನು ನಿರ್ಮಿಸಿದ್ದಾರೆ. ಆ ಪ್ಲಾಟುಗಳ  ಪೈಕಿ ಸುಮಾರು 40ಅ ಪ್ಲಾಟುಗಳ ಉತಾರೆಯನ್ನು ಪ.ಪಂ.ನಿಂದ ಪೂರೈಸಲಾಗಿದೆ ಎಂದು ಆರೋಪಿಸಿದ ಅವರು, ಇದನ್ನು ಕೂಲಂಕುಶವಾಗಿ ಪರೀಶೀಲಿಸಿ, ಪ.ಪಂ.ನವರು ನೀಡಿದ ಉತಾರೆಗಳನ್ನು ತಕ್ಷಣವೇ ರದ್ದುಗೊಳಿಸಿ,  ಸಾರ್ವಜನಿಕರಿಗೆ ಆಗುವ ಅನ್ಯಾಯವನ್ನು ತಪ್ಪಿಸಿ, ಮಾನ್ಯರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.