ದ್ಯಾಮಮ್ಮದೇವಿ ಪುರಾಣ ಮಹಾಮಂಗಲೋತ್ಸವ

ಲೋಕದರ್ಶನ ವರದಿ

ಯಲಬುರ್ಗಾ : ಪಟ್ಟಣದ ಗ್ರಾಮ ದೇವತೆ ದಾಮಮ್ಮದೇವಿ  ದೇವಸ್ಥಾನದಲ್ಲಿ ಪ್ರತಿವರ್ಷದ ಪದ್ದತಿಯಂತೆ ದೇವಿಯ ಪುರಾಣ ಮಹಾಮಂಗಲೋತ್ಸವ  ಕಾರ್ಯಕ್ರಮದಂಗವಾಗಿ ದೇವಿಯ ಮೇರವಣಿಗೆ ಜರುಗಿ ನಂತರ ಅನ್ನ ಸಂತರ್ಪಣೆ ಜರುಗಿತು.

ರಾತ್ರಿ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಸಾಗಿಬಂದಿತು. ಇದೆ ಸಮಯದಲ್ಲಿ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಗಿತು. ನಂತರ ಕಲಾವಿದರಿಗೆ ಮತ್ತು  ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಗಿತು.

ಪುರಾಣ ಪ್ರವಚನ ನೆಮ್ಮದಿಯ ಬದುಕಿಗೆ ದಾರಿದೀಪವಾಗಿವೆ, ನಮ್ಮಲ್ಲಿರುವ ಚಿಂತೆಗಳು ದೂರವಾಗಿ ಆನಂದಮಯವಾಗಿ ಇರುವದಕ್ಕೆ ಸಾಧ್ಯವಾಗುತ್ತದೆ ಎಂದು ಪುರಾಣ ಸಮಿತಿಯ ಸಂಚಾಲಕ ಶರಣಬಸಪ್ಪ ದಾನಕೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಿದ ಪ್ರಯುಕ್ತವಾಗಿ ಇಂತಹ ಧಾಮರ್ಿಕ ಕಾರ್ಯಕ್ರಮಗಳನ್ನು ಮಾಡುವದಕ್ಕೆ ಭಕ್ತರಿಂದ ಮಾತ್ರ ಸಾಧ್ಯ, ನಿಮ್ಮೇಲ್ಲರ ಸಹಕಾರದಿಂದ ದೇವಸ್ಥಾನಗಳು ಅಭಿವೃದ್ದಿಹೊಂದುವದಕ್ಕೆ ಸಾಧ್ಯ ಎಂದು ಪುರಾಣ ಸಮಿತಿ ಅಧ್ಯಕ್ಷ ಮಲ್ಲೇಶಗೌಡ ಮಾಲಿ ಪಾಟೀಲ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಾ.ಶರಣಪ್ಪ ಕೊಪ್ಪಳ, ಪ.ಪಂ.ಸದಸ್ಯ ಅಶೋಕ ಅರಕೇರಿ, ಪ್ರವಚನಕಾರ ಗುರುಮೂತರ್ಿ ಶಾಸ್ತ್ರೀ ಪತ್ತಾರ ಮಾತನಾಡಿದರು.ಸಂಗೀತ ಬಳಗದವರಾದ ಶಿವಾನಂದಪ್ಪ ಮಾಸ್ತರ, ಉಮೇಶ ಬಡಿಗೇರ, ಸುನೀಲ್. ಪ್ರಶಾಂತ ಬಡಿಗೇರ ಶ್ರೀಶೈಲಪ್ಪ ಗೊಂಡಬಾಳ ಸೇವೆ ಸಲ್ಲಿಸಿದರು.

ಮುಖಂಡರಾದ ಶರಣಗೌಡ ಕೊಡಗಲಿ, ಮನೋಹರ ಬಡಿಗೇರ,ವೀರುಪಾಕ್ಷಪ್ಪ ಗಂಧದ, ಗುರುಲಿಂಗಪ್ಪ ಬೇಲೇರಿ, ಅಚ್ಚಪ್ಪ, ಚಂದ್ರು ಬಡಿಗೇರ, ಬಸವಂತಪ್ಪ ಅರಗಂಜಿ, ಅರುಣಕುಮಾರ, ಇತರರು ಇದ್ದರು.ಚಂದ್ರಶೇಖರ ಕಮ್ಮಾರ ವಂದಿಸಿದರು.