ಧೋನಿ ಪಾರ್ಮ್, ಕ್ಯಾಪ್ಟನ್ ಕೊಹ್ಲಿ ವರ್ಕ್​ಲೋಡ್ ಆಯ್ಕೆಯ ವಿಷಯಗಳು

ಇಂದು ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡ ಆಯ್ಕೆ

ಮುಂಬೈ: ಕ್ಯಾಪ್ಟನ್  ಕೊಹ್ಲಿಯ  ವರ್ಕ್ಲೋಡ್ ಮತ್ತು  ಮಿಸ್ಟರ್  ಕೂಲ್  ಎಂ.ಎಸ್. ಧೋನಿ  ಫಾರ್ಮ್  ವಿಷಯಗಳೆ  ಮುಂಬರುವ  ವೆಸ್ಟ್  ಇಂಡೀಸ್  ವಿರುದ್ಧದ  ಸೀಮಿತ ಓವರ್ಗಳ ಸರಣಿಗೆ ತಂಡವನ್ನ  ಆಯ್ಕೆ ಮಾಡಲು  ಪ್ರಮುಖ ವಿಷಯವಾಗಿವೆ.

ವೆಸ್ಟ್  ಇಂಡೀಸ್  ವಿರುದ್ಧದ  ಏಕದಿನ ಸರಣಿಗೆ  ನಾಳೆ  ತಂಡ  ಪ್ರಕವಾಗಲಿದ್ದು  ಆಯ್ಕೆ ಮಂಡಳಿ  ಇಡೀ  ಸರಣಿಗೆ ತಂಡವನ್ನ  ಪ್ರಕಟಿಸುತ್ತಾ  ಅಥವಾ  ಮೊದಲು  ಮೂರು  ಪಂದ್ಯಗಳಿಗೆ ಮಾತ್ರ  ತಂಡವನ್ನ  ಪ್ರಕಟಿಸುತ್ತಾ  ಅನ್ನೊದನ್ನ ಕಾದು ನೋಡಬೇಕಿದೆ.   ಎಂ.ಎಸ್.ಧೋನಿ  ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರೋದ್ರಿಂದ  ಯುವ ಬ್ಯಾಟ್ಸ್ ಮನ್  ರಿಷಭ್  ಪಂತ್ ಗೆ ಮಣೆ ಹಾಕುವ ಸಾಧ್ಯತೆ ಇದೆ

ಧೋನಿ ಅವರು  ವಿಶ್ವಕಪ್ವರೆಗೂ  ಆಡುತ್ತಾರೆ  ಅನ್ನೋದು  ಎಲ್ಲರಿಗೂ  ಗೊತ್ತಿರೋ  ವಿಚಾರಪಂತ್ಗೆ  ಅವಕಾಶ ಕೊಡುವುದರಿಂದ  ಯಾರಿಗೂ  ತೊಂದರೆಯಿಲ್ಲಪಂತ್ಗೆ  ಮ್ಯಾಚ್  ಫಿನಿಶರ್ರಾಗೋ ಸಾಮರ್ಥ್ಯ ಇರೋದ್ರಿಂದ  ಆರು  ಅಥವಾ ಏಳನೇ  ಕ್ರಮಾಂಕದಲ್ಲಿ  ಆಡಬಹುದಾಗಿದೆ

ಇನ್ನು  ಕ್ಯಾಪ್ಟನ್  ಕೊಹ್ಲಿ  ಏಕದಿನ ಸರಣಿಯಲ್ಲಿ  ಆಡುತ್ತಾರಾ ಅನ್ನೋದೇ ಕೌತುಕದ ವಿಷಯವಾಗಿದೆತಂಡದ ಪ್ರಮುಖ ಬ್ಯಾಟ್ಸ್ ಮನ್  ದಿನೇಶ್  ಕಾರ್ತಿಕ್  ಕನ್ಸಿಸ್ಟೆನ್ಸಿ ಕಾಪಾಡಿಕೊಂಡಿದ್ದಾರೆ. ಆದರೆ  ಮ್ಯಾಚ್  ಫಿನಿಶರ್ರಾಗಿ  ಹೊರಹೊಮ್ಮದೇ ಇರೋದು  ಆಯ್ಕೆ ಮಂಡಳಿಯನ್ನ ಚಿಂತೆಗೀಡು ಮಾಡಿದೆಇನ್ನು  ಏಷ್ಯಾಕಪ್ ಫೈನಲ್  ಪಂದ್ಯದ ವೇಳೆ ಹ್ಯಾಮ್ಸ್ಟ್ರಿಂಗ್ ಇಂಜುರಿಗೆ  ಗುರಿಯಾದ  ಕೇದಾರ್  ಜಾಧವ್  ತಂಡದಿಂದ  ಹೊರಗುಳಿದಿದ್ದು  ಯುವ ಆಟಗಾರರಿಗೆ  ಅವಕಾಶ ಕೊಡಬೇಕಾಗಿದೆ.

ಸ್ಪೋಟಕ  ಬ್ಯಾಟ್ಸ್ ಮನ್  ಅಂಬಾಟಿ  ರಾಯ್ಡು  ತಮ್ಮ  ಸ್ಥಾನದಲ್ಲಿ  ಆಡಲಿದ್ದಾರೆಇನ್ನು  ಬೌಲಿಂಗ್  ವಿಭಾಗದಲ್ಲಿ  ಭುವನೇಶ್ವರ್  ಕುಮಾರ್  ಮತ್ತು  ಜಸ್ಪ್ರೀತ್  ಬೂಮ್ರಾ ತಂಡಕ್ಕೆ  ಮತ್ತೆ  ಕಮ್  ಬ್ಯಾಕ್  ಮಾಡಲಿದ್ದಾರೆ.