ವಿಚಿತ್ರ ಬಟ್ಟೆ ಧರಿಸಿ ಟ್ರೋಲ್ಗೆ ಗುರಿಯಾದ ಸಾಕ್ಷಿ ಧೋನಿ


ನವದೆಹಲಿ 31: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಒಂದು ಫೋಟೋ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.  

ರಾಜಕಾರಣಿ ಪ್ರಫುಲ್ ಪಟೇಲ್ ಪುತ್ರಿ ಪೂಣರ್ಾ ಪಟೇಲ್ ಮದುವೆಗೆ ಬಂದಿದ್ದ ಸಾಕ್ಷಿ ಸಿಂಗ್ ಧೋನಿ ಈ ವೇಳೆ ವಿಭಿನ್ನವಾದ ಡ್ರೆಸ್ ಹಾಕಿಕೊಂಡಿದ್ದರು. ಅದೇ ಡ್ರೆಸ್ ನಲ್ಲಿ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಅದನ್ನು ನೋಡಿದ ಅನೇಕರು ಸಾಕ್ಷಿ ವಿರುದ್ಧ ತಿರುಗಿ ಬಿದ್ದಿದ್ದಾರೆ.  

ನೀವು ಹಾಕಿಕೊಂಡಿದ್ದ ಉಡುಪು ಸರಿಯಾಗಿಲ್ಲ, ಇದು ಭಾರತೀಯ ಸಂಸ್ಕೃತಿಗೆ ತಕ್ಕದ್ದಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸಾಕ್ಷಿಗೆ ಡ್ರೆಸ್ ಸೆನ್ಸ್ ಇಲ್ಲ ಎಂದು ಸಂದೇಶ ರವಾನಿಸಿದ್ದಾರೆ. ಈ ಹಿಂದೆ ಕೂಡ ಟೀಂ ಇಂಡಿಯಾ ಮಹಿಳಾ ತಂಡದ ನಾಯಕ ಮಿಥಾಲಿ ರಾಜ್ ವಿಭಿನ್ನ ಡ್ರೆಸ್ ಹಾಕಿ ಟ್ರೋಲ್ ಗೆ ಗುರಿಯಾಗಿದ್ದರು.