ಮೂರನೇ ಏಕದಿನ ಪಂದ್ಯದಲ್ಲಿಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಭಾರತ ಸರಣಿಯನ್ನು ಗೆಲ್ಲುವುಕ್ಕೆ ವಿಫಲವಾಗಿದೆ. ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಸೂಚನೆ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ಎಲ್ಲರೂ ಡ್ರೆಸ್ಸಿಂಗ್ ರೂಮ್ ನತ್ತ ಹೊರಟರೆ ಎಂಎಸ್ ಧೋನಿ ಮಾತ್ರ ಅಂಪೈರ್ ಗಳಿಂದ ಪಂದ್ಯದಲ್ಲಿ ಬಳಸಲಾದ ಚೆಂಡನ್ನು ತೆಗೆದುಕೊಂಡರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಎಂಎಸ್ ಧೋನಿ ಏಕದಿನ ಆವೃತ್ತಿಯ ಕ್ರಿಕೆಟ್ ನಿಂದಲೂ ನಿವೃತ್ತಿ ಘೋಷಿಸುತ್ತಾರಾ ಎಂಬ ಚಚರ್ೆಗೆ ಕಾರಣವಾಗಿದೆ.