ಲಂಡನ್: ಭಾರತೀಯ ಮಹಿಳಾ ಕ್ರಿಕೆಟ್ ನಿಗದಿತ ಓವರ್ ಗಳ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಧೋನಿ ಆಟವನ್ನು ನೆನಪಿಸಿದ್ದಾರೆ.
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಧೋನಿ, ತಮ್ಮ ಹೆಲಿಕಾಪ್ಟರ್ ಸಿಕ್ಸರ್ ಗಳ ಮೂಲಕವೇ ಪ್ರಸಿದ್ಧಿ ಪಡೆದವರು. ಅಲ್ಲದೆ ಸಿಕ್ಸರ್ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಮೂಲಕವೂ ಧೋನಿ ಖ್ಯಾತಿ ಪಡೆದಿದ್ದರು.
ಇದೀಗ ಇದೇ ಧೋನಿ ಮಾದರಿಯನ್ನು ಹರ್ಮನ್ ಪ್ರೀತ್ ಕೌರ್ ಹಿಂಬಾಲಿಸುವಂತೆ ಕಾಣುತ್ತಿದ್ದು, ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಿಯಾ ಸೂಪರ್ ಲೀಗ್ ಟೂನರ್ಿಯಲ್ಲಿ ಲಂಕಾಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಹರ್ಮನ್ ಪ್ರೀತ್ ಕೌರ್ ಸಿಕ್ಸರ್ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.
ಸರರ್ೆ ಸ್ಟಾಸರ್್ ತಂಡದ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ 4 ಎಸೆತಗಳಲ್ಲಿ 10ರನ್ ಬೇಕಿತ್ತು. ಈ ವೇಳೆ ಮೊದಲ ಎರಡು ಎಸೆತಗಳನ್ನು ದಂಡಿಸುವಲ್ಲಿ ವಿಫಲರಾಗಿದ್ದರು. ಆದರೆ ಮೂರನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಹರ್ಮನ್ ಪ್ರೀತ್ ನಾಲ್ಕನೇ ಮತ್ತು ಅಂತಿಮ ಎಸೆತವನ್ನು ಸಿಕ್ಸರ್ ಹೆ ಅಟ್ಟುವ ಮೂಲಕ ಲಂಕಾಷೈರ್ ತಂಡಕ್ಕೆ ತಂಡಕ್ಕೆ ಭರ್ಜರಿ ಜಯ ತಂದಿತ್ತರು,
ಇನ್ನು ಈ ಹಿಂದೆ ಧೋನಿ ಕೂಡ ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಸಿಕ್ಸರ್ ಸಿಡಿಸುವ ಮೂಲಕ ಗೆಲುವು ತಂದುಕೊಟ್ಟಿದ್ದರು. ಪ್ರಮುಖವಾಗಿ ಮುಂಬೈನಲ್ಲಿ ನಡೆದ ವಿಶ್ವಕಪ್ ಟೂನರ್ಿಯ ಫೈನಲ್ ಪಂದ್ಯದಲ್ಲಿ ಧೋನಿ ತಮ್ಮ ಸಿಗ್ನೇಚರ್ ಹೆಲಿಕಾಪ್ಟರ್ ಶಾಟ್ ಮೂಲಕ ಲಂಕಾ ವಿರುದ್ಧ ಗೆಲುವು
ತಂದುಕೊಟ್ಟಿದ್ದರು.