ನವದೆಹಲಿ, ಅ.22 : ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ದೇಶದ ಅತ್ಯಂತ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು. ಅಭಿಮಾನಿಗಳು ಅವರ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಆದರೂ ಅವರ ಜನಪ್ರಿಯತೆಯು ನೆಟಿಜನ್ಗಳಿಗೆ ಅಪಾಯಕಾರಿ ಎಂದು ಸಾಬೀತಾಗಿದೆ.
ಸರ್ಚ ಎಂಜಿನ್ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಬಗ್ಗೆ ಯಾವುದೇ ಮಾಹಿತಿಯನ್ನು ಹುಡುಕಿದರೆ ಅದರ ಜೊತೆಗೆ, ಅಪಾಯಕಾರಿ ವೈರಸ್ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಸೇರಿಕೊಳ್ಳುತ್ತದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ, ಇದು ನಿಮ್ಮ ಪ್ರಮುಖ ಮಾಹಿತಿಗೆ ಅಪಾಯವಾಗುವ ಸಾಧ್ಯತೆ ಇದೆ. ಅದೇ ರೀತಿ ಇತರ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್, ಹರ್ಮನ್ಪ್ರೀತ್ ಕೌರ್ ಮತ್ತು ಪಿ.ವಿ ಸಿಂಧು ಅವರ ಬಗ್ಗೆ ಹುಡುಕುವುದು ಸಹ ಅಪಾಯವಾಗಿದೆ.
ಈ ಬಗ್ಗೆ ಮ್ಯಾ ಕಫೆ ಕಂಪನಿ ಮಾಹಿತಿ ನೀಡಿದೆ. 'ಮೋಸ್ಟ್ ಡೇಂಜರಸ್ ಸೆಲೆಬ್ರಿಟಿ 2019' ಪಟ್ಟಿಯಲ್ಲಿ ಧೋನಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮ್ಯಾ ಕಫೆ ತನ್ನ 13 ನೇ ಆವೃತ್ತಿಯಲ್ಲಿನ ಸಂಶೋಧನೆಯು ಜನಪ್ರಿಯ ಸೆಲೆಬ್ರಿಟಿಗಳನ್ನು ಪಟ್ಟಿ ಮಾಡಿದೆ.
ಧೋನಿ ಅಭಿಮಾನಿಗಳು ದೇಶ ಮತ್ತು ವಿದೇಶಗಳಲ್ಲಿದ್ದಾರೆ. ಅವರು ಧೋನಿಗೆ ಸಂಬಂಧಿಸಿದ ಮಾಹಿತಿಯನ್ನು ಸಚರ್್ ಎಂಜಿನ್ನಲ್ಲಿ ಹುಡುಕುತ್ತಲೇ ಇರುತ್ತಾರೆ. ಧೋನಿ ಬಗ್ಗೆ ಹೆಚ್ಚಿನದನ್ನು ಅರಿಯಲು ಜನರು ಡೌನ್ ಲೋಡ್ ಸಹ ಮಾಡುತ್ತಾರೆ ಇದರಿಂದ ಗ್ರಾಹಕರ ಅಮೂಲ್ಯ ಮಾಹಿತಿ ಬೇರೆಯವರಿಗೆ ಲಭ್ಯವಾಗುತ್ತದೆ.
ಜನಪ್ರಿಯತೆಯ ದೃಷ್ಟಿಯಿಂದ 2011 ರ ವಿಶ್ವಕಪ್ ವಿಜೇತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗಿಂತ ಮುಂದಿದ್ದಾರೆ. ಇದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಟಿ -20 ನಾಯಕಿ ಹರ್ಮನ್ಪ್ರೀತ್ ಕೌರ್ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.
ಇತರ ಪ್ರಸಿದ್ಧ ವ್ಯಕ್ತಿಗಳಲ್ಲಿ ರಿಯಾಲ್ಟಿ ಟಿವಿ ಕಾರ್ಯಕ್ರಮದ ವಿಜೇತ ಗೌತಮ್ ಗುಲಾಟಿ, ಬಾಲಿವುಡ್ ನಟಿ ಸನ್ನಿ ಲಿಯೋನ್ ನಂತರದ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಆರನೇ ಸ್ಥಾನ ರಾಧಿಕಾ ಆಪ್ಟೆ, ಏಳನೇ ಸ್ಥಾನ ಶ್ರದ್ಧಾ ಕಪೂರ್, ವಿಶ್ವ ಚಾಂಪಿಯನ್ಶಿಪ್ ಚಿನ್ನದ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.