ಧಾರವಾಡ 20: ನನ್ನ ಹೃದಯಕ್ಕೆ ಹತ್ತಿರವಾದ ಎರಡು ಸ್ಥಳಗಳೆಂದರೆ ನನ್ನ ಹುಟ್ಟೂರು ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಹಾಗೂ ನನ್ನನ್ನು ಮನುಷ್ಯನನ್ನಾಗಿ ಈ ಎತ್ತರಕ್ಕೆ ಬೆಳೆಸಿದ ಧಾರವಾಡ. ಇಲ್ಲಿ ವಿದ್ಯಾಥರ್ಿ ಜೀವನದಿಂದ ಹಿಡಿದು ಜಿಲ್ಲಾಧಿಕಾರಿಯಾಗಿ ಸೇವೆಗೈದ ಪ್ರತಿ ಕ್ಷಣವೂ ನನಗೆ ಅವಿಸ್ಮರಣೀಯವಾಗಿವೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಆಲೂರು ವೆಂಕಟರಾವ್ ಸಭಾಭವನದಲ್ಲಿ ವಗರ್ಾವಣೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಧಾರವಾಡವು ವಿದ್ಯಾಥರ್ಿ ದೆಸೆಯಿಂದಲೂ ಬದುಕನ್ನು ಕಟ್ಟಿಕೊಟ್ಟಿದೆ.ಇಲ್ಲಿನ ಕೆಸಿಡಿಯ ಪ್ರಾಧ್ಯಾಪಕರು ಗ್ರಾಮೀಣ ಭಾಗದಿಂದ ಬಂದಂತಹ ನಮ್ಮಂತಹ ವಿದ್ಯಾಥರ್ಿಗಳಲ್ಲಿದ್ದ ಕೀಳರಿಮೆ ಹೋಗಲಾಡಿಸಿ, ಪ್ರತಿಭೆ ಗುರುತಿಸಿದರು. ಯಾವ ಕಚೇರಿ ಹಾಗೂ ಬಂಗಲೆಯ ಮುಂದೆ ದಿನ ನಿತ್ಯ ಓಡಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆನೋ, ಅದೇ ಕಚೇರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು ನನ್ನ ಪುಣ್ಯ. ವಿದ್ಯಾಥರ್ಿಯಾಗಿದ್ದಾಗ ಅನೇಕ ಚಳವಳಿಗಳಲ್ಲಿ ಸಕ್ರಿಯನಾಗಿದ್ದೆ. ಈಗ ಜಿಲ್ಲಾಧಿಕಾರಿಯಾಗಿ ಅಂತಹವುಗಳನ್ನು ನಿಭಾಯಿಸುವ ಅವಕಾಶವೂ ದೊರೆಯಿತು.
ಜಿಲ್ಲೆಯ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ನೀಡಿದ ಸಹಕಾರ ಮತ್ತು ಪ್ರೀತಿ ದೊಡ್ಡದು.ಅದರಿಂದಾಗಿ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಕ್ಕಿದೆ. ಜಿಲ್ಲೆಯಲ್ಲಿ ಒಳ್ಳೆಯ ತಂಡ ಇದೆ.ನಾನಿಲ್ಲಿಗೆ ಬಂದಾಗ 22 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. 18 ಮೇವು ಬ್ಯಾಂಕುಗಳು ಇದ್ದವು. ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ರಾಜೇಂದ್ರ ಚೋಳನ್ ಅವರ ಸಮರ್ಥ ಪ್ರತಿಪಾದನೆಯಿಂದಾಗಿ ಧಾರವಾಡಕ್ಕೆ ಐಐಟಿ ಬಂದಿತು. ಅದರ ಉದ್ಘಾಟನೆ ಕಾರ್ಯಕ್ರಮ ಸಂಘಟಿಸುವ ಅವಕಾಶ ನನಗೆ ದೊರೆಯಿತು. ಪ್ರಧಾನ ಮಂತ್ರಿ ಫಸಲ್ ವಿಮಾ ವಿತರಣೆ ಸಮರ್ಥವಾಗಿ ನಿರ್ವಹಿಸಿದ್ದನ್ನು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರಕಾರ ಗುರುತಿಸಿ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಎರಡು ವರ್ಷಗಳ ಬರಗಾಲ ನಿರ್ವಹಣೆ, ಐಐಟಿ ಉದ್ಘಾಟನೆ, ರಾಜ್ಯ ಒಲಿಂಪಿಕ್ಸ್, ಮಾಹಿತಿ ಉತ್ಸವ, ಸಾಧನಾ ಸಂಭ್ರಮ ಮತ್ತಿತರ ಮಹತ್ವದ ಕಾರ್ಯಕ್ರಮಗಳ ಆಯೋಜನೆ.ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇದೆ.
ಬೆಳೆ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲೆಯಲ್ಲಿ ಮಾಡಿದ ಕಾರ್ಯ ಗುರುತಿಸಿ ಮುಖ್ಯಮಂತ್ರಿಗಳು ಪ್ರಶಂಸಾ ಪತ್ರ ನೀಡಿ ಗೌರವಿಸಿದರು.ಕಳೆದ ಹಲವು ವರ್ಷಗಳಿಂದ ಅನೇಕ ಕಾರಣಗಳಿಂದ ಹಂಚಿಕೆಯಾಗದೇ ಉಳಿದಿದ್ದ ಮಹಷರ್ಿ ವಾಲ್ಮೀಕಿ ಭವನ,ಗಾಂಧೀ ಭವನ, ಮಹಿಳಾ ಕಾಲೇಜುಗಳಿಗೆ ನಿವೇಶನ ನೀಡಿ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ನೀಡಬೇಕು.
ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ಪರಿಹಾರವಾದರೆ ಜನರು ರಾಜಧಾನಿಗೆ ಬರುವದು ತಪ್ಪುತ್ತದೆ.ನನಗಿಂತಲೂ ಸಮರ್ಥವಾದ ದಕ್ಷ ಅಧಿಕಾರಿ ಎಂ.ದೀಪಾ ಅವರು ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ.ಅವರ ಅವಧಿಯಲ್ಲಿ ಜಿಲ್ಲೆಯ ಹೆಸರು ಇನ್ನಷ್ಟು ಎತ್ತರಕ್ಕೇರುವ ಭರವಸೆ ಇದೆ. ನನ್ನ ಕೊನೆಯ ಉಸಿರುವವರೆಗೂ ಧಾರವಾಡದ ಸೇವಾ ಅವಧಿಯನ್ನು ಹೃದಯದಲ್ಲಿಟ್ಟುಕೊಳ್ಳುತ್ತೇನೆ ಎಂದು ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಎಂ.ದೀಪಾ ಮಾತನಾಡಿ, ಉತ್ತರ ಕನರ್ಾಟಕದ ಗದಗ,ಬೆಳಗಾವಿ, ಧಾರವಾಡಗಳಲ್ಲಿ ಈಗಾಗಲೇ ಕೆಲಸ ಮಾಡಿದ ಅನುಭವವಿದೆ.ಈ ಭಾಗದ ಜನರ ಕರ್ತವ್ಯಶೀಲ ಮನೋಭಾವದ ಬಗ್ಗೆ ಗೌರವವಿದೆ.ಇಲ್ಲಿನ ಆಹಾರ ಪದ್ಧತಿ,ಸಂಸ್ಕೃತಿ ಬಗ್ಗೆ ನನಗೆ ಹೆಮ್ಮೆಯಿದೆ.ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಉತ್ತಮ ತಂಡ ಕಟ್ಟಿರುವದು ಆಡಳಿತ ಮುನ್ನಡೆಸಲು ಅನುಕೂಲವಾಗಲಿದೆ ಎಂದರು.
ಜಿ.ಪಂ.ಸಿಇಓ ಸ್ನೇಹಲ್ ಆರ್ ಮಾತನಾಡಿ, ಕಳೆದ ಒಂದೂವರೆ ವರ್ಷದ ಅವಧಿ ನಿರಂತರವಾಗಿ ಹಲವು ಕಾರ್ಯಕ್ರಮಗಳ ಬಹಳ ಚಟುವಟಿಕೆಯಿಂದ ಕೂಡಿತ್ತು, ಜಿಲ್ಲಾಧಿಕಾರಿಗಳಾಗಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ನೀಡಿದ ಮಾರ್ಗದರ್ಶನ, ಕಾರ್ಯ ದಕ್ಷತೆ.ಯಾವುದೇ ಕಾರ್ಯವನ್ನು ಅವರು ಯೋಜಿತವಾಗಿ ಕೈಗೊಳ್ಳುತ್ತಿದ್ದ ರೀತಿ ಅನುಕರಣೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಮಾತನಾಡಿ, ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಧಾರವಾಡದಲ್ಲಿ ಅಚ್ಚು ಒತ್ತಿದಂತಹ ಕೆಲಸ ಮಾಡಿದ್ದಾರೆ.ಧಾರವಾಡಕ್ಕೆ ಅವರ ಕೊಡುಗೆ ಅಪಾರ, ಇದೇ ಊರಿನ ವಿದ್ಯಾಥರ್ಿಯಾಗಿ ಇಲ್ಲಿಯೇ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದರು. ಅನೇಕ ನಿಣರ್ಾಯಕ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಗೆ ಅವರು ನೀಡಿದ ಸಹಕಾರದಿಂದ ಶಾಂತಿ,ಕಾನೂನು ಸುವ್ಯವಸ್ಥೆಯ ಸುಗಮ ಪಾಲನೆ ಸಾಧ್ಯವಾಗಿದೆ. ಹೊಸದಾಗಿ ಜಿಲ್ಲಾಧಿಕಾರಿಗಳಾಗಿ ಬಂದಿರುವ ಎಂ.ದೀಪಾ ಅವರು ಕೂಡ ಸಮರ್ಥ, ದಕ್ಷ ಆಡಳಿತಗಾರರಾಗಿದ್ದಾರೆ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಮನೋಹರ ಮಂಡೋಲಿ, ಎಸ್. ಜಿ.ಕೊರವರ್, ಟಿ.ಎಸ್.ರುದ್ರೇಶಪ್ಪ, ರಮೇಶ ಕೋನರಡ್ಡಿ, ಮಂಜುನಾಥ ಡೊಳ್ಳಿನ, ಎಸ್.ಕೆ.ರಂಗಣ್ಣವರ, ಪ್ರಕಾಶ ಕುದರಿ,ಶೇಖರ್ ಜಿ.ಡಿ. ಮಾತನಾಡಿದರು.
ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ನೀಲು ಎಸ್.ಬೊಮ್ಮನಹಳ್ಳಿ ದಂಪತಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ,ಗೌರವಿಸಲಾಯಿತು.ನೂತನ ಜಿಲ್ಲಾಧಿಕಾರಿ ಎಂ.ದೀಪಾ ಅವರನ್ನು ಸ್ವಾಗತಿಸಲಾಯಿತು.
ಡಿಸಿಪಿ ಬಿ.ಎಸ್.ನೇಮಗೌಡ ವೇದಿಕೆಯಲ್ಲಿದ್ದರು. ಅನೀಲ ಮೇತ್ರಿ ಮತ್ತು ಸಂಗಡಿಗರು ಪ್ರಾಥರ್ಿಸಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಸ್ವಾಗತಿಸಿದರು, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ವಂದಿಸಿದರು, ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.