ಧಾರವಾಡ, ಮೇ 25,ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42 ಕ್ಕೆ ಏರಿಕೆ ಆಗಿದೆ.ಧಾರವಾಡದ ಜಿಲ್ಲೆಯಲ್ಲಿ ಸೋಮವಾರ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.33 ವರ್ಷದ ಮಹಿಳೆ (ರೋಗಿ ಸಂಖ್ಯೆ -2156),17 ವರ್ಷದ ಬಾಲಕ (ರೋಗಿ ಸಂಖ್ಯೆ-2157) ಹಾಗೂ 2 ವರ್ಷ 5 ತಿಂಗಳ ಗಂಡು ಮಗುವಿನಲ್ಲಿ (ರೋಗಿ ಸಂಖ್ಯೆ -2158)ಸೋಂಕು ಕಾಣಿಸಿಕೊಂಡಿದೆ ಎಂದರು.ಈ ಮೂವರು ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ ರೋಗಿ ಸಂಖ್ಯೆ 1942,1943,1944 ಹಾಗೂ 1945 ಅವರ ಸಂಪರ್ಕ ಹೊಂದಿದ್ದಾರೆ. ಇವರು ಜಿಲ್ಲೆಗೆ ಬಂದ ತಕ್ಷಣ ಅವರ ಗಂಟಲು ದ್ರವ ಪರೀಕ್ಷೆಗೊಳಪಡಿಸಿ, ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು ಎಂದರು.ಸದ್ಯ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದ್ದು, ಈಗಾಗಲೇ 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.