ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಪ್ರಥಮ ಸ್ಥಾನ

Dharwad district stands first in state level quiz competition

ಧಾರವಾಡ 11: ಬೆಂಗಳೂರಿಲ್ಲಿ ನಡೆದ ಅಗಸ್ತ್ಯ ಪ್ರತಿಷ್ಠಾನವು ನೆಡೆಸಿದ ರಾಜ್ಯಮಟ್ಟದ  ಟೆಕ್ಸಾಸ್  ಇನ್ಸ್ಟ್ರುಮೆಂಟ್‌ನ  ವಿಜ್ಞಾನ ಮತ್ತು ತಂತ್ರಜ್ಞಾನ ಕ್ವಿಜ್ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಪ್ರಥಮ ಸ್ಥಾನ ಗಳಿಸಿದೆ  

ಧಾರವಾಡ ಗ್ರಾಮೀಣ ವಲಯದ ಗರಗ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿಗಳ ತಂಡ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ .. 

ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಶಾಲೆಯ ಪ್ರಧಾನ ಗುರುಗಳು ಮತ್ತು ಸಿಬ್ಬಂದಿ ಮತ್ತು ಎಸ್ ಡಿ ಎಂ ಸಿ ಸದಸ್ಯರು ಊರಿನ ಗ್ರಾಮಸ್ಥರು  ಮಕ್ಕಳ ಈ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

ವಿದ್ಯಾರ್ಥಿಗಳಾದ ದೀಪಾ ಪಟದಾರಿ ( 7ನೇ ತರಗತಿ ) ಮತ್ತು ಲಕ್ಷ್ಮೀ ಹಿರೇಮಠ್ (7ನೇ ತರಗತಿ) ಮತ್ತು  ಪುಷ್ಪಾ ಅಂಗಡಿ ( 6ನೇ ತರಗತಿ ) ಪ್ರಥಮ ಸ್ಥಾನ ಗಳಿದ್ದಾರೆ. ಈ ವಿದ್ಯಾರ್ಥಿಗಳಿಗೆ ತಲಾ ನಗದು 9,000 ಪ್ರಶಸ್ತಿಯನ್ನು ನೀಡಲಾಗಿದೆ ಮತ್ತು 50,000 ಮೌಲ್ಯದ ವಿಜ್ಞಾನದ  ಉಪಕರಣಗಳನ್ನು ಶಾಲೆಗೆ ನೀಡಲಿದ್ದಾರೆ.