ಮೂಡಲಗಿ 24: ಭಾರತ ದೇಶ ಸಂಸ್ಕೃತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ. ಇಲ್ಲಿ ನಡೆಯುವಂತಹ ಧಾಮರ್ಿಕ ಕಾರ್ಯಕ್ರಮಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯಲು ಸಾಧ್ಯವಿಲ್ಲ. ಇಂತಹ ಧಾಮರ್ಿಕ ಕಾರ್ಯದಿಂದ ಸಕಾಲಕ್ಕೆ ಮಳೆ-ಬೆಳೆಯಾಗುತ್ತಿದೆ ಎಂದು ಕನರ್ಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಮಂಗಳವಾರ ಕೌಜಲಗಿಯ ಬಲಭೀಮ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ, ಸತ್ಯನಾರಾಯಣ ಪೂಜಾ ಸಮಿತಿ ಕೌಜಲಗಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೌಜಲಗಿ ವಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜಾ ಹಾಗೂ ಧಾಮರ್ಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಧರ್ಮಸ್ಥಳವು ನಮ್ಮ ನಾಡಿನ ಪವಿತ್ರ ಪುಣ್ಯಕ್ಷೇತ್ರ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವಂತಹ ಕಾರ್ಯಗಳು ಪ್ರಶಂಸನೀಯವಾಗಿವೆ. ಮಹಿಳೆಯರಿಗೆ ಗೌರವ ಸಿಗಬೇಕೆನ್ನುವ ಉದ್ದೇಶ, ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಯೋಜನೆಯೂ ಕಾರ್ಯ ನಿರ್ವಹಿಸುತ್ತಿದೆ. ಸಕರ್ಾರ ಮಾಡದಂತಹ ಯೋಜನೆಗಳನ್ನು ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ನಾವೆಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲಾ 2 ನಿದರ್ೇಶಕ ಸುರೇಶ ಮೊಹ್ಲಿ ಮಾತನಾಡಿ, ಗ್ರಾಮಭಿವೃದ್ಧಿ ಯೋಜನೆಯೂ ಕೇವಲ ಸಾಲ ನೀಡುವ ಉದ್ದೇಶಕ್ಕಾಗಿ ಪ್ರಾರಂಭವಾಗಿಲ್ಲ. ಮಹಿಳೆಯರಲ್ಲಿ ಸಂಘಟನಾ ಶಕ್ತಿ ರೂಪಿಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಪರಿಸರ ಜಾಗೃತಿ, ಸ್ವಾಸ್ಥ ಸಂಕಲ್ಪ, ಸ್ವಚ್ಛಭಾರತ ಅಭಿಯಾನಗಳ ಜೊತೆಯಲ್ಲಿ ನಿರುದ್ಯೋಗದ ಸಮಸ್ಯೆಗಳನ್ನು ದೂರ ಮಾಡುವ ಉದ್ದೇಶದಿಂದ ಯೋಜನೆಯು ಸಾಕಷ್ಟು ಜನಪ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಡಾ. ವಿರೇಂದ್ರ ಹೆಗಡೆಯವರ ಆಶೀವರ್ಾದದಿಂದ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದರು.
ಕೌಜಲಗಿ ಗ್ರಾ.ಪಂ ಅಧ್ಯಕ್ಷ ನೀಲಪ್ಪ ಕಿವಟಿ ಮಾತನಾಡಿ, ಸತ್ಯನಾರಾಯಣ ಪೂಜಾ ಮಾಡುವದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಯೋಜನೆಯವತಿಯಿಂದ ನಡೆಯುವ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯ ಹೊಂದಬಹುದು ಎಂದು ಹೇಳಿದರು.
ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದ ವಿಜಯಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಾಲಾ ಸುತಾರ ವಹಿಸಿದ್ದರು. ಸುಮಾರು 150 ದಂಪತಿಗಳು ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಯೋಜನಾಧಿಕಾರಿ ದೇವರಾಜ್, ಅಶೋಕ ಪರಶೆಟ್ಟಿ, ಸುಭಾಸ್ ಕೌಜಲಗಿ, ಜಿ.ಪಂ.ಸದಸ್ಯೆ ಶಶಿಕಲಾ ಸಣ್ಣಕ್ಕಿ, ಶಾಂತಪ್ಪ ಹಿರೆಮೇತ್ರಿ, ಈರಪ್ಪ ಸೊಂಡೂರ, ಸುಧೀರ ನಾಯರ್, ಉದಯ ಗೌಡ, ಜಿಲ್ಲಾ ಜನಜಾಗೃತಿ ವೇದಿಕೆಯ ಸಮನ್ವಯಾಧಿಕಾರಿ ಸುಜಾತ ಉಪಸ್ಥಿತರಿದ್ದರು.
ಕೌಜಲಗಿ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೇಲ್ವಿಚಾರಕ ಕಲ್ಮೇಶ ಎಮ್ ನಿರೂಪಿಸಿದರು. ಬಾಬುರಾವ್ ಗೋಣಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಭಾಸ್ಕರ್ ವಂದಿಸಿದರು.