ರಾಯಬಾಗ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರ ಜೊತೆಗೆ ಅವರಿಗೆ ಧಾಮರ್ಿಕತೆ ಮಹತ್ವವನ್ನು ತಿಳಿಸುತ್ತಿರುವ ಕಾರ್ಯ ಮಾಡುತ್ತಿರುವುದು ಅತ್ಯಂತ ಮೆಚ್ಚತಕ್ಕ ವಿಷಯವಾಗಿದೆ ಎಂದು ವಸಂತರಾವ್ ಪಾಟೀಲ ಸಹಕಾರಿ ಸಕ್ಕರೆ ಕಾಖರ್ಾನೆ ಅಧ್ಯಕ್ಷ ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಹೇಳಿದರು.
ಬುಧವಾರ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಬ್ಬರವಾಡಿ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಹುಬ್ಬರವಾಡಿ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಧಮರ್ಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧ.ಗ್ರಾ.ಯೋ.ತಾಲೂಕಾ ಯೋಜನಾಧಿಕಾರಿ ಪುರಂದರ ಪೂಜಾರಿ ಮಾತನಾಡಿ, ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯಿಂದ ಮಹಿಳೆಯರ ಸ್ವಾವಲಂಬನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಮಹಿಳೆಯರು ಆಥರ್ಿಕವಾಗಿ ಸದೃಢರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆಂದು ತಿಳಿಸಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನಗಳ ಜಿನರ್ೋದ್ಧಾರ, ಕೆರೆಗಳ ಅಭಿವೃದ್ಧಿ, ಶಾಲೆ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿಗಳಿಗಾಗಿ ನೆರವು ನೀಡುತ್ತಿರುವ ಕಾರ್ಯ ಕೈಗೊಂಡಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಭೆಂಡವಾಡ ರೇವಣಸಿದ್ಧೇಶ್ವರ ವಿರಕ್ತಮಠದ ಗುರುಸಿದ್ಧೇಶ್ವರ ಸ್ವಾಮಿಜಿ ಹಾಗೂ ಬೂದಿಹಾಳ ರಾಮಲಿಂಗೇಶ್ವರ ಮಠದ ಸಚ್ಚಿದಾನಂದ ಸ್ವಾಮಿಜಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಪ್ರಲ್ಹಾದ ಪಾಟೀಲ ವಹಿಸಿದ್ದರು.
ಅತಿಥಿಗಳಾಗಿ ನಾಗಲಿಂಗೇಶ್ವರ ಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀಬಾಯಿ ಪೂಜೇರಿ, ಲತಾ ಪಾತ್ರೋಟ, ಮುಖ್ಯೋಪಾಧ್ಯಾಯ ಪಿ.ಎಸ್.ಪಾಟೀಲ ಆಗಮಿಸಿದ್ದರು.
ಶಿವಾಜಿ ಶ್ರೀಖಂಡೆ, ನವಲಪ್ಪ ಲಠ್ಠೆ, ಪ್ರಕಾಶ ಪಾತ್ರೋಟ, ಗಂಗಾರಾಮ ಹೊಸಮನಿ, ಶಾಂತಾ ಉಮ್ರೆ, ಸುನೀಲ ಕಾಳಗೆ, ರಾಮನಾಯಿಕ ನಾಯಿಕ, ಅಣ್ಣಪ್ಪಾ ನಿಡಗುಂದಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾಥರ್ಿಗಳು, ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಇದ್ದರು.
ಮೇಲ್ವಿಚಾರಕ ಬಸವರಾಜ ಹೆಚ್. ಸ್ವಾಗತಿಸಿದರು. ನಾರಾಯಣ ಪೂಜೇರಿ ನಿರೂಪಿಸಿದರು. ಮಹಾಂತೇಶ ಐಹೊಳೆ ವಂದಿಸಿದರು.