ಮಾನಸಿಕ ಶಾಂತಿ,ನೆಮ್ಮದಿಗೆ ಧರ್ಮ ಸಂದೇಶ ಅಗತ್ಯ - ಕಡೇನಂದಿಹಳ್ಳಿ

ರಾಣೇಬೆನ್ನೂರು 09:  ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಎಷ್ಟೇ ಧನ, ಧಾನ್ಯ, ಕನಕ ವಜ್ರ ವೈಧುರ್ಯ ಸಂಪತ್ತು ಗಳಿಸಿದರು, ಎಲ್ಲವೂ ಇಲ್ಲೇ ಬಿಟ್ಟು ಹೋಗಬೇಕು ಇದು ವಾಸ್ತವಿಕ ಸತ್ಯ, ಇದು ತಿಳಿದಿದ್ದರೂ, ದಾನ ಧರ್ಮ ಪರೋಪಕಾರ ಇಲ್ಲದೆ ಬದುಕುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುವುದೇ, ಎಂದು ಕಡೇನಂದಿಹಳ್ಳಿ ಸುಕ್ಷೇತ್ರ ದುಗ್ಲಿ, ಮಳೆ ಮಲ್ಲೇಶ್ವರ ತಪೋ ಕ್ಷೇತ್ರದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ನುಡಿದರು.  ಅವರು ಶನಿವಾರ ದೈವಜ್ಞ ಕಲ್ಯಾಣ ಮಂಟಪದಲ್ಲಿ, "ಸುರಭಿ " ಸೇವಾ ಚಾರಿಟೇಬಲ್ ಟ್ರಸ್ಟ್‌, ತಾಲೂಕಾ ಮಹಿಳಾ ಘಟಕ ಆಯೋಜಿಸಿದ್ದ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಹಾಗೂ  ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಇಂದಿನ ಆಧುನಿಕ ಮಹಿಳೆ, ಸಮಾಜದ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಜೊತೆಗೆ ಓದ್ಯೋಗಿಕವಾಗಿ ಬೆಳವಣಿಗೆ ಕಾಣುತ್ತಿರುವುದು ದೇಶದ ಆರ್ಥಿಕ ಅಭಿವೃದ್ಧಿ ಸಂಕೇತವಾಗಿದೆ ಎಂದ ಶ್ರೀಗಳು ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಸಮಾಜ ಸೇವೆ ಸಹಕಾರಿಯಾಗಿದೆ ಎಂದರು.  

ದಿವ್ಯ ನೇತೃತ್ವದಲ್ಲಿದ್ದ ಜಡೆ ಸಂಸ್ಥಾನ ಮಠ, ಸೊರಬ ಮುರುಘಾಮಠದ, ಡಾ. ಮಹಾಂತ ಸ್ವಾಮಿಗಳು  ಮಾತನಾಡಿ, ಯಾವುದೇ ಸಂಘ,ಸಮಸ್ಯೆಗಳು  ಅಭಿವೃದ್ಧಿಯ ಜೊತೆಗೆ ಪ್ರಗತಿ ಕಾಣಬೇಕಾದರೆ, ಅದರಲ್ಲಿರುವ ಸದಸ್ಯರ ಸಹಕಾರ ತುಂಬಾ ಮುಖ್ಯ. ಮಹಿಳಾ ಸಂಘಟನೆಗಳು, ಮನಸ್ಸು ಮಾಡಿದರೆ ಶೀಘ್ರದಲ್ಲಿಯೇ ಬೆಳವಣಿಗೆ ಮತ್ತು ಅಭಿವೃದ್ಧಿ ಹೊಂದಲಿವೆ. ಸಮಾಜಮುಖಿ ಧೋರಣೆ  ಹೊಂದಿ, ಆರಂಭಗೊಂಡಿರುವ ರಾಜ್ಯಮಟ್ಟದ "ಸುರಭಿ" ಸಂಸ್ಥೆಯು, ಬಡವರ, ನೊಂದವರ, ನಿರುದ್ಯೋಗಿಗಳ, ಮಹಿಳೆಯರ ಧ್ವನಿಯಾಗಿ ಕರ್ತವ್ಯ ನಿರ್ವಹಿಸಲಿ ಎಂದು ಅವರು ಆಶಿಸಿದರು.  ಸಾಮೂಹಿಕ ಸತ್ಯನಾರಾಯಣ ಪೂಜಾ   ಸಮಾರಂಭ ಉದ್ಘಾಟಿಸಿದ, ಶಾಸಕ ಪ್ರಕಾಶ ಕೋಳಿವಾಡ  ಅವರು, ತಾವು ತಿಳಿದಂತೆ "ಸುರಭಿ " ಉದ್ದೇಶ ತುಂಬಾ ಚೆನ್ನಾಗಿದೆ. ಇಂದು ಮಹಿಳೆಯರ, ಆರ್ಥಿಕ ಸ್ವಾತಂತ್ರ್ಯ ಸಬಲೀಕರಣವಾಗಬೇಕಾಗಿದೆ ಈ ನಿಟ್ಟಿನಲ್ಲಿ  ಮಹಿಳೆಯರಿಗೆ, ಶಿಕ್ಷಣ ಇರಲೀ,ಇಲ್ಲದೆ ಇರಲಿ, ಜೀವನ ಕೌಶಲ್ಯ ದೊರಕಿಸಿದಾಗ ಮಾತ್ರ, ಆರ್ಥಿಕ ಸಮಾನತೆಯನ್ನು ಸಾಧಿಸಲು ಸಾಧ್ಯವಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ, " ಸುರಭಿ" ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷೆ ಶ್ರೀಮತಿ ವಿನುತಾ ರಾಜು. ರೇವಣಕರ್ ಅವರು, ತಮ್ಮ ಸಂಸ್ಥೆ ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳ ಹಿಂದೆ ಘಟಕವು  ಆರಂಭವಾಗಿದೆ. ಭವಿಷ್ಯದ ದಿನಗಳಲ್ಲಿ, ಹೊಂದಿರುವ ವಿವಿಧ ಉದ್ದೇಶಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಧರ್ಮ ಜಾಗೃತಿಯ ಹಿನ್ನೆಲೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯೇ ಸಾಮೂಹಿಕ ಪೂಜಾ  ಕಾರ್ಯ ಏರಿ​‍್ಡಸಲಾಗಿದೆ ಎಂದರು.   

ಯಾವುದೇ ಜಾತಿ,ಮತ,ಭೇದ, ಭಾವ ಎಣಿಸದೆ, ನೊಂದು ಬಂದವರ ಪಾಲಿಗೆ, ಅಗತ್ಯವಿರುವ ಸಹಾಯ,ಸಹಕಾರ ನೀಡಲಾಗುವುದು. ಸಂಸ್ಥೆಯು ನೂರಾರು ಸದಸ್ಯರನ್ನು ಹೊಂದಿದ್ದು, ಎಲ್ಲರ ಸಹಾಯ ಸಹಕಾರದಿಂದ, ಸಮಾಜಮುಖಿ ಸೇವೆ  ಮಾಡಲು ಮುಂದಾಗಿದ್ದೇವೆ ಎಂದರು.   ಪ್ರಾಸ್ತಾವಿಕವಾಗಿ ಮಾತನಾಡಿದ, ಸಂಸ್ಥಾಪಕ ಅಧ್ಯಕ್ಷ ಎಸ್‌.ಜಿ. ರಾಮಚಂದ್ರ, ಸಂಸ್ಥೆಯ ಮೂಲಕ, ಮಹಿಳೆಯರುಸಮಾಜ ಸೇವೆಗೆ ಮುಂದಾಗುವ ಆಶಯ ಹೊಂದಿದ್ದೇವೆ. ರಾಜ್ಯದಲ್ಲಿರುವ,  ಸಾವಿರಕ್ಕೂ ಹೆಚ್ಚು, ಬಡ ಮಹಿಳೆಯರಿಗೆ, ಅವರ ವೃತ್ತಿಗೆ ಸಂಬಂಧಿಸಿದಂತೆ, ಉಚಿತವಾಗಿ ಹೊಲಿಗೆ ಮಿಷನ್ ವಿತರಿಸುವ ಗುರಿ ಹೊಂದಿದೆ.  ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕ ಕೇಂದ್ರಗಳಲ್ಲಿ ಜಿಲ್ಲಾ ತಾಲೂಕ ಘಟಕಗಳನ್ನು ರಚಿಸಲು ನಿರ್ಧರಿಸಲಾಗಿದೆ. ಈ ರಾಜ್ಯ ಮಟ್ಟದ ಸಂಘಟನೆ ಯಶಸ್ವಿಗೊಳಿಸಲು ಸಮಾಜದ ಎಲ್ಲರೂ ಕಾಯಾ,ವಾಚ, ಮನಸಾ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಅವರು ವಿನಮ್ರ ಮನವಿ ಮಾಡಿದರು. ವೇದಿಕೆಯಲ್ಲಿ, " ಸುರಭಿ " ರಾಜ್ಯಾಧ್ಯಕ್ಷೆ ಶ್ರೀಮತಿ ವಾಣಿಶ್ರೀ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಾಧಾ ರಾ. ವಿಠ್ಠಲ್ ಕರ್, ಶ್ರೀಮತಿ ಶ್ರುತಿ ಯಡಚಿ, ಅನಿತಾ ಮಂ. ರಾಯ್ಕರ್, ವರ್ತಕ ರಾಜು ರೇವಣಕಾರೀ​‍್ವಣಾ ವಿ. ರೇವಣಕರ್ ಸೇರಿದಂತೆ ಮತ್ತಿತರ ಗಣ್ಯರು, ಸಮಿತಿಯ ಪದಾಧಿಕಾರಿಗಳು ಹಿರಿಯ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂದ  ಹಾಗೂ ಅಂಗವಿಕಲ ಮಕ್ಕಳಿಗೆ ಸಮವಸ್ತ್ರ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಶ್ರೀಮತಿ ರೇಣುಕಾ ವೀಣಾ ಸಂಗಡಿಗರು ಪ್ರಾರ್ಥಿಸಿದರು. ಶ್ರೀಮತಿ ವೀಣಾ ರೇವಣಕರ್ ಸ್ವಾಗತಿಸಿದರು.ಪ್ರಕಾಶ್ ಗಚ್ಚಿನಮಠ  ನಿರೂಪಿಸಿ, ರೇಣುಕಾ ರೇವಣಕರ್ ವಂದಿಸಿದರು.