ಧರೆಪ್ಪ ಸಿ ಮಿರ್ಜಿ ನಾಮಪತ್ರ ಸಲ್ಲಿಕೆ
ಗುರ್ಲಾಪೂರದ 20: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಗುರ್ಲಾಪೂರ ಇದರ ಆಡಳಿತ ಮಂಡಳಿ ಚುನಾವಣೆ ದಿ. 29ರಂದು ಮುಂದಿನ ಐದು ವರ್ಷದ ಅವಧಿಗಾಗಿ ನಾಮ ಪತ್ರ ಸಲ್ಲಿಸುವ ಕಾರ್ಯ ಪ್ರಾರಂಭವಾಗಿದ್ದು ಇಂದು ಗ್ರಾಮದ ಯುವ ಧುರೀಣ ಧರೆಪ್ಪ ಸಿ ಮಿರ್ಜಿ ಇವರು ಸಾಲಗಾರ ಸಾಮ್ಯಾನ ಕ್ಷೇತ್ರದಿಂದ ನಾಮ ಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಆರ್ ಬಿ ಹೊಸೂರ ಇವರಿಗೆ ಸಲ್ಲಿಸಿದರು.
ಜಯಪ್ರಕಾಶ ಗಾಣಿಗೇರ, ರೇವಪ್ಪ ನೇಮಗೌಡರ, ದುಂಡಪ್ಪ ಗೌಡ್ರ, ಲಕ್ಷ್ಮಣ ಮುಗಳಖೋಡ, ಶಿವಬಸು ಮಿರ್ಜಿ, ಬಸಪ್ಪ ನೇಮಗೌಡರ, ಮಂಜು ಹಳ್ಳೂರ, ಸಿದ್ದಲಿಂಗ ನೇಮಗೌಡರ, ಹನಮಂತ ಮೈಗೂರ(ಹುಣಶ್ಯಾಳ), ಕೃಷ್ಣ ಗಡ್ಡೆಕಾರ, ವಿಠ್ಠಲ ಮಾಂಗ, ಮಲ್ಲು ಹಳೆತೋಟ, ಹಾಗೂ ಗ್ರಾಮದ ವಿವಿಧ ಸಂಘಟಣೆಗಳ ಸಂಘಟಿಕರು ಆಗಮಿಸಿದ್ದರು.