ಮೂಡಲಗಿ: 24ರಂದು ಮೂಲಭೂತ ಸೌಲಭ್ಯಕ್ಕಾಗಿ ಧರಣಿ ಸತ್ಯಾಗ್ರಹ

ಲೋಕದರ್ಶನ ವರದಿ

ಮೂಡಲಗಿ 21: ಜೆಡಿಎಸ್ ಗೆದ್ದಿರುವ ಮೂಡಲಗಿ ಪುರಸಭೆಯ 8 ವಾರ್ಡಗಳಲ್ಲಿ ಅವಶ್ಯವಿರುವ ಮೂಲಭೂತ ಸೌಲಭ್ಯ ಒದಗಿಸಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರುವ ಸಾರ್ವಜನಿಕ ತಾರತಮ್ಯ ನೀತಿಯನ್ನು ಖಂಡಿಸಿ ಜು.24ರಂದು  ಪುರಸಭೆ ಆವರಣದಲ್ಲಿ ಅನಿದರ್ಿಷ್ಟ ಅವಧಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.

ಅವರು ಸ್ಥಳೀಯ ಸಮರ್ಥ ಶಾಲೆಯಲ್ಲಿ  ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆಯ ಚುನಾವಣಾ ಪೂರ್ವದಲ್ಲಿ ಮೂಡಲಗಿ ಪುರಸಭೆಯ 23ವಾಡರ್್ಗಳಿಗೆ ಕಾಮಗಾರಿಯ ಟೆಂಡರ್ ಆಗಿತ್ತು. ವಿಧಾನಸಭಾ ಚುನಾವಣೆಗೆ ನೀತಿಸಂಹಿತೆ ಜಾರಿಗೆಯಾದ ಕಾರಣ ಕಾಮಾಗಾರಿ ನಡೆಯಲಿಲ್ಲ. 

ತದ ನಂತರ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ 8 ಸ್ಥಾನಗಳನ್ನು ಪಡೆದ ಕಾರಣ ರಾಜಕೀಯ ಉದ್ದೇಶದಿಂದ 2018-19ನೇ ಸಾಲಿನಲ್ಲಿ ವಾಡರ್್ ಸಂಖ್ಯೆ 03,04,06,07,09,10,17,19 ಗಳಲ್ಲಿ ಸಾರ್ವಜನಿಕರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿರುವುದಿಲ್ಲ. ಚುನಾವಣೆಯಾದ ನಂತರ ಎಲ್ಲ ವಾಡರ್್ಗಳನ್ನು ಅಭಿವೃದ್ದಿ ಪಡಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. 

2019-20 ನೇ ಸಾಲಿನ ವಿವಿಧ ಕಾಮಗಾರಿಯನ್ನು  ಬಿಜೆಪಿ ಗೆದ್ದಿರುವ ಅಭ್ಯಥರ್ಿಗಳ ವಾಡರ್್ಗಳಿಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಪುರಸಭೆ ಆಧಿಕಾರಿಗಳು ಸಾರ್ವಜನಿಕ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಜೆಡಿಎಸ್  ಪಡೆದಿರುವ 8 ಸ್ಥಾನಗಳಿಗೆ ಉದ್ದೇಶಪೂರ್ವಕವಾಗಿ ಕಾಮಗಾರಿ ಕೈಗೊಳ್ಳದೆ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಅಭಿವೃದ್ದಿಯ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಷಯ ಕುರಿತು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಸೂಕ್ತ ಪರಿಹಾರ ದೊರಕಿಲ್ಲ. ಆ ಕಾರಣಕ್ಕಾಗಿ ಪ್ರಸಕ್ತ 2019-20ನೇ ಸಾಲಿನ ವಿವಿಧ ಅನುದಾನದ ಅಡಿಯಲ್ಲಿ ಜೆಡಿಎಸ್ ಗೆದ್ದಿರುವ 8 ವಾಡರ್್ಗಳಿಗೆ ರಸ್ತೆ, ಚರಂಡಿ, ಶೌಚಲಯ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸುವ ತನಕ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಪುರಸಭೆಯ ಆವರಣದಲ್ಲಿ ಜು.24ರಂದು ಧರಣಿ ಸತ್ಯಾಗ್ರಹ ನಡೆಸಲೂ ತಿಮರ್ಾನಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಪುರಸಭೆ ಸದಸ್ಯರಾದ ಶಿವಾನಂದ ಸಣ್ಣಕ್ಕಿ, ಆದಮ್ ತಾಂಬೋಳಿ, ಚೆನ್ನಪ್ಪ ಅಥಣಿ, ಮಲ್ಲಪ್ಪ ತೇರದಾಳ, ಚನ್ನಬಸಪ್ಪ ರುದ್ರಪೂರ ಉಪಸ್ಥಿತರಿದ್ದರು.