ಪ್ರಜಾಸೌಧ ಸ್ಥಳ ವಿರೋಧಿಸಿ 18 ನೇ ದಿನಕ್ಕೆ ಮುಂದುವೆರೆದ ಧರಣಿ ಸತ್ಯಾಗ್ರಹ. ತಾಳಿಕೋಟಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ

ಪ್ರಜಾಸೌಧ ಸ್ಥಳ ವಿರೋಧಿಸಿ 18 ನೇ ದಿನಕ್ಕೆ ಮುಂದುವೆರೆದ ಧರಣಿ ಸತ್ಯಾಗ್ರಹ. ತಾಳಿಕೋಟಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ  Dharani Satyagraha against Praja Soudha site continues for 18th day. Support from various organizati


ತಾಳಿಕೋಟೆ 14 : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಶುಕ್ರವಾರ 17 ನೇ ದಿನದ ಸತ್ಯಾಗ್ರಹವು ತಾಳಿಕೋಟಿಯ ಬಸವೇಶ್ವರ ಮಾರ್ಕೆಟ್ ಯಾರ್ಡ್‌ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ )ವರ್ತಕರ ಹಾಗೂ ನೌಕರರ ಸಂಘ ತಾಳಿಕೋಟಿ, ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ 17 ನೇ ದಿನದ ಸತ್ಯಾಗ್ರಹ ನಡೆಸಿದರು.  

ಹಿರಿಯರು ಗಣ್ಯ ವ್ಯಾಪಾರಸ್ಥರು ಮುರಿಗೆಪ್ಪ ಸರಶೆಟ್ಟಿ ಹಾಗೂ ನೌಕರರ ಸಂಘದ ಅಧ್ಯಕ್ಷ ಎಂ ಎಸ್ ಬಡಿಗೇರ ಮಾತನಾಡಿ ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ಐದಾರು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ಈ ಸ್ಥಳ ಬಹಳ ದೂರ ವಾಗುವುದರಿಂದ ತಾಳಿಕೋಟಿ ಪಟ್ಟಣದಲ್ಲಿಯೇ ಇರುವ ಸರ್ಕಾರಿ ಸ್ಥಳಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು, ತಾಳಿಕೋಟಿ ಪಟ್ಟದಲ್ಲಿ ಪ್ರಜಾಸೌಧ ನಿರ್ಮಾಣ ಆಗುವವರೆಗೂ ನಮ್ಮ ಸಂಘದಿಂದ ಹಿರಿಯರೆಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವದಾಗಿ ತಿಳಿಸಿದರು.  

ಈ ಸಂದರ್ಭದಲ್ಲಿ ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಬಾಬು ಹಜೇರಿ,ವಿಶ್ವನಾಥ ಬಿದರಕುಂದಿ, ಗುರುಸಂಗ ಕಶೆಟ್ಟಿ, ಅಯ್ ಬಿ ಬೆಳೆಬಾವಿ, ಬಿ ಎಂ ಪಾಟೀಲ, ಎ ಅಯ್ ಚಿನಗುಡಿ, ಎಸ್ ವೈ ಅನೆಸೂರ, ಖಾಸ್ಗತೇಶ್ವರ ಟ್ರೇಡಿಂಗ್ ಕಂಪನಿ, ಜಗದೀಶ ಬೆಳಬಾವಿ, ಪ್ರಭು ಕತ್ತಿ, ಬಸವರಾಜ ಪಂಚಗಲ, ಐ ಬಿ ಮೈಲೇಶ್ವರ, ಕವಿತಾ ಟ್ರೇಡರ್ಸ, ಚಂದ್ರು ದುಮಗುಂಡಿ, ಎಂ ಸಿ ಕತ್ತಿ, ಆನಂದ ಪಿಸಾಳೆ, ಅಂಬರೀಶ ಕಶಟ್ಟಿ, ಜಿ ಜಿ ಕೋರಳ್ಳಿ, ಪ್ರಭು ಬೆಳಬಾವಿ, ಶ್ರೀಶೈಲ್ ಸಾಸನೂರ, ಈರಯ್ಯ ಹಿರೇಮಠ, ಎಂ ಎಸ್ ಬಡಿಗೇರ, ಎನ್ ಎಸ್ ಕಲ್ಲೂರ, ನಾಗಪ್ಪಗೌಡ ಚಿನಗುಡಿ, ಬಾಬೂ ಟ್ರೇಡರ್ಸ,

ಸಿದ್ದಲಿಂಗ ಮೈಲೇಶ್ವರ, ನಾಗರಾಜ್ ಬಳಗಗಾರ, ಜಿಎಸ್ ಜಮ್ಮಲದಿನ್ನಿ, ಕಾಶಿನಾಥ್ ಕುಂಬಾರ, ರಾಮಚಂದ್ರ ಜಾದವ್‌. ಹೋರಾಟ ಸಮಿತಿಯ ಪದಾಧಿಕಾರಿಗಳಾದ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಮೆಹೆಬೂಬ ಚೋರಗಸ್ತಿ , ಪರಶುರಾಮ ತಂಗಡಗಿ, , ವಿಜಯಸಿಂಗ್ ಹಜೇರಿ , ಮಯೂರ ಪಾಟೀಲ, ರಾಗು ಮಾನೆ, ನೀಲಕಂಠ ಕೊಣ್ಣೂರ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ,, ಅಮಿತ್ ಮನಗೂಳಿ, ಮಹೇಶ ಚಲವಾದಿ , ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ,, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.