ಅನೇಕ ಸಮಾಜಪರ ಕಾರ್ಯ ಮಾಡುತ್ತಿದೆ ಧರ್ಮಸ್ಥಳ ಸಂಘ: ಕಾಟೆ
ರಾಯಬಾಗ 25: ಧರ್ಮಸ್ಥಳ ಸಂಘದಿಂದ ಕೇವಲ ಸಾಲ ನೀಡುವುದಲ್ಲದೇ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಂತಸದ ಸಂಗತಿ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ ಹೇಳಿದರು.
ಅವರು ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿರುವ ಆಸರೆ ಇಲ್ಲದ ಹನಿಪಾ ಮುಲ್ಲಾ ಅವರಿಗೆ ಇಂದು ಹೇಮಾವತಿ ವಿ ಹೆಗ್ಗಡೆ ಆಶಯದಂತೆ ಹಾಗೂ ಪೂಜ್ಯರ ಮಾರ್ಗದರ್ಶನ ದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರು ಆಗಿರುವ ವಾತ್ಸಲ್ಯ ಮನೆ ಹಸ್ತಾಂತರಿಸಿ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳ ಸಂಘದವತಿಯಿಂದ ಆಸರೆ ಇಲ್ಲದವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ದೇವಸ್ಥಾನಗಳ ಕಟ್ಟಲು ಹಣ ನೀಡುತ್ತಿದೆ. ಮಾಶಾಸನ, ಅಂಗವಿಕಲರಿಗೆ ವೀಲ ಚೇರ ಅನೇಕ ಕಾರ್ಯಕ್ರಮಗಳು, ಸಾಮಾಜಿಕ ಕೆಲಸಗಳು ರಾಜ್ಯದಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕರು ನಾಗರತ್ನ ಹೆಗಡೆ, ಜ್ಞಾನವಿಕಾಸ ಯೋಜನಾಧಿಕಾರಿ ಮಲ್ಲಿಕಾ, ತಾಲೂಕಿನ ಯೋಜನಾಧಿಕಾರಿ ಸಚಿನ ಗೌಡ, ವಲಯದ ಮೇಲ್ವಿಚಾರಕಿ ಮಂಜುಳಾ ಚಂದ್ರಶೇಖರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಗ್ರಾಮ ಪಂಚಾಯಿತಿ ಸದಸ್ಯರಾದ ಧೂಳ ಗೌಡಾ ಪಾಟೀಲ, ಅನಿಲ ಹಂಜೆ, ಅಜಿತ ಖೇಮಲಾಪುರೆ, ಅಭಿವೃದ್ಧಿ ಅಧಿಕಾರಿ ಎಸ್ ಎಸ್ ನ್ಯಾಮಗೌಡ ಸ್ಥಳೀಯ ಸೇವಾ ಪ್ರತಿನಿಧಿಗಳ ಸಂಘದ ಸದಸ್ಯರು ಉಪಸ್ಥಿತರಿದ್ದರು.