ಭಕ್ತಿಯೇ ಗುರುವಿಗೆ ಶಕ್ತಿಯಾಗಿದೆ: ಗುರುಶಾಂತೇಶ್ವರಶ್ರೀ

ಲೋಕದರ್ಶನವರದಿ

ಹಾವೇರಿ : ಭಕ್ತರ ನಿಷ್ಕಲ್ಮಶವಾದ ಭಕ್ತಿಯೇ ಗುರುವಿಗೆ ಶಕ್ತಿಯಾಗಿದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀ ಹೇಳಿದರು.

  ನೆಗಳೂರ ಗ್ರಾಮದಲ್ಲಿ ಜರುಗಿದ ಹೊಟ್ಟಿಗೌಡ್ರ ಮನೆತನದವರದಿಂದ ತುಲಾಬಾರ ಸೇವಾ ಸಮಾರಂಭ ದಲ್ಲಿ ನಾಣ್ಯಗಳ ತುಲಾಬಾರ ಸೇವೆ ಸ್ವೀಕರಿಸಿ ಶ್ರೀಗಳು ಮಾತನಾಡಿದರು.

  ಗುರು ಶಿಷ್ಯರ ಸಂಬಂಧ ತಾಯಿ ಮಕ್ಕಳ ಸಂಬಂಧವಿದ್ದಂತೆ  ಅದು ಎಂದಿಗೂ ಕೆಡದಂತೆ ಗಟ್ಟಿಯಾಗಿ  ಇಟ್ಟುಕೊಳ್ಳುವ ಮಾರ್ಗವೇ ಭಕ್ತಿಯಾಗಿದೆ ಭಕ್ತಿಯಿಂದ ಗುರು ಲಿಂಗ ಜಂಗಮ ಸೇವೆ ಮಾಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಆ ನಿಟ್ಟಿನಲ್ಲಿ ಹೊಟ್ಟಿಗೌಡ್ರ ಕುಟುಂಬದವರು ನಮಗೆ  ಸ್ವ  ಗ್ರಾಮದಲ್ಲಿ  ಪ್ರಪ್ರಥಮವಾಗಿ ನಾಣ್ಯ ತುಲಾಭಾರ ಸೇವೆ    ನೀಡಿರುವದು . ಸಂತೋಷ ತಂದಿದೆ ಈ ಮೊತ್ತವನ್ನು ಮಠದಲ್ಲಿ ನಿಮರ್ಾಣವಾಗುತ್ತಿರುವ ಮಂದಿರಕ್ಕೆ ವಿನಿಯೋಗಿಸಲಾಗುವುದು ಎಂದರು.

       ಸಮಾರಂಭದಲ್ಲಿ ನಿಂಗಮ್ಮ ಹೊಟ್ಟಿಗೌಡ್ರ.ಬಸವರಾಜ ಹೊಟ್ಟಿಗೌಡ್ರ.  ಬಸವರಾಜ ಮರಗಬ್ಬಿನ.  ಈಶ್ವರ ಶಿಡೇನೂರ. ನಾಗಪ್ಪ ಕಟ್ಟೆಣ್ಣನವರ.ಸೋಮಣ್ಣ ಸಪ್ಪಣ್ಣನವರ.  ಗುರುರಾಜ ಪತ್ರಿ.ವೀರಭದ್ರಪ್ಪ ಮರಗಬ್ಬಿನ.ಪಕ್ಕಿರಪ್ಪ ಹೊಸಮನಿ.ರಮೇಶ ಸುಣಗಾರ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.