ಭಕ್ತಿ ಶ್ರದ್ಧೆಯಿಂದ ದೇವರ ನಾಮಸ್ಮರಣೆ ಮಾಡಬೇಕು: ಮಹೇಶಾನಂದ ಶ್ರೀ

ಲೋಕದರ್ಶನ ವರದಿ

ಮೂಡಲಗಿ 09:  ಯಾರು ಭಕ್ತಿಯಿಂದ ಭಗವಂತನನ್ನು ಪೂಜಿಸುತ್ತಾನೋ ಅವನಿಗೆ ದೇವರು ಒಲಿಯುತ್ತಾನೆ. ಭಕ್ತಿ ಶ್ರದ್ಧೆಯಿಂದ ದೇವರ ನಾಮಸ್ಮರಣೆಯನ್ನು ಮಾಡಬೇಕು ಎಂದು ಇಚಲಕರಂಜಿ ಭಕ್ತಿ ಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು.

ಸಮೀಪದ ವಡೆರಹಟ್ಟಿ ಗ್ರಾಮದ ವೇದಾಂತ ಕೇಸರಿ ಮಲ್ಲಿಕಾಜರ್ುನ ಶಿವಯೋಗಿ ಆಶ್ರಮದಲ್ಲಿ ನಡೆಯುತ್ತಿರುವ ವೇದಾಂತ ಕೇಸರಿ ಮಲ್ಲಿಕಾಜರ್ುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಸಿದ್ದಲಿಂಗ ಸ್ವಾಮಿಗಳ ಪುಣ್ಯಾರಾಧನೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವೇದಾಂತ ಕೇಸರಿ ಮಲ್ಲಿಕಾಜರ್ುನ ಶಿವಯೋಗಿಗಳು ಸುಮಾರು 40ವರ್ಷಗಳ ಹಿಂದೆ ವಡೆರಹಟ್ಟಿ ಗ್ರಾಮದಲ್ಲಿ ಭಕ್ತಿಯ ದೀಪವನ್ನು ಹಚ್ಚಿದ್ದಾರೆ ಈಗ ಆ ದೀಪವನ್ನು ಗುರುಪ್ರಸಾದ ಸ್ವಾಮಿಜೀಯವರು ಸಂರಕ್ಷಣೆ ಮಾಡುತ್ತ ಬೆಳಗುತ್ತಿದ್ದಾರೆ. ಮನುಷ್ಯನಿಗೆ ಜ್ಞಾನದ ದೀಪ ಬೆಳಗಲು ಗುರುವಿನ ಅವಶ್ಯಕತೆ ಬೇಕು. ಮನಸ್ಸು, ಬುದ್ದಿ, ಧ್ಯಾನ, ಭಕ್ತಿ, ಆತ್ಮದಂತ ಸಂಗತಿಗಳು ಬಾಹ್ಯದಲ್ಲಿ ಕಾಣದಿದ್ದರು ಅಂತರಂಗದಿಂದ ಕಾಣುವಂತೆ ಮಾಡುವ ಕಲೆಗಾರಿಕೆ ಗುರು ಪರಂಪರೆಗಿದೆ. ಮನುಷ್ಯನ ಮನಸ್ಸು ಸ್ವಚ್ಛ ಮಾಡಲು ಜಾತಿ,ಮತ ಪಕ್ಷ ಭೇಧಗಳನ್ನು ಮರೆಸುವುದಕ್ಕೆ ಪ್ರವಚನಗಳು  ಅನುಕೂಲವಾಗುತ್ತದೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ನಾವು ಮಾಡಿದ ಪುಣ್ಯದ ಕಾರ್ಯ ಮಾತ್ರ ಶಾಶ್ವತ ಅದಕ್ಕಾಗಿ ನಾವು ಗಳಿಸಿದ ಸಂಪತ್ತಿನಲ್ಲಿ ಅಲ್ಪವಾದರು ದಾನ ಮಾಡಬೇಕು. ಭಗವಂತನಿಗೆ ಶುದ್ದ ಮನಸ್ಸಿನ ನಿಸ್ವಾರ್ಥ ಸೇವೆಯ ಪ್ರೀತಿ ಭಕ್ತಿ ಯಾರು ತೋರಿಸುವರೋ ಅವರನ್ನು ದೇವರು ಕಾಪಡುವನು ಎಂದರು. 

      ಸ್ಥಳೀಯ ವೇದಾಂತ ಕೇಸರಿ ಮಲ್ಲಿಕಾಜರ್ುನ ಶಿವಯೋಗಿ ಆಶ್ರಮದ ಗುರುಪ್ರಸಾದ ಮಹಾಸ್ವಾಮಿ ಆಶೀರ್ವಚನ ನೀಡುತ್ತ,  ನಮ್ಮ ದೇಶ ಸಾಧು, ಸಂತರು ಹಾಗೂ ಪುಣ್ಯ ಪುರುಷರ ದಾರ್ಶನಿಕರ ಬೀಡು, ಆಧ್ಯಾತ್ಮಿಕ ಮತ್ತು ಯೋಗದ ನೆಲೆಯಾಗಿರುವ ಮತ್ತು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿರುವ ಭಾರತದ ನೆಲದಲ್ಲಿ ವಾಸಿಸುವವರೆಲ್ಲರು ಪುಣ್ಯವಂತರು. ಯಾರು ಧರ್ಮವನ್ನು ರಕ್ಷಣೆ ಮಾಡುವರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಶರಣರ ಮಾತುಗಳು ನಮಗೆ ಧರ್ಮ ಸಂಸ್ಕಾರಗಳನ್ನು  ನೀಡಿ ಧರ್ಮದ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದರು.

ವಿಜಯಪುರ ಶಿವಾನಂದ ಋಷಿ ಆಸ್ರಮದ ಷಡಕ್ಷರಿ ಮಹಾಸ್ವಾಮಿಜೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಸೇರಿದಂತೆ ಶ್ರೀಮಠದ ಸಾವಿರಾರು ಭಕ್ತರು ಪಾಲ್ಗೋಂಡಿದ್ದರು.  ಉಪಾನ್ಯಾಸಕ ನಾರಾಯಣ ತೊಟಗಿ ಸ್ವಾಗತಿಸಿ, ನಿರೂಪಿಸಿದರು.