ಸತತ 9 ದಿನಗಳ ಕಾಲ ತಡರಾತ್ರಿವರೆಗೂ ಕುಳಿತು ಜ್ಞಾನದ ಪ್ರವಚನ ಕೇಳಿದ ಶಿಗ್ಗಾವಿಯ ಭಕ್ತರು
Devotees of Shiggavi sat up late into the night for 9 consecutive days listening to the discourse of
ಲೋಕದರ್ಶನ ವರದಿ
ಶಿಗ್ಗಾವಿ 14 : ಸತತ 9 ದಿನಗಳ ಕಾಲ ತಡರಾತ್ರಿವರೆಗೂ ಕುಳಿತು ಜ್ಞಾನದ ಪ್ರವಚನ ಕೇಳಿದ ಶಿಗ್ಗಾವಿಯ ಭಕ್ತರು ಇಂದಿನ ಕಾಲಕ್ಕೆ ಮಾದರಿಯಾಗಿದ್ದಾರೆ ಎಂದು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ದಿ. ಸಂಗನಬಸವ ಮಹಾಸ್ವಾಮಿಗಳು ಮತ್ತು ದಿ. ಬಸವಲಿಂಗ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 9 ದಿನಗಳ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹದಂತಹ ಸಾಮಾಜಿಕ ಕಾರ್ಯಗಳ ಮೂಲಕ ಶ್ರೀಗಳು ಈ ಮಠವನ್ನು ಎಲ್ಲರೂ ಹೆಮ್ಮೆ ಪಡುವಂತಹ ಮಾದರಿ ಕೇಂದ್ರವನ್ನಾಗಿ ಮಾಡಿದ್ದಾರೆ ಎಂದರು. ಬಟಕುರ್ಕಿಯ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಮಹನೀಯರು ತಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದವರು, ಅಂತಹ ಮಹಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.
ಹಾವೇರಿ ಹೊಸಮಠದ ಬಸವ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ದೇಹಕ್ಕೆ ಸಾವು ಅನಿವಾರ್ಯ, ಆದರೆ ನಾವು ಮಾಡುವ ಸತ್ಕಾರ್ಯಗಳು ಚಿರಂಜೀವಿಯಾಗಿ ಉಳಿಯುತ್ತವೆ. ನಮ್ಮ ಬದುಕಿನ ಆದರ್ಶಗಳೇ ಸಮಾಜದಲ್ಲಿ ನಮ್ಮ ಪರಿಚಯದ ಕಾರ್ಡ್ ಆಗಿರಬೇಕು. ಭಕ್ತರ ಸೇವೆಯ ಬಲದಿಂದಲೇ ಇಂದು ಈ ಮಠ ಭಕ್ತಿಯ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿದೆ ಎಂದರು.
ಗೋಕಾಕ ಶೂನ್ಯಸಂಪಾದನಮಠದ ಮುರಘಂದ್ರ ಮಹಾಸ್ವಾಮಿಗಳು ಮಾತನಾಡಿ, ಇಂಚಗೇರಿ ಸಂಪ್ರದಾಯದವರು ನುಡಿದಂತೆ ನಡೆಯುವುದನ್ನು ಬಾಳಿ ತೋರಿಸಿದ್ದಾರೆ. ಇಂದಿನ ಸಮಾಜದಲ್ಲಿ ಮಾತಿನಂತೆ ನಡೆಯದ ಕಾರಣ ಉಪದೇಶಗಳು ಪರಿಣಾಮ ಬೀರುತ್ತಿಲ್ಲ. ಎಲ್ಲರೂ ಸೇವಕರಂತೆ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಪ್ರವಚನಕಾರರಾದ ಸದ್ಗುರು ಸಮರ್ಥ ಡಾ. ಎ ಸಿ ವಾಲಿ ಮಹಾರಾಜರು ಮಾತನಾಡಿದರು. ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು, ಬಸವಲಿಂಗ ದೇವರು, ಶಿವಾನಂದ ಮ್ಯಾಗೇರಿ, ಶಶಿಕಾಂತ ರಾಠೋಡ, ಸಿ.ಡಿ. ಯತ್ತಿನಹಳ್ಳಿ ನಾಗಪ್ಪ ಬೆಂತೂರ, ವಿಶ್ವನಾಥ ಬಂಡಿವಡ್ಡರ, ಬಸವರಾಜ ಹಡಪದ, ಸುಧಾಕರ ದೈವಜ್ಞ ಶಂಭು ಕೇರಿ, ರಮೇಶ ಹರಿಜನ, ಮಾಲತೇಶ ನಾಯ್ಯೋಡಿ, ಡಾ. ಮಲ್ಲೇಶಪ್ಪ ಹರಿಜನ, ಕರಿಯಪ್ಪ ಕಟ್ಟಿಮನಿ, ಈರಣ್ಣ ಅಂಕಲಕೋಟಿ, ಮಾರುತಿ ಕುಂದಗೋಳ, ರವಿ ಕಡಕೋಳ, ಬಸಯ್ಯ ಹಿರೇಮಠ, ಬಸವರಾಜ ಶಿಗ್ಗಾವಿ, ಶರೀಫ ಮಾಕಪ್ಪನವರ, ವೀರೇಶ ಹಿರೇಮಠ, ಹೇಮಂತ ಭಜಂತ್ರಿ, ಪ್ರಭುಗೌಡ ತೆಂಬದಮನಿ, ಶಿವಾನಂದ ಬೆಳಗಲಿ ಸೇರಿದಂತೆ ಭಕ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 