ಸುಕ್ಷೇತ್ರ ಶಿರಸಂಗಿ ಕಾಳಮ್ಮದೇವಿ ದೇವಾಲಯಕ್ಕೆ ಬೆಟಗೇರಿ ಸದ್ಭಭಕ್ತರಿಂದ ಪಾದಯಾತ್ರೆ
ಬೆಟಗೇರಿ, 27; ಪ್ರತಿಯೊಬ್ಬರೂ ಶ್ರೀದೇವಿ ನಾಮಸ್ಮರಣೆ ಮಾಡಿ ಕಾಳಮ್ಮದೇವಿಯ ಕೃಪೆಗೆ ಪಾತ್ರರಾಗಬೇಕು. ಸುಕ್ಷೇತ್ರ ಶಿರಸಂಗಿ ಕಾಳಮ್ಮದೇವಿ ಶಕ್ತಿದೇವತೆಯಾಗಿದ್ದಾಳೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯುವಧುರೀಣ ಶಿವರಾಜ ಪತ್ತಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಿರಸಂಗಿ ಕಾಳಮ್ಮದೇವಿ ಸದ್ಭಭಕ್ತರು ಸವದತ್ತಿ ತಾಲೂಕಿನ ಸುಕ್ಷೇತ್ರ ಶಿರಸಂಗಿ ಕಾಳಮ್ಮದೇವಿ ದೇವಾಲಯಕ್ಕೆ ಯುಗಾದಿ ಹಬ್ಬದ ಪ್ರಯುಕ್ತ ಮಾ.27 ರಂದು ಹಮ್ಮಿಕೊಂಡ ಪಾದಯಾತ್ರೆಗೆ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುಗಾದಿ ಹಬ್ಬದ ಪ್ರಯುಕ್ತ ಶ್ರೀದೇವಿ ದೇವಾಲಯಕ್ಕೆ ಸ್ಥಳೀಯ ಯುವಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.
ಸ್ಥಳೀಯ ಶಿರಸಂಗಿ ಕಾಳಮ್ಮದೇವಿ ಪಾದಯಾತ್ರೆ ಕಾರ್ಯಕ್ರಮದ ವ್ಯವಸ್ಥಾಪಕ ಸಮಿತಿ ಸಂಚಾಲಕ ವಿಠಲ ಬಡಿಗೇರ ಮಾತನಾಡಿ, ನೂರಾರು ಜನ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಟಗೇರಿ ಗ್ರಾಮದಿಂದ ಅಕ್ಕಿಸಾಗರ ಮಾರ್ಗವಾಗಿ ಪಾದಯಾತ್ರೆ ನಡೆದು ಯರಗಟ್ಟಿ ನಗರದಲ್ಲಿ ಮಾ.27ರಂದು ವಾಸ್ತವ್ಯ ಮಾಡಿ, ಮಾ.29ರಂದು ಬೆಳಗ್ಗೆ ಶಿರಸಂಗಿ ಕಾಳಮ್ಮದೇವಿ ದೇವಾಲಯಕ್ಕೆ ಪಾದಯಾತ್ರೆ ತಲುಪಲಿದೆ ಎಂದು ತಿಳಿಸಿದರು.
ಮಹೇಶ ಪತ್ತಾರ, ಬಸವರಾಜ ಬಡಿಗೇರ, ಬಸವರಾಜ ಕಂಬಾರ, ಪರಶುರಾಮ ಬಡಿಗೇರ, ಮಲ್ಲಿಕಾರ್ಜುನ ಕಂಬಾರ, ಶಿವಾನಂದ ಪತ್ತಾರ, ಪ್ರವೀಣ ಪತ್ತಾರ ಸೇರಿದಂತೆ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸದಸ್ಯರು, ಯುವಕರು, ಭಕ್ತರು ಇದ್ದರು.