ಈಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಭ್ರಮದಲ್ಲಿ ಭಕ್ತಾಧಿಗಳು

Devotees at the anniversary celebrations at the Eshwar temple

ಲೋಕದರ್ಶನ ವರದಿ 

ಈಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಭ್ರಮದಲ್ಲಿ ಭಕ್ತಾಧಿಗಳು 

ಕೊಪ್ಪಳ 27: ನಗರದ ಎನ್‌.ಜಿ.ಓ ಕಾಲೋನಿಯ ಈಶ್ವರದೇವಸ್ಥಾನದ ವಾರ್ಷಿಕೋತ್ಸವಇತ್ತೀಚೆಗೆಜರುಗಿತು. ವಾರ್ಷಿಕೋತ್ಸವ ನಿಮಿತ್ಯ ಎರಿ​‍್ಡಸಿದ್ದ ಪ್ರಸಾದಕ್ಕೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಸಿದ್ಧೇಶ್ವರ ಮಹಾಸ್ವಾಮಿಗಳು ಹಿರೇಮಠ ಮೈನಳ್ಳಿ ಇವರು ರುದ್ರಾಭಿಷೇಕ ಪೂಜೆ ಸಲ್ಲಿಸಿದರು.  

ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಶ್ರಿದೇವಿ ಪಾಟೀಲ, ದ್ವಿತೀಯ ಸೌಮ್ಯಶ್ರೀ ಅಶ್ರೀತ್, ತೃತೀಯ ಸುಧಾ ಶಿವಪುರ, ಮಕ್ಕಳು ಆಸಕ್ತಿಯಿಂದ ಓನಕೆ ಒಬವ್ವ, ಕೊರವಂಜಿ, ಬುಡಬುಡಕಿ, ಕಿತ್ತೂರಚೆನ್ನಮ್ಮ, ರೈತ, ಭಗತ್ ಸಿಂಗ್, ಶಿಕ್ಷಕ, ಸೈನಿಕ, ಹೀಗೆ ವಿವಿಧ ವಷಭೂಷಣತೊಟ್ಟು ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿಚಿಣ್ಣರು ಪಾಲ್ಗೊಂಡರು. ಪ್ರಥಮದಯಾ ಹೆಗಡೆ, ದ್ವಿತೀಯ ಲಕ್ಷ್ಮೀ ದಿವಟರ್, ತೃತೀಯ ಸೃಜನ್ ಶಿವಪುರ, ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಶ್ರೇಯಸ್, ದ್ವಿತೀಯ ಸಮನ್ವಿತಾ ಮಠಪತಿ, ತೃತೀಯಅಕ್ಷರ ಮೇದಾರ, ಭಕ್ತಿಗೀತೆ ಸ್ಪರ್ಧೆ ವಿಭಾಗದಲ್ಲಿ ಪ್ರಥಮ ನಿಹಾರಿಕಾ ನಾರಾಯಣಸ್ವಾಮಿ, ದ್ವಿತೀಯ ಅನುಶ್ರೀ ಅಶ್ರೀತ್, ತೃತೀಯ ಪ್ರತಿಭಾಜಹಗೀರದಾರ,  

ಲಚ್ಚಣ್ಣ ಹಳೇಪೇಟೆ, ಕೃಷ್ಣ ಸೊರಟೂರ, ರೇಖಾ ಸವಡಿಅವರಿಂದ ಸಂಗೀತಕಾರ್ಯಕ್ರಮಜರುಗಿತು. ಕಾಲೋನಿಯಲ್ಲಿ ಕಳೆದ ವರ್ಷ ನಿರ್ಮಾಣವಾದ ಈ ದೇವಸ್ಥಾನ ಮಕ್ಕಳಲ್ಲಿ ಹಾಗೂ ನಿಮ್ಮೆಲ್ಲರಿಗೂ ಸಕಾರಾತ್ಮಕ ಆಲೋಚನೆ ಬಿತ್ತುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಗುತ್ತಿರುವುದು ಸ್ವಾಗತಾರ್ಹಎಂದು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಬೃಹನ್ಮಠ ಹೆಬ್ಬಾಳ ಇವರು ಆಶೀರ್ವನ ನೀಡಿದರು. ಇದೇ ಸಂದರ್ಭದಲ್ಲಿಈಶ್ವರದೇವಸ್ಥಾನಅಭಿವೃದ್ಧಿ ಸೇವಾ ಸಮಿತಿಯಅಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ದೇವಸ್ಥಾನದ ನಿರ್ಮಾಣದಖರ್ಚಿನ ವಿವರಗಳನ್ನು ಸಾರ್ವಜನಿಕವಾಗಿಒಪ್ಪಿಸಲಾಯಿತು 

ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ಮಲ್ಲಮ್ಮಗತ್ತಿ,ಕಸ್ತೂರಿಚಿಕರೆಡ್ಡಿ, ರತ್ನಾ ಅಳವಂಡಿ, ಮಕ್ಕಳ ವೇಷ ಭೂಷಣ ಸ್ಪರ್ಧೆಯ ನಿರ್ಣಾಯಕರಾಗಿ ಲಲಿತಾ ನಾಲ್ವಾಡ, ಶುಭ ಸಂತೋಷ, ವಚನ ಗಾಯನ ಹಾಗೂ ಭಕ್ತಿಗೀತೆ ಸ್ಪರ್ಧೆಯ ನಿರ್ಣಾಯಕರಾಗಿರೇಖಾ ಸವಡಿ, ಶಿಲ್ಪಾ ಪುರಾಣಿಕಮಠಕಾರ್ಯನಿರ್ವಹಿಸಿದರು. 

ಶಿವಶಕ್ತಿ ಮಹಿಳಾ ಮಂಡಳಿ ರಚನೆ ಪದಾಧಿಕಾರಿಗಳ ಆಯ್ಕೆ 

ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಶಿವಶಕ್ತಿ ಮಹಿಳಾ ಮಂಡಳಿ ಕೊಪ್ಪಳ ರಚನೆಯಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಅಧ್ಯಕ್ಷೆ ಸುಮಿತ್ರಎಸ್‌.ಪುರಾಣಿಕಮಠ, ಅಧ್ಯಕ್ಷೆಗೌರಮ್ಮಎಸ್‌.ಗಾರವಾಡಮಠ, ಉಪಾಧ್ಯಕ್ಷರುಅನ್ನಪೂರ್ಣ ಮಂಡಸೊಪ್ಪಿ, ಗಂಗಮ್ಮ ಪಾಟೀಲ ಗೌರವ ಕಾರ್ಯದರ್ಶಿ ರೇಣುಕಾ ಎನ್‌.ಡೊಳ್ಳಿನ ಪ್ರಧಾನ ಕಾರ್ಯದರ್ಶಿ ರೇಣುಕಾ ದಿವಟರ್, ಖಚಾಂಚಿ ಶಿಲ್ಪಾರಾಣಿ ಪುರಾಣಿಕಮಠ, ಕಾರ್ಯಕಾರಿ ಸಮಿತಿ ಸದಸ್ಯರಾಗಿಲಕ್ಷ್ಮೀ ತಳವಾರ, ಗೀತಾ ಗಾರ್ಗಿ, ಶುಭಾ ಹೀರೆಮಠ, ಲಕ್ಷ್ಮೀ ಹಿರೇಗೌಡ್ರ, ಸಹನಾ ಪಾಟೀಲ, ವಿಜಯಲಕ್ಷ್ಮೀ ಪಾಟೀಲ, ಭಾಗ್ಯಶ್ರೀ ಕುಲಕರ್ಣಿ, ಸುವರ್ಣ, ಸುಜಾತ ಒಕ್ಕಳದ, ನಿರ್ಮಲಾ ಪೂಜಾರ, ಕಸ್ತೂರಿಚಿಕರೆಡ್ಡಿಆಯ್ಕೆಯಾದರು.  

ಶಿವರಾತ್ರಿ ನಿಮಿತ್ಯ ವಿಶೇಷ ಪೂಜೆ ಹಾಗೂ ಸಂಜೆ ಭಕ್ತಾಧಿಗಳಿಗೆ ಪ್ರಸಾದವಿತರಣೆ ಕಾರ್ಯಕ್ರಮಗಳುಜರುಗಿದವು. 

ಕಾರ್ಯಕ್ರಮದಲ್ಲಿರೇವಯ್ಯ ಪೂಜಾರ, ರವಿ ವಾಲ್ಮೀಕಿ, ಸಂಗಪ್ಪ ಹಾಲ್ಯಾಳ, ಪಾಲಾಕ್ಷಪ್ಪ, ನಾಗರಾಜನಾಯಕ ಡೊಳ್ಳಿನ, ರಾಘವೇಂದ್ರದೇಶಪಾಂಡೆ, ಮಲ್ಲಿಕಾರ್ಜುನಕಾರವಾಡಮಠ, ಮತ್ತಿತ್ತರರು ಹಾಜರಿದ್ದರು ಪ್ರಾಸ್ತಾವಿಕ ನುಡಿರಾಜಶೇಖರ ಪುರಾಣಿಕಮಠ, ಪ್ರಾರ್ಥನೆ ಶಾಂತಾ ಬಸವರಾಜಗೌರಿಮಠ, ಸ್ವಾಗತಗಂಗಾಧರಖಾನಾಪುರ,ಬಸವರಾಜ ಸವಡಿ ನಿರೂಪಿಸಿದರು.