ಗುಬ್ಬೇವಾಡ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ
Devotee Kanakadasa Jayanti celebrated at Gubbewada school
ಇಂಡಿ 08: ತಾಲೂಕಿನ ಗುಬ್ಬೇವಾಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಶಿಕ್ಷಕ ಶಾಬುದ್ದೀನ್ ಕಸಾಯಿ ಭಾಗವಹಿಸಿ ಮಾತನಾಡಿ, ಕನಕದಾಸರ ಜೀವನವೇ ಒಂದು ಪವಾಡ, ತಿಮ್ಮಪ್ಪನಾಯಕನಾಗಿ ಜನಿಸಿ ಕನಕನಾಯಕನಾಗಿ ಕನಕದಾಸರಾಗಿ ಬೆಳೆದದ್ದು ವಿಶೇಷ, ಸಮಾಜದ ಕೆಳವರ್ಗದಲ್ಲಿ ಜನಿಸಿ ಕೃಷ್ಣನ ವಿಶೇಷ ಭಕ್ತನಾಗಿ ಹೊರಹೊಮ್ಮಿದ್ದು ಅವರ ಭಕ್ತಿಯ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಶಿಕ್ಷಕ ಬಿ.ವಿ.ಹಿರೇಮಠ ಮಾತನಾಡಿ ಕನಕಾದಾರು ಕನ್ನಡ ಸಾಹಿತ್ಯದ ಉನ್ನತ ಸ್ಥಾನದಲ್ಲಿ ನಿಲ್ಲುವರು, ಅವರ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ ಕೃತಿಗಳು ಹಾಗೂ ಅವರು ಬರೆದ ಕೀರ್ತನೆಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಎಂದು ಬಣ್ಣಿಸಿದರು. ಸಮಾಜದಲ್ಲಿನ ಮೇಲು ಕೀಳು, ಬಡವ ಬಲ್ಲಿದ ಎನ್ನುವ ತಾರತಮ್ಯವನ್ನು ನಿಷ್ಠುರವಾಗಿ ಖಂಡಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಭಾಷಣ, ನೃತ್ಯಗಳನ್ನು ಮಾಡಿ ಗಮನ ಸೆಳೆದರು.
ಮುಖ್ಯ ಗುರುಗಳಾದ ಎಮ್.ಬಿ.ಹಾವಳಗಿ, ಶಿಕ್ಷಕರಾದ ಎನ್.ಎಮ್.ಕ್ಷತ್ರಿ, ಎಸ್.ಆರ್.ಅರವತ್ತು, ಎಮ್.ಎಸ್.ಮಾಳಿ, ವಿ.ಬಿ.ಹೊನವಾಡ, ಸುನೀಲ ಮರಗೂರ, ವಿದ್ಯಾ ಮರಗೂರ, ಎಮ್.ಆರ್ ವಾಲಿಕಾರ ಭಾಗವಹಿಸಿದ್ದರು. ಎನ್.ಜೆ.ಚಿಂಚೋಳಿ ನಿರೂಪಿಸಿದರು, ಎಸ್.ಎ.ರಾಠೋಡ ವಂದಿಸಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 