ದೇವಿಹೊಸೂರ: ಎಸ್.ಡಿ.ಎಂ.ಸಿ.ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ

ಹಾವೇರಿ01: ತಾಲೂಕಿನ ದೇವಿಹೊಸೂರ  ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಶನಿವಾರ  ಎಸ್.ಡಿ.ಎಂ.ಸಿ. ಸದಸ್ಯರಿಗೆ ಒಂದು ದಿನದ  ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಮನ್ವಾಚಾರ ಅವರು ಎಸ್.ಡಿ.ಎಂ.ಸಿ.ರಚನೆ, ಅಧಿಕಾರ ಮತ್ತು ಕರ್ತವ್ಯಗಳು, ಸಕರ್ಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು, ಶಿಕ್ಷಣದ ಸಾರ್ವತ್ರೀಕರಣದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಮಹತ್ವ, ರೂಪುರೇಷೆಗಳು, ಶಿಕ್ಷಕರ ತರಬೇತಿಗಳು, ಅನುಪಾಲನೆ, ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸಕರ್ಾರದ  ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು, ಕನರ್ಾಟಕ ರಾಜ್ಯ ಮಕ್ಕಳ ರಕ್ಷಣಾನೀತಿ, ಶಾಲಾಭಿವೃದ್ಧಿ ಯೋಜನೆ  ಶಾಲೆಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಕುರಿತು ಮಾಹಿತಿ ನೀಡಿದರು.

ಸಾನಿಧ್ಯ ವಹಿಸಿದ್ದ  ಹುಬ್ಬಳ್ಳಿ ಮೂರುಸಾವಿರ ಮಠದ ಹಾಗೂ ಹಾನಗಲ್ ವಿರಕ್ತಮಠದ ಕುಮಾರ ಶ್ರೀಗಳು ಶಾಲೆಯು ಸಮಾಜದ ಅಂಗವಾಗಿರುವದರಿಂದ ಎಸ್ ಡಿ ಎಂ ಸಿ ಯವರು ಹಾಗೂ ಶಿಕ್ಷಣ ಪ್ರೇಮಿಗಳು ಶಾಲಾ ಅಭಿವೃದ್ಧಿಗಾಗಿ ಶ್ರಮಿಸಬೇಕು. 

    ಮಕ್ಕಳು ತಂದೆ- ತಾಯಿಗಳಿಗೆ ಹಾಗೂ ಗುರು ಹಿರಿಯರಿಗೆ ಗೌರವ ಕೊಡಬೇಕು ಉತ್ತಮ ಪ್ರಜೆಗಳಾಗಬೇಕು ಎಂದು ಶೀರ್ವಚನ ನೀಡಿದರು.

ಗ್ರಾಮ ಪಂಚಾಯತ ಅಧ್ಯಕ್ಷ ಶಪೀಸಾಬ ಎರೆಮನಿ  ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ. ಅಧ್ಯಕ್ಷರಾದ ಫಕ್ಕೀರಸಿಂಗ್ ಕಹಾರ್, ಆರ್ ವಿ ಉಳ್ಳಾಗಡ್ಡಿ ಹಾಗೂ ನಿಂಗರಾಜ ಓಂಕಾರಣ್ಣನವರ, ಮುಖ್ಯೋಪಾಧ್ಯಾಯರಾದ  ಶ್ರೀಮತಿ ಕೆ ಎನ್ ಮ್ಯಾಗೇರಿ, ಜಿ.ಎನ್ ಗೊರವರ, ಸಿ.ಆರ್.ಪಿ. ಬಿ.ಆರ್.ನದಾಫ ಇತರರು ಉಪಸ್ಥಿತರಿದ್ದರು.