ಮುಂಬೈ, ಡಿ 1- ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ನೇಮಕಗೊಂಡಿದ್ದಾರೆ.ವಿಧಾನಸಭೆಯಲ್ಲಿ ನೂತನ ಸ್ಪೀಕರ್ ನಾನಾ ಪಟೋಲ್ ಭಾನುವಾರ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸಂವಿಧಾನಬದ್ಧವಾಗಿ ವಿಧಾನಸಭೆಯಲ್ಲಿ ಬಿಜೆಪಿಗೆ ವಿರೋಧಪಕ್ಷದ ಮಾನ್ಯತೆ ನೀಡಲಾಗಿದ್ದು, ವಿರೋಧಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ನೇಮಕಗೊಂಡಿದ್ದಾರೆ ಎಂದು ಅವರು ಸದಸ್ಯರ ಕರಡಾತನ ನಡುವೆ ಪ್ರಕಟಿಸಿದರು .
ಸ್ಪೀಕರ್ ಅಧಿಕೃತವಾಗಿ ಫಡ್ನವಿಸ್ ಹೆಸರು ಪ್ರಕಟಣೆ ಮಾಡಿದ ನಂತರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಅನೇಕ ಸಚಿವರು ದೇವೇಂದ್ರ ಫಡ್ನವಿಸ್ ಅವರನ್ನು ಅಭಿನಂದಿಸಿ, ಸರ್ಕಾರದ ಆಡಳಿತ ಯಂತ್ರ ಸುಗಮವಾಗಿ ಸಾಗಲು ಸಹಕಾರ ನೀಡುವಂತೆ ಮನವಿ ಮಾಡಿದರು.