ಅಭಿವೃದ್ದಿ ಕಾಮಗಾರಿ ಚಾಲನೆ

ಲೋಕದರ್ಶನ ವರದಿ

ಸಂಬರಗಿ 23: ಮಾಯನಟ್ಟಿ ಗ್ರಾಮದಲ್ಲಿ ಶಾಸಕರಾದ ಶ್ರೀಮಂತ ಪಾಟೀಲ ಇವರು ಪ್ರಥಮ ಬಾರಿ ಆಗಮಣದ ನಂತರ ಅಭಿವೃದ್ದಿ ಕಾಮಗಾರಿ ಚಾಲನೆ ನೀಡಿದ ನಂತರ ಗ್ರಾಮಸ್ಥರ ಪರವಾಗಿ ಸದಾಶಿವ ನಾಯಿಕ ಹಾಗೂ ಗ್ರಾಮಸ್ಥರಿಂದ ಸತ್ಕರಿಸಿ ಗ್ರಾಮದ ಸಮಸ್ಯೆಯನ್ನು ತಿಳಿಸಿದರು. 

ಈ ವೇಳೆ ಗ್ರಾಮದ ಗಣ್ಯರಾದ ಸದಾಶಿವ ನಾಯಿಕ ಮಾತನಾಡಿ ಮಾಯನಟ್ಟಿಯಿಂದ ತೆರವಟ್ಟಿ ಗ್ರಾಮಕ್ಕೆ ರಸ್ತೆ ಪ್ರಾರಂಭ ಮಾಡಬೇಕು, ಮಾಯನಟ್ಟಿ ಅಗ್ರಾಣಿ ನದಿಗೆ ಬಾಂದಾರ ನಿಮರ್ಾಣ ಮಾಡಬೇಕು ಹೀಗೆ ಹಲವಾರು ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು. 

ಈ ವೇಳೆ ಶಾಸಕರಾದ ಶ್ರೀಮಂತ ಪಾಟೀಲ ಮಾತನಾಡಿ ಏನೇ ಸಮಸ್ಯೆ ಇದ್ದರೆ ಗ್ರಾಮಸ್ಥರು ನನ್ನನ್ನು ನೇರವಾಗಿ ಸಂಪರ್ಕಿಸಬೇಕು. ಸಮಸ್ಯೆ ಕೇಳಲು ಹೇಳಲು ನಾನು ಸದಾ ಸಿದ್ದವಾಗಿದ್ದೇನೆ. ಯಾವುದೇ ಪ್ರಕಾರದ ಪಕ್ಷಪಾತ ಇಲ್ಲ ಎಂದು ಅವರು ಗ್ರಾಮಸ್ಥರಿಗೆ ಹೇಳಿದರು. ಕರಿಮಸೂತಿ ಯಾತನೀತರರಾವರಿ ಯೋಜನೆ ಮುಖಾಂತರ ಪಾರ್ಥನಹಳ್ಳಿ, ಗುಂಡೇವಾಡಿ, ಮಾಯನಟ್ಟಿ ಹಾಗೂ ಚಮಕೇರಿಯ ಕೆಲಭಾಗಗಳು ಕಾಲುವೆ ಮುಖಾಂತರ ನೀರು ಹರಿಯಿಸಿ ಅನುಕೂಲ ಮಾಡುತ್ತೇನೆಂದು ಅವರು ಹೇಳಿದರು. ಈ ವೇಳೆ ಆರ್.ಎಮ್.ಪಾಟೀಲ, ಮಹಾದೇವ ಕೋರೆ, ಈಶ್ವರ ಮುಜಗಣ್ಣವರ, ಅಮಗೊಂಡ ಬಳೋಲ, ಸಿದರಾಯ ತೇಲಿ, ಹೊಳೆಪ್ಪಾ ತೇಲಿ, ಅಪ್ಪಣ್ಣಾ ಮುಜನಗಣ್ಣವರ, ರಾಜು ಚವಾಣ, ಶಿವಾನಂದ ಮುಜಗಣ್ಣವರ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.