ಸಾಮಾಜಿಕ ಭದ್ರತೆಯಿಂದ ದೇಶದ ಅಭಿವೃದ್ಧಿ ವೃದ್ಧಿಸುತ್ತದೆ : ಪ್ರೊ.ಮೃತ್ಯುಂಜಯ

ಲೋಕದರ್ಶನ ವರದಿ

ಬೆಳಗಾವಿ,27: ಭಾರತದಲ್ಲಿ ಸಾಮಾಜಿಕವಾಗಿ ಮತ್ತು ಆಥರ್ಿಕವಾಗಿ ಹಿಂದುಳಿದ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಹೊಸ ಯೋಜನೆಗಳ ಮೂಲಕ ಅವರಿಗೆ ಸಾಮಾಜಿಕ ಮತ್ತುಆಥರ್ಿಕ ಭದ್ರತೆಯ ಅಸ್ತ್ರ ನೀಡಿದಲ್ಲಿ ಸಶಕ್ತ ಭಾರತ ನಿಮರ್ಾಣ ಮಾಡಲು ಸಾಧ್ಯವಾಗುತ್ತದೆ. ಸಂಘಟಿತ ವಲಯದಲ್ಲಿರುವ ಕೇವಲ ಶೇ 15 ಪ್ರತಿಶತಜನರಿಗೆ ಮಾತ್ರ ಸಕರ್ಾರವು ಸಾಮಾಜಿಕ/ಆಥರ್ಿಕ ಭದ್ರತೆ ನೀಡುತ್ತಿದೆ. ಭಾರತವುತನ್ನ ಜಿ.ಡಿ.ಪಿ.ಯ ಕೇವಲ 4.85% ರಷ್ಟು ಪಾಲನ್ನು ಸಾಮಾಜಿಕ ಭದ್ರತೆಗೆ ವಿನಿಯೋಗಿಸುತ್ತದೆ ಇದು ಏಷಿಯಾ ಖಂಡದಲ್ಲಿಯೇ ಅತೀಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭಾರತವು ಅಭಿವೃದ್ಧಿ ಹೊಂದಿದರಾಷ್ಟ್ರ ನಿಜ ಆದರೆ ಕಲ್ಯಾಣ ರಾಷ್ಟ್ರವಾಗುವತ್ತ ಹೆಜ್ಜೆ ಇಡುತ್ತಿಲ್ಲವೆಂದು ಪ್ರೊ.ಮೃತ್ಯುಂಜಯ, ನಿವೃತ್ತ ನಿದರ್ೇಶಕರು, ಓಚಿಣಠಟಿಚಿಟ ಂರಡಿಛಿಣಟಣಣಡಿಜ ಟಿಟಿಠತಚಿಣಠಟಿ ಕಡಿಠರಿಜಛಿಣ (ಅಂಖ)ನವದೆಹಲಿ ಇವರು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ 'ಭಾರತದಲ್ಲಿ ಸಾಮಾಜಿ ಭದ್ರತೆ: ಸಮಸ್ಯೆಗಳು ಮತ್ತು ಸವಾಲುಗಳು" ಎಂಬ ವಿಷಯ ಕುರಿತಂತೆ ಅಖಖಖ, ಓಜತಿ ಆಜಟ ಇವರ ಪ್ರಾಯೋಜಕತ್ವದಲ್ಲಿ ದಿ. 27ರಂದು ಕುವೆಂಪು ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ವಿಚಾರ ಸಂಕೀರಣದ ಉದ್ಘಾಟಿಸಿ ಮಾತನಾಡಿದರು. 

ಸಾಮಾಜಿಕ ಭದ್ರತೆ ಅಡಿಯಲ್ಲಿ ದೇಶದ ಎಲ್ಲ ನಾಗರಿಕರನ್ನು ಸೇರಿಸುವುದರ ಮೂಲಕ ಭಾರತವು ಅಭಿವೃದ್ಧಿ ಹೊಂದುವುದರ ಜೊತೆಗೆ ಕಲ್ಯಾಣ ರಾಷ್ಟ್ರವಾಗುವುದೆಂದು ವಿಶ್ವಾಸ ವ್ಯಕ್ತಪಡಿಸುತ್ತ ಈ ವಿಚಾರ ಸಂಕಿರಣದಲ್ಲಿ ಹೊಸ ಚಚರ್ೆಗಳು ನಡೆದು ಸಕರ್ಾರಕ್ಕೆ ಸಲಹೆ ನೀಡುವಲ್ಲಿವಿಚಾರ ಸಂಕಿರಣವು ಯಶಸ್ವಿಯಾಗಲೆಂದು ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಎಸ್.ಬಿ.ಹೊಸಮನಿರವರು ಹಾರೈಸಿದರು. ಈ ಎರಡು ದಿನಗಳ ವಿಚಾರ ಸಂಕಿರಣದಲ್ಲಿ 130 ಸಂಶೋಧನಾ ಪತ್ರಿಕೆಗಳು ರಾಜ್ಯದ ಮತ್ತುರಾಷ್ಟ್ರದ ಸಾಮಾಜಿಕ ಭದ್ರತೆಗೆ ಹೊಸ ಒಳನೋಟಗಳನ್ನು ನೀಡಬಲ್ಲವುಎಂದು ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಆಡಿರವರು ಅಭಿಪ್ರಾಯಪಟ್ಟರು.

ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಆಡಿರವರು ಸ್ವಾಗತ ಮತ್ತುಪ್ರಾಸ್ತವಿಕ ಭಾಷಣವನ್ನು ಮಾಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಆರು ವರ್ಷಗಳಲ್ಲಿ 08 ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸಿ ಸಂಶೋಧನಾ ಲೇಖನಗಳನ್ನು ಲೋಕಾರ್ಪಣೆಗೊಳಿಸಿದೆ. ಅಲ್ಲದೇ ಅನೇಕ ವಿಷಯ ತಜ್ಞರು ಮತ್ತು ಆಥರ್ಿಕ ಚಿಂತಕರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಚಾರ ಸಂಕಿರಣದ ಸಹ ಸಂಘಟನಾ ಕಾರ್ಯದಶರ್ಿಗಳಾದ ಡಾ.ಕಿರಣಕುಮಾರರವರು ಅತಿಥಿ ಪರಿಚಯಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದಶರ್ಿಗಳಾದ ಡಾ.ಹುಚ್ಚೇಗೌಡ ಅವರು ವಂದನಾರ್ಪಣೆಗಳನ್ನು ಸಲ್ಲಿಸಿದರು. 

ಸಂಶೋಧನಾ ವಿದ್ಯಾಥರ್ಿಯಾದ ನಂದನ ಕಟಾಂಬಳೆ ನಿರೂಪಿಸಿದರು. ಕು.ಸೀಮಾ ಪಾಟೀಲ ಸ್ವಾಗತಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಪರಶುರಾಮ ದುಡಗುಂಟಿಯವರು, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಸಾಬಣ್ಣ ತಳವಾರ, ಹಾಗೂ ಪ್ರೊ.ಡಿ.ಎನ್. ಪಾಟೀಲರವರು ಉಪಸ್ಥಿತರಿದ್ದರು. ರಾಷ್ಟ್ರದ ಬೇರೆ ಬೇರೆ ರಾಜ್ಯಗಳಿಂದ 150 ಪ್ರತಿನಿಧಿಗಳು ಆಗಮಿಸಿದ್ದರು. ಅಲ್ಲದೇ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಹಾಗೂ ಬೇರೆ ವಿಶ್ವವಿದ್ಯಾಲಯದ ವಿಷಯ ತಜ್ಞರು ಹಾಗೂ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.