ಸಮಾಜ ಆರೋಗ್ಯಪೂರ್ಣವಾಗಿದ್ದರೆ ದೇಶದ ಅಭಿವೃದ್ಧಿ: ಆವರಗೊಳ್ಳಶ್ರೀ

ಲೋಕದರ್ಶನವರದಿ

ರಾಣೇಬೆನ್ನೂರು: ಆರೋಗ್ಯ ಪೂರ್ಣ ಸಮಾಜ ನಿಮರ್ಾಣ ಮಾಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲ್ಯಾಘನೀಯ. 1401 ನೇ ಮದ್ಯವರ್ಜನ ಶಿಬಿರ ನಡೆಸುವ ಮೂಲಕ ಮದ್ಯ ಸೇವನೆಯಿಂದ ಬಾಳು ಹಾಳುಮಾಡಿಕೊಂಡಿದ್ದ ಲಕ್ಷಾಂತರ ಜನರ ಬಾಳು ಮತ್ತೆ ಅರೋಗ್ಯವಂತರಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಆವರಗೊಳ್ಳ ಪುರವರ್ಗದ ಮಠದ ಓಂಕಾರ ಸ್ವಾಮೀಜಿ ಹೇಳಿದರು. 

ಅವರು ಇಲ್ಲಿನ ಬನಶಂಕರಿ ನಗರದ ಮಹದೇವ ನಾಯ್ಕ ಧರ್ಮಛತ್ರದಲ್ಲಿ ಏಳು ದಿನಗಳ ವರೆಗೆ ಧರ್ಮಸ್ಥಳ ಗ್ರಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 1401 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೆರೆ ಪ್ರವಾಹದಿಂದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕುಟುಂಬಗಳ ಬೀದಿ ಪಾಲಾಗಿದ್ದವು.       

      ಅವರೆಲ್ಲರೂ ಮತ್ತೆ ಹೊಸದಾಗಿ ಜೀವನ ರೂಪಿಸಿಕೊಳ್ಳಲು ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸಕರ್ಾರಕ್ಕೆ ಮೊತ್ತ 25 ಕೋಟಿ ಹಣ ದೇಣಿಗೆ ನೀಡುವ ಮೂಲಕ ಸಮಾಜ ನಿಮರ್ಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. 

     ಶಿಬಿರದಲ್ಲಿ 65ಕ್ಕೂ ಹೆಚ್ಚು ಮದ್ಯವ್ಯಸನಿ ಶಿಬಿರಾಥರ್ಿಗಳಿಗೆ ಯೋಗ, ವೈದ್ಯಕೀಯ ತಪಾಷಣೆ, ಮದ್ಯ ವ್ಯಸನದಿಂದಾಗುವ ಪರಿಣಾಮಗಳ ಕುರಿತು ನಾಟಕ, ಹಾಸ್ಯ ಭಜನೆ, ಉಪನ್ಯಾಸ, ಸಾಂಸ್ಕೃತಿಕ, ವೈಯಕ್ತಿಕ ಸಲಹೆ, ಶಾರೀರಿಕ, ಗುಂಪು ಚಚರ್ೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಕೌಟಂಬಿಕ ಸಲಹೆ, ಶ್ರಮದಾನದ ಮೂಲಕ ಮದ್ಯವ್ಯಸನಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬಿ ಅವರನ್ನು ಮದ್ಯವ್ಯಸನದಿಂದ ಮುಕ್ತರನ್ನಾಗಿಸಲಾಗದೆ ಎಂದು ಶ್ರೀಗಳು ನುಡಿದರು. 

ವರ್ತಕ ಬಸವರಾಜ ಪಟ್ಟಣಶೆಟ್ಟಿ, ಸಿ.ವಿ.ರಾಮಸ್ವಾಮಿ, ದುಗ್ಗೇಗೌಡ, ಮುತ್ತಣ್ಣ ಯಲಿಗಾರ, ಡಾ| ಸಂಜಯ ನಾಯ್ಕ, ಮಾರ್ಕಂಡಪ್ಪ ನೇಕಾರ, ್ಷ ನಿತ್ಯಾನಂದ ಕುಂದಾಪುರ, ಭಾರತಿ ಜಂಬಗಿ, ಶಶಿಕಲಾ, ಚಂದ್ರಪ್ಪ ಬೇಡರ, ಬಸವರಾಜ ಹುಲ್ಲತ್ತಿ, ಕೊಟ್ರೇಶ್ ಯಮ್ಮಿ, ವಿವೇಕ ಪಾಯಸ್, ಮಾಧವ ನಾಯಕ್, ನಂದಕುಮಾರ, ಮಂಜುನಾಥ ಎಸ್.ವಿ ಇದ್ದರು.